ಮೈಸೂರು, ಜೂ.04, 2019 : (www.justkannada.in news) : ವಿವಿಧ ಜಾತಿ ಸಮುದಾಯಗಳ ಕುಲಶಾಸ್ತ್ರೀಯ ಅಧ್ಯಯನ ಕಾರ್ಯಕ್ಕಾಗಿ ಮಾಹಿತಿ ಸಂಗ್ರಹಗಾರರನ್ನು ಹೊರ ಸಂಪನ್ಮೂಲ ಸೇವೆ ಮೂಲಕ ನೇಮಕ ಮಾಡಲು ಅರ್ಜಿ ಆಹ್ವಾನಿಸಲಾಗಿದೆ.
ಈ ಸಂಬಂಧ ಮೈಸೂರಿನ ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆ ವತಿಯಿಂದ ಅರ್ಜಿ ಆಹ್ವಾನಿಸಲಾಗಿದೆ. ರಾಜ್ಯ ಸರಕಾರದ ಆದೇಶದನ್ವಯ ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆ ವತಿಯಿಂದ ರಾಜ್ಯದಲ್ಲಿನ ವಿವಿಧ ಜಾತಿ/ ಸಮುದಾಯಗಳ ಕುಲಶಾಸ್ತ್ರೀಯ ಅಧ್ಯಯನ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗಿದೆ. ಈ ಅಧ್ಯಯನ ಕಾರ್ಯಕ್ಕೆ ಅಗತ್ಯವಿರುವ ಮಾಹಿತಿ ಸಂಗ್ರಹಗಾರರನ್ನು ಹೊರ ಸಂಪನ್ಮೂಲ ಸೇವೆ ಮೂಲಕ ಪಡೆಯಲು ಉದ್ದೇಶಿಸಲಾಗಿದೆ.
ಮಾನವಶಾಸ್ತ್ರ, ಸಮಾಜಶಾಸ್ತ್ರ, ಸಮಾಜಕಾರ್ಯ ( MA in Anthropology, Sociology, (MSW)- Social works ) ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಆಯ್ಕೆಗೊಂಡ ಅರ್ಹ ಅಭ್ಯರ್ಥಿಗಳಿಗೆ ಕ್ಷೇತ್ರ ಪ್ರವಾಸದ ಭತ್ಯೆ ಒಳಗೊಂಡಂತೆ ಮಾಸಿಕ ಸಂಚಿತ ವೇತನವಾಗಿ 16,000 ರೂ.ಗಳನ್ನು ನೀಡಲಾಗುವುದು.
ಆಸಕ್ತ ಅಭ್ಯರ್ಥಿಗಳು ಸ್ವವಿವರದ ಮಾಹಿತಿಯನ್ನು ಜೂ. 15 ರೊಳಗೆ ಸಲ್ಲಿಸುವುದು ಎಂದು ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆ ನಿರ್ದೇಶಕ ಟಿ.ಟಿ.ಬಸವನಗೌಡ ಅವರು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ 0821 256 0274 ಸಂಪರ್ಕಿಸುವುದು.
————-
job oppourtunities at Karnataka State Tribal Research Centre, Aniketana Road, Kuvempunagar, Mysore. Prof. T.T. Basavanagowda, Director of Karnataka State Tribal Research Centre,