ಬೆಂಗಳೂರು,ಜುಲೈ,6,2022(www.justkannada.in): ಪಿಯುಸಿ ವಿದ್ಯಾರ್ಥಿಗಳು ಕಾಲೇಜಿಗೆ ಬೈಕ್ ತರುವಂತಿಲ್ಲ. ಏಕೆಂದರೆ ಎಂದು ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ರವಿಕಾಂತೇಗೌಡ ಹೇಳಿದ್ದಾರೆ. ಡಿಎಲ್ ಪಡೆಯಲು ಅರ್ಹತೆ ಆಗಿರೋದಿಲ್ಲ ಎಂದು ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ರವಿಕಾಂತೇಗೌಡ ತಿಳಿಸಿದ್ದಾರೆ.
ಇಂದು ಮಾತನಾಡಿದ ರವಿಕಾಂತೇಗೌಡ ಅವರು, ವ್ಹೀಲಿಂಗ್ ವಿರುದ್ಧ ವಿಶೇಷ ಅಭಿಯಾನ ನಡೆಸುತ್ತಿದ್ದೇವೆ. ಕಳೆದ ವಾರ 14 ವೀಲಿಂಗ್ ಪ್ರಕರಣ ದಾಖಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಬಂದಿರುವ ದೂರು ಆಧರಿಸಿ 12 ಪ್ರಕರಣಗಳು ದಾಖಲಾಗಿವೆ . ಈ ಪ್ರಕರಣಕ್ಕೆ 5 ರಿಂದ 10ಲಕ್ಷದವರೆಗೆ ಬಾಂಡ್ ಬರೆಸಿಕೊಳ್ಳುತ್ತೇವೆ. ವೀಲಿಂಗ್ ಮಾಡುವವರ ಪೋಷಕರ ಕೌನ್ಸಿಲಿಂಗ್ ಮಾಡುತಿದ್ದೇವೆ ಎಂದರು.
ನಕಲಿ ನಂಬರ್ ಪ್ಲೇಟ್ ಹೊಂದಿರುವ ವಾಹನಗಳು ಹೆಚ್ಚಾಗುತ್ತಿವೆ. ನಕಲಿ ನಂಬರ್ ಪ್ಲೇಟ್ ಹೊಂದಿರುವ ವಾಹನಗಳ ಮಾಲೀಕರನ್ನ ಬಂಧಿಸಿ ಜೈಲಿಗೆ ಕಳಿಸುತ್ತೇವೆ. ಇನ್ನು ಜೂನ್ ನಲ್ಲಿ 22 ಸವಾರರು ಮದ್ಯ ಸೇವಿಸಿ ಅಪಘಾತದದಲ್ಲಿ ಸಾವನ್ನಪ್ಪಿದ್ದಾರೆ. ಯಾರೂ ಕೂಡ ಕುಡಿದು ವಾಹನ ಚಾಲನೆ ಮಾಡಬೇಡಿ ಎಂದು ರವೀಕಾಂತೇಗೌಡ ಹೇಳಿದರು.
Key words: Joint Commissioner of Police- Traffic Division- RaviKanthe Gowda -PU students -bikes – college.