ಮೈಸೂರು, ಜ.೧೦, ೨೦೨೫ : ಮನೆಗೆ ಅಕ್ರಮವಾಗಿ ಪ್ರವೇಶಿಸಿ ಮಹಿಳೆಯ ವಿರುದ್ಧ ವೇಶ್ಯಾವಾಟಿಕೆ ಆರೋಪ ಹೊರಸಿ ಆಕೆಗೆ ಬೆದರಿಕೆಯೊಡ್ಡಿ ಚಿನ್ನದ ಓಲೆ ಕಸಿದುಕೊಂಡ ಆರೋಪದ ಮೇರೆಗೆ ಪೊಲೀಸ್ ಕಾನ್‌ಸ್ಟೇಬಲ್ ಎಂದು ಹೇಳಿಕೊಂಡಿದ್ದ ವ್ಯಕ್ತಿ ಹಾಗೂ ಇಬ್ಬರು ಪತ್ರಕರ್ತರನ್ನು ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.
ಕೆ.ಎಚ್.ಹನುಮಂತರಾಜ್, ಪತ್ರಕರ್ತರಾದ ರವಿಚಂದ್ರ ಹಂಚ್ಯಾ ಹಾಗೂ ಮಂಜುನಾಥ್ ಬಂಧಿತರು. ಮತ್ತೊಬ್ಬ ಪತ್ರಕರ್ತ ಸೂರ್ಯವರ್ಧನ್, ಯೋಗೇಶ್ ಹಾಗೂ ದೊರೆಸ್ವಾಮಿ ತಲೆಮರೆಸಿಕೊಂಡಿದ್ದಾರೆ.
ಬಂಧಿತರನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದ್ದು, ಪ್ರಕರಣದಲ್ಲಿ ಭಾಗಿಯಾಗಿ ತಲೆ ಮರೆಸಿಕೊಂಡಿರುವ ಮೂವರ ಬಂಧನಕ್ಕೆ ಹೆಬ್ಬಾಳ ಠಾಣೆ ಪೊಲೀಸರು ಬಲೆ ಬೀಸಿದ್ದಾರೆ.
ಘಟನೆ ಹಿನ್ನೆಲೆ:
ಮಾಧ್ಯಮದ ಹೆಸರೇಳಿಕೊಂಡ ಈ ಆರೋಪಿಗಳು ಡಿ.೨೮ ರಂದು ಸಂಜೆ ನಗರದ ಹೆಬ್ಬಾಳಿನ ಮಹಿಳೆಯ ಮನೆಗೆ ತೆರಳಿ, ನೀವು ಮನೆಯಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದೀರಿ ಎಂದು ಬೆದರಿಸಿ, ನಮ್ಮೊಂದಿಗೆ ಪೊಲೀಸರೂ ಬಂದಿದ್ದಾರೆ. ನಿಮ್ಮ ವಿರುದ್ಧ ಪ್ರಕರಣ ದಾಖಲಿಸುತ್ತೇವೆ ಎಂಬುದಾಗಿ ಭಯ ಹುಟ್ಟಿಸಿದರು ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.
ನಾನು ವೇಶ್ಯಾವಾಟಿಕೆ ನಡೆಸುತ್ತಿಲ್ಲ ಎಂದರೂ ಒಪ್ಪದ ಅವರು, ಈ ವಿಚಾರವನ್ನು ಎಲ್ಲಿಯೂ ಹೇಳದಿರಲು ೧ ಲಕ್ಷ ರೂ. ಹಣ ನೀಡಬೇಕು ಎಂದು ಬೇಡಿಕೆ ಒಡ್ಡಿದರು. ನನ್ನ ಬಳಿ ಅಷ್ಟು ಹಣವಿಲ್ಲವೆಂದಾಗ, ಆ ಮಹಿಳೆಯ ಕಿವಿಯ ಚಿನ್ನದ ಓಲೆಯನ್ನು ಬಲವಂತದಿಂದ ಬಿಚ್ಚಿಸಿ ಪಡೆದರು ಎಂದು ದೂರಿನಲ್ಲಿ ತಿಳಿಸಲಾಗಿದೆ.
ನಂತರ ಹಣವನ್ನು ಆದಷ್ಟು ಬೇಗ ನೀಡುವಂತೆ ತಿಳಿಸಿ ಅವರು ಅಲ್ಲಿಂದ ತೆರಳಿದ್ದರು. ಘಟನೆಯ ಬಳಿಕ ದೂರು ನೀಡಿದ್ದು, ಸಮಸ್ಯೆಯಾಗುತ್ತದೆ ಎಂಬ ಕಾರಣಕ್ಕೆ ಕಿವಿಯೋಲೆ ನೀಡಿರುವ ವಿಚಾರವನ್ನು ಮನೆಯಲ್ಲಿ ತಿಳಿಸಿರಲಿಲ್ಲ. ಅವರನ್ನು ಕರೆದು ಎಚ್ಚರಿಕೆ ನೀಡುವಂತೆ ಪೊಲೀಸರಲ್ಲಿ ಮನವಿ ಮಾಡಿದ್ದೆ. ನಂತರ ಆರೋಪಿಗಳು ಓಲೆ ವಾಪಸ್ ನೀಡಿ, ೧ ಲಕ್ಷ ರೂ. ನೀಡುವಂತೆ ಬೆದರಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದು, ತಲೆಮರೆಸಿಕೊಂಡಿರುವವರ ಪತ್ತೆಗೆ ಮುಂದಾಗಿದ್ದಾರೆ.
key words: two journalists, one person arrested, blackmailing
SUMMARY:
A person and two journalists have been arrested for allegedly blackmailing a woman. Police constable K H Hanumantharaj, journalists Ravichandra Hanchya and Manjunath have been arrested. Another journalist Suryavardhan, constables Yogesh and Doreswamy are absconding.