ಬೆಂಗಳೂರು, ಡಿಸೆಂಬರ್ 11, 2021 (www.justkannada.in): RRR ಸಿನಿಮಾಗೆ ಜೂ. ಎನ್ ಟಿ ಆರ್ ಕನ್ನಡದಲ್ಲೇ ಡಬ್ ಮಾಡಿದ್ದಾರೆ.
ಸಾಕಷ್ಟು ಸದ್ದು ಮಾಡುತ್ತಿರುವ ಸಿನಿಮಾದ ಒರಿಜಿನಲ್ ತೆಲುಗಿನ ಟ್ರೇಲರ್ ಯೂಟ್ಯೂಬ್ನಲ್ಲಿ ಒಂದೇ ದಿನದಲ್ಲಿ ಎರಡು ಕೋಟಿಗೂ ಹೆಚ್ಚು ವೀಕ್ಷಣೆ ಪಡೆದಿದೆ.
ಹಿಂದಿ, ಕನ್ನಡ, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲೂ ಸಿನಿಮಾ ಡಬ್ ಆಗುತ್ತಿದೆ. ಈ ಭಾಷೆಗಳಲ್ಲೂ ಟ್ರೇಲರ್ ಲಾಂಚ್ ಆಗಿದೆ.
ಕನ್ನಡದ ಆರ್ಆರ್ಆರ್ ಟ್ರೇಲರ್ನಲ್ಲಿ ಜೂನಿಯರ್ ಎನ್ಟಿಆರ್ ಮತ್ತು ರಾಮಚರಣ್ ತೇಜಾ ಅವರು ತಮ್ಮ ಪಾತ್ರಗಳಿಗೆ ತಾವೇ ಧ್ವನಿ ಕೊಟ್ಟಿದ್ಧಾರೆ.
ಒರಾಯನ್ ಮಾಲ್ ಪಿವಿಆರ್ನಲ್ಲಿ ಆರ್ಆರ್ಆರ್ ಟ್ರೇಲರ್ ಬಿಡುಗಡೆ ನಿಮಿತ್ತ ನಡೆದ ಸಂವಾದ ಕಾರ್ಯಕ್ರಮ ನಡೀತು. ಜೂನಿಯರ್ ಎನ್ಟಿಆರ್ ಅವರು ತಮ್ಮ ಕನ್ನಡ ಡಬಿಂಗ್ ಬಗ್ಗೆ ಮಾತನಾಡಿದ್ದರು.