ಕೊಲೆ ಬೆದರಿಕೆ ಕರೆ; ಪೊಲಿಸರಿಗೆ ದೂರು ನೀಡಿದ ಹಿರಿಯ ಪತ್ರಕರ್ತ ದಿನೇಶ್ ಅಮೀನ್ ಮಟ್ಟು

journalist-denish-amin.mattu-murder-threat-call-police-complaint-bangalore

ಬೆಂಗಳೂರು, ಜ.18, 2020 : (www.justkannada.in news) : ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಾಧ್ಯಮ ಸಲಹೆಗಾರರಾಗಿದ್ದ, ಹಿರಿಯ ಪತ್ರಕರ್ತ ದಿನೇಶ್ ಅಮೀನ್ ಮಟ್ಟು, ತಮಗೆ ಕೊಲೆ ಬೆದರಿಕೆ ಕರೆ ಬಂದಿದೆ ಎಂದು ಹೇಳಿ ಪೊಲೀಸರಿಗೆ ದೂರು ನೀಡಿದ್ದಾರೆ.

ಜ. 14 ರಂದು ಬೆಂಗಳೂರಿನ ಡಿ.ಜಿ.ಹಳ್ಳಿ ಠಾಣಾಧಿಕಾರಿಗೆ ಈ ಸಂಬಂಧ ದೂರು ನೀಡಿದ್ದು, ಅದರ ವಿವರ ಹೀಗಿದೆ.

ಜ.11 ರಂದು ಬಿಲ್ಲವ-ಮುಸ್ಲೀಂ ಸಮಾವೇಶ ಆಯೋಜಿಸಲಾಗಿತ್ತು. ಈ ಸಮಾವೇಶದಲ್ಲಿ ನಾನು ಮತ್ತು ಮಾಜಿ ಸಚಿವ ವಿನಯ್ ಸೊರಕೆ ಅತಿಥಿಗಳು. ಈ ಕಾರ್ಯಕ್ರಮದ ಆಹ್ವಾನ ಪತ್ರ ನೋಡಿದ ಪುಣೆ ಬಿಲ್ಲವ ಸಂಘದ ಅಧ್ಯಕ್ಷ ವಿಶ್ವನಾಥ ಪೂಜಾರಿ, ಜ. 4 ರಂದು ರಾತ್ರಿ 10.55 ಕ್ಕೆ ದೂರವಾಣಿ ಕರೆ ನನಗೆ ಮಾಡಿ ಅವಾಚ್ಯ ಶಬ್ಧಗಳಿಂದ ನಿಂದಿಸಿದ. ಜತೆಗೆ ವಿನಯ್ ಸೊರಕೆ ಅವರ ವಿರುದ್ಧವು ಹರಿಹಾಯ್ದ. ನೀವು ಸಮಾರಂಭದಲ್ಲಿ ಭಾಗವಹಿಸಿದರೆ ಗುಂಡು ಹೊಡೆದು ಸಾಯಿಸುವುದಾಗಿ ಬೆದರಿಕೆ ಹಾಕಿದ ಎಂದು ದೂರಿನಲ್ಲಿ ಅಮೀನ್ ಮಟ್ಟು ದೂರಿದ್ದಾರೆ.

journalist-denish-amin.mattu-murder-threat-call-police-complaint-bangalore

ನನಗೆ ಪ್ರಾಣಭಯವೊಡ್ಡಿ, ನನ್ನ ತಾಯಿಯನ್ನು ನಿಂದಿಸಿದ್ದಲ್ಲದೆ ಕೋಮು ಸಂಘರ್ಷಕ್ಕೆ ಕಾರಣವಾಗುವಂತೆ ಪ್ರಚೋದನೆ ಮಾಡಿದ ವಿಶ್ವನಾಥ ಪೂಜಾರಿ ಎಂಬಾತನ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು ಎಂದು ಪತ್ರದಲ್ಲಿ ದಿನೇಶ್ ಮಟ್ಟು ಒತ್ತಾಯಿಸಿದ್ದಾರೆ.

key words : journalist-denish-amin.mattu-murder-threat-call-police-complaint-bangalore