ಮೈಸೂರು,ಸೆಪ್ಟಂಬರ್,5,2024 (www.justkannada.in): ಶತಮಾನದ ಹಿಂದೆಯೇ ಮಹಿಳೆಯರಿಗೆ ಕಡ್ಡಾಯ ಶಿಕ್ಷಣ ಸಿಗಬೇಕೆಂದು ಮೈಸೂರು ಸಂಸ್ಥಾನದಲ್ಲಿ ಮಹಿಳಾ ಶಿಕ್ಷಣ ಸಂಸ್ಥೆಗಳ ಸ್ಥಾಪನೆ ಯೋಜನೆ ರೂಪಿಸಿದವರು ತಾತಯ್ಯನವರು ಎಂದು ಶಾಸಕ ಟಿ.ಎಸ್. ಶ್ರೀವತ್ಸ ಸ್ಮರಿಸಿದರು.
ವೃದ್ಧ ಪಿತಾಮಹ ದಯಾಸಾಗರ ಮೈಸೂರು ಸಂಸ್ಥಾನದ ರಾಜಗುರು ಮಗ್ಗೆ ವೆಂಕಟಕೃಷ್ಣಯ್ಯ ತಾತಯ್ಯ ನವರ180 ನೇ ಜಯಂತಿ ಅಂಗವಾಗಿ ಮೈಸೂರು ನಗರಪಾಲಿಕೆ ವತಿಯಿಂದ ಅನಾಥಾಲಯ ಹಳೇ ವಿದ್ಯಾರ್ಥಿಗಳ ಸಂಘದ ಸಂಯುಕ್ತಾಶ್ರಯದಲ್ಲಿ ನಗರದ ಬಸ್ ನಿಲ್ದಾಣದ ಮುಂಭಾಗದ ತಾತಯ್ಯ ಉದ್ಯಾನವನದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಸಮಾಜದಲ್ಲಿ ಸಮಾನತೆ ಮಹಿಳಾ ಪ್ರಾತಿನಿಧ್ಯ ಮೌಲ್ಯಯುತವಾದ ವಾತಾವರಣ ಹೆಚ್ಚಾಗಲು ಶೈಕ್ಷಣಿಕ ಸಾಂಸ್ಕೃತಿಕ ಯೋಜನೆಯ ಮುನ್ನುಡಿ ಬರೆದವರು ಮಗ್ಗೆ ವೆಂಕಟಕೃಷ್ಣಯ್ಯ ತಾತಯ್ಯರವರು. ಮಹಾತ್ಮ ಗಾಂಧೀಜಿ ರವರು ಮೈಸೂರಿಗೆ ಬಂದಾಗ ತಾತಯ್ಯ ರವರನ್ನ ದಿ ಓಲ್ಡ್ ಮ್ಯಾನ್ ಆಫ್ ಮೈಸೂರ್ ಎಂಪೈರ್ ವೃದ್ಧ ಪಿತಾಮಹ ಎಂದು ಬಣ್ಣಿಸಿದ್ದರು ಎಂದು ಸ್ಮರಿಸಿದರು.
ಕಾರ್ಯಕ್ರಮದಲ್ಲಿ ಅನಾಥಾಲಯ ಹಳೇ ವಿದ್ಯಾರ್ಥಿಗಳ ಸಂಘದ ಕಾರ್ಯದರ್ಶಿ ಸುಂದರೇಶನ್, ಹಿರಿಯ ಮುಖಂಡ ಕೆ. ರಾಘುರಾಂ ವಾಜಪೇಯಿ, ನಗರಪಾಲಿಕೆ ಆಯುಕ್ತ ಅರ್ಷದುಲ್ಲಾ ಷರೀಫ್, ವಲಯ ಉಪ ಆಯುಕ್ತರಾದ ಪ್ರಭಾ, ಇಂಜಿನಿಯರ್ ತೇಜಸ್ವಿನಿ, ಕೆ. ರಘುರಾಂ ವಾಜಪೇಯಿ, ಸುಂದರೇಶನ್, ಜೋಗಿ ಮಂಜು ಅಜಯ್ ಶಾಸ್ತ್ರಿ, ವಿಕ್ರಂ ಅಯ್ಯಂಗಾರ್, ಹೇಮಲತಾ, ಸೌಭಾಗ್ಯಮೂರ್ತಿ, ಡಾ. ಲಕ್ಷ್ಮಿ, ಶಾಂತರಾಜು, ಕೃಷ್ಣಪ್ಪ, ಸತೀಶ್ ಭಟ್, ಮಂಜುನಾಥ ಹೆಗ್ಡೆ, ಶ್ರೀಧರ್, ರಂಗನಾಥ್, ವೆಂಕಟೇಶ್ ಇದ್ದರು.
Key words: Journalist, Bhishma, Tathaiah, Women’s Education, Scheme, MLA T.S. Srivatsa