ಬೆಂಗಳೂರು, ಅಗಸ್ಟ್ 20 ,2021 (www.justkannada.in): ದೇಶದಲ್ಲಿ ಫ್ಯಾಸಿಸ್ಟ್ ಹಾಗೂ ಮತಾಂಧ ಸಂಸ್ಕೃತಿಯ ಪ್ರಭಾವ ಹೆಚ್ಚಾಗುತ್ತಿದೆ. ಸಣ್ಣ ಹಾಗೂ ಹಿಂದುಳಿದ ಸಮುದಾಯಗಳನ್ನು ಈ ಪ್ಯಾಸಿಷ್ಟ್ ಶಕ್ತಿಗಳು ಸೆಳೆಯುತ್ತಿವೆ, ಈ ಸನ್ನಿವೇಶದಲ್ಲಿ ಈ ಸಣ್ಣ ಸಮುದಾಯಗಳನ್ನು ಕಮೂನಾಲಿಸಂನಿಂದ ಉಳಿಸುವ ಸಲುವಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರಿಕೊಳ್ಳುವ ಮೂಲಕ ಈ ಸಮುದಾಯಗಳ ಅಭಿವೃದ್ಧಿ ಹಾಗೂ ರಾಜಕೀಯ ಪ್ರಾತಿನಿಧ್ಯಕ್ಕಾಗಿ ಶ್ರಮಿಸುವುದಾಗಿ ಡಾ ಸಿ ಎಸ್ ದ್ವಾರಕಾನಾಥ್ ಹೇಳಿದರು.
ಇಂದು ಬೆಂಗಳೂರಿನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಪದಾಧಿಕಾರಿಗಳ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಯಾಗಿ ಅವರು ಮಾತನಾಡಿದರು.
ಸಣ್ಣ ಸಮುದಾಯದ ಸಮಸ್ಯೆಗಳ ನಿವಾರಣೆ ಯ ನಿಟ್ಟಿನಲ್ಲಿ ಕಳೆದ ನಾಲ್ಕೂವರೆ ದಶಕಗಳಿಂದ ಕಾರ್ಯನಿರ್ವಹಿಸುತ್ತಿದ್ದೇನೆ. ದೇಶದಲ್ಲಿ ಇತ್ತೀಚೆಗೆ ಈ ಸಮುದಾಯದ ಪರವಾಗಿ ಧ್ವನಿ ಎತ್ತುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಅದರಲ್ಲೂ ಫ್ಯಾಸಿಸ್ಟ್ ಸಂಸ್ಕ್ರತಿ ಹೆಚ್ಚಾಗಿರುವ ಸಂಧರ್ಭದಲ್ಲಿ ಧ್ವನಿ ಇಲ್ಲದವರ ಪರವಾಗಿ ಧ್ವನಿ ಎತ್ತುವ ಶಕ್ತಿಯನ್ನು ಹೊಂದಿರುವ ಕಾಂಗ್ರೆಸ್ ಪಕ್ಷದ ಜೊತೆಗೆ ಕೈಜೋಡಿಸಿದ್ದೇನೆ. ದೇವರಾಜ್ ಅರಸು ಅವರು ರಾಜಕೀಯ ದಿಂದ ಜಾತಿಗಳ ಸಮೀಕರಣ ಮತ್ತು ಸಂಪನ್ಮೂಲಗಳ ಕ್ರೋಢೀಕರಣ ಸಾಧ್ಯ ಎಂದು ಹೇಳಿದ್ದರು. ಜಾತಿಗಳ ಸಮೀಕರಣ ಹಾಗೂ ಹಿಂದುಳಿದ ಸಮುದಾಯದ ಅಭಿವೃದ್ಧಿಗೆ ಹಾಗೂ ಅವರಿಗೆ ರಾಜಕೀಯ ಪ್ರಾತಿನಿದ್ಯ ದೊರಕಿಸಿಕೊಡುವ ನಿಟ್ಟಿನಲ್ಲಿ ಶ್ರಮಿಸುವುದಾಗಿ ದ್ವಾರಕಾನಾಥ್ ಅಭಿಪ್ರಾಯ ಪಟ್ಟರು.
Key words: Joining – Congress Party – dreaming -giving -political representation -small communities- Dr C S Dwarkanath