ಬೆಂಗಳೂರು, ಅಕ್ಟೋಬರ್, 20, 2021 (www.justkannada.in): ಭಾರತ ಕೋವಿಡ್ ಸಾಂಕ್ರಾಮಿಕ ಹಾಗೂ ಲಾಕ್ ಡೌನ್ ಗಳ ಪರಿಣಾಮಗಳಿಂದ ಚೇತರಿಸಿಕೊಂಡು ನಿಧಾನವಾಗಿ ಹಿಂದಿನ ದಿನಗಳಿಗೆ ಮರಳುತ್ತಿರುವಂತೆ, ದೇಶದಲ್ಲಿ ಅಂತರ್ಜಾಲ ತಾಣಗಳಲ್ಲಿನ ಉದ್ಯೋಗಾವಕಾಶಗಳಿಗೆ ಸಂಬಂಧಿಸಿದ ಪೋಸ್ಟ್ ಗಳ ಪ್ರಮಾಣ ಹೆಚ್ಚುತ್ತಿದ್ದು ಸೆಪ್ಟೆಂಬರ್ ತಿಂಗಳಲ್ಲಿ ಉದ್ಯೋಗಾವಕಾಶಗಳ ಪೋಸ್ಟಿಂಗ್ ಪ್ರಮಾಣ ಶೇ.9ಕ್ಕೆ ಏರಿಕೆ ಕಂಡಿದೆ ಎಂದು ಅಧ್ಯಯನ ವರದಿಯೊಂದು ತಿಳಿಸಿದೆ.
ಉದ್ಯೋಗಾವಕಾಶಗಳ ಕುರಿತು ಮಾಹಿತಿ ಒದಗಿಸುವ ಪ್ರಸಿದ್ಧ ಇಂಟೆರ್ನೆಟ್ ವೆಬ್ಸೈಟ್ monster.com ಪ್ರಕಾರ ಸೆಪ್ಟೆಂಬರ್ ಒಂದೇ ತಿಂಗಳಲ್ಲಿ ಉದ್ಯೋಗಗಳ ಕುರಿತಾದ ಪೋಸ್ಟಿಂಗ್ ಗಳು ಆಗಸ್ಟ್ ತಿಂಗಳ ಹೋಲಿಕೆಯಲ್ಲಿ ಶೇ.1ರಷ್ಟು ಹೆಚ್ಚಾಗಿದೆಯಂತೆ. ಬೆಂಗಳೂರು ನಗರದಲ್ಲಿ ಶೇ.38ರಷ್ಟು ಉದ್ಯೋಗಾವಕಾಶಗಳು ಹೆಚ್ಚಾಗಿದೆ.
ಅದೇ ರೀತಿ ಇತರೆ ಮಹಾನಗರಗಳಲ್ಲಿಯೂ ಉದ್ಯೋಗಾವಕಾಶಗಳ ಪ್ರಮಾಣ ಹೆಚ್ಚಳವಾಗಿದೆ ಪುಣೆ (ಶೇ.೨೨), ಹೈದ್ರಾಬಾದ್ (ಶೇ.೨೦) ಹಾಗೂ ಚೆನ್ನೈ (ಶೇ.೧೮). ಇದು ಹಿಂದಿನ ವರ್ಷದ ಹೋಲಿಕೆಯಲ್ಲಿ ಉದ್ಯೋಗ ನೇಮಕಾತಿ ಚಟುವಟಿಕೆಯಲ್ಲಿ ಬಲಿಷ್ಠ ಏರಿಕೆಯ ಸೂಚನೆಯಾಗಿದೆ. “ನಾವು ಈ ವರ್ಷದ ಅಂತಿಮ ತ್ರೈಮಾಸಿಕ ಅವಧಿಯನ್ನು ತಲುಪುತ್ತಿದ್ದು ಉದ್ಯೋಗಾವಕಾಶಗಳ ಪ್ರಮಾಣ ಕಳೆದ ಮೂರು ತಿಂಗಳ ಅವಧಿಯಲ್ಲಿ ಶೇ.6ರಷ್ಟು ಹೆಚ್ಚಳ ಕಂಡಿರುವುದು ಶುಭ ಸೂಚನೆಯಾಗಿದೆ,” ಎಂದು monster.com ನ ಸಿಇಒ ಶೇಖರ್ ರ್ಸಿ ಯಾ ಅವರು ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.
ಸೆಪ್ಟೆಂಬರ್ 2021 ರಲ್ಲಿ ಮುದ್ರಣ/ ಪ್ಯಾಕೇಜಿಂಗ್ ಕ್ಷೇತ್ರಗಳ ವಹಿವಾಟಿನ ಪ್ರಮಾಣ (ಶೇ.೧೧) ಹೆಚ್ಚಾಗಿದ್ದು, ಬಿಪಿಒ/ಐಟಿಇಎಸ್ (ಶೇ.೫), ರಫ್ತು/ಆಮದು ಕ್ಷೇತ್ರ (ಶೇ.೪), ರೀಟೆಲ್ (ಶೇ.೨) ಹಾಗೂ ಪ್ರಯಾಣ ಮತ್ತು ಪ್ರವಾಸೋದ್ಯಮ ಕ್ಷೇತ್ರಗಳು (ಶೇ.೨) ಉತ್ತಮ ಬೆಳವಣಿಗೆಗೆ ಸಾಕ್ಷಿಯಾಗಿದೆ.
ಆದರೆ, ಸಿದ್ಧ ಉಡುಪುಗಳ ತಯಾರಿಕೆ/ ಲೆದರ್, ಚಿನ್ನಾಭರಣಗಳ (-ಶೇ.೧೭) ತಯಾರಿಕೆ ಹಾಗೂ ಮಾರಾಟ ಕ್ಷೇತ್ರಗಳಲ್ಲಿ, ಹಬ್ಬದ ಮಾಸದಿಂದಾಗಿ ಕಳೆದ ತಿಂಗಳು ಮಹತ್ತರವಾದ ಮಟ್ಟಿಗೆ ಸುಧಾರಣೆಗೆ ಸಾಕ್ಷಿಯಾಗಿತ್ತು. ಆದರೆ ಈ ತಿಂಗಳು ಪುನಃ ಇಳಿಮುಖವಾಗಿದೆ. ಅದೇ ರೀತಿ ಉತ್ಪಾದನೆ ಹಾಗೂ ತಯಾರಿಕೆ (ಶೇ.೯), ಟೆಲಿಕಾಂ/ಐಎಸ್ಪಿ (ಶೇ.-೩) ಹಾಗೂ ಇಂಧನ/ ಗ್ಯಾಸ್/ ಪೆಟ್ರೋಲಿಯಂ ಹಾಗೂ ವಿದ್ಯುತ್ (ಶೇ.-೩) ಕ್ಷೇತ್ರಗಳ ವಹಿವಾಟು ಇಳಿಕೆಯಾಗಿದ್ದು, ಸೆಪ್ಟೆಂಬರ್ ೨೦೨೧ರಲ್ಲಿ ಉದ್ಯೋಗಾವಕಾಶಗಳ ಪ್ರಮಾಣವು ಇಳಿಮುಖವಾಗಿದೆ.
ಸುದ್ದಿ ಮೂಲ: ಬೆಂಗಳೂರ್ ಮಿರರ್
Key words: Job- post- Bangalore –rise- 38%