ರಾಜ್ಯಸಭೆ ಸಭಾನಾಯಕರಾಗಿ ಜೆ.ಪಿ ನಡ್ಡಾ ನೇಮಕ

ನವದೆಹಲಿ,ಜೂನ್,24,2024 (www.justkannada.in): ಕೇಂದ್ರ ಸಚಿವ ಜೆ.ಪಿ. ನಡ್ಡಾ ಅವರನ್ನು ರಾಜ್ಯಸಭೆಯ ಸಭಾನಾಯಕರನ್ನಾಗಿ ಆಯ್ಕೆ ಮಾಡಲಾಗಿದೆ.

ಕೇಂದ್ರ ಸಚಿವರಾದ ಕಿರಣ್‌ ರಿಜಿಜು ಮತ್ತು ಪ್ರಲ್ಹಾದ ಜೋಶಿ ಅವರೊಂದಿಗೆ ನಡೆದ ಸಭೆಯಲ್ಲಿ ಜೆ.ಪಿ. ನಡ್ಡಾ ಅವರನ್ನು ರಾಜ್ಯಸಭೆಯ ಸಭಾನಾಯಕರನ್ನಾಗಿ ಮಾಡಲು ನಿರ್ಧಾರ ಕೈಗೊಳ್ಳಲಾಗಿದೆ. ಈ ಹಿಂದೆ ಪಿಯೂಷ್‌ ಗೋಯಲ್‌ ಅವರು ರಾಜ್ಯಸಭೆ ಸಭಾನಾಯಕರಾಗಿದ್ದರು. ಇದೀಗ ಇವರ ಬದಲಿಗೆ ಜೆ.ಪಿ ನಡ್ಡಾ ಅವರನ್ನ ರಾಜ್ಯಸಭೆಯ ಸಭಾನಾಯಕರಾಗಿ ಆಯ್ಕೆ ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಪ್ರಧಾನಿ ನರೇಂದ್ರ ಮೋದಿ ಸಂಪುಟದಲ್ಲಿ ನಡ್ಡಾ ಅವರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವರಾಗಿದ್ದಾರೆ.

Key words: JP Nadda, appointed, Speaker , Rajya Sabha