ಮೈಸೂರು,ಜೂ, 27,2020(www.justkannada.in): ಮೈಸೂರು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ(ಎಪಿಎಂಸಿ) ನಾಮನಿರ್ದೇಶಿತ ನಿರ್ದೇಶಕರನ್ನಾಗಿ ಮಹಾ ನಗರ ಪಾಲಿಕೆ ಮಾಜಿ ಸದಸ್ಯ ಜೆ.ಎಸ್.ಜಗದೀಶ್ ಅವರನ್ನು ನೇಮಕ ಮಾಡಿ ಸರಕಾರ ಆದೇಶ ಹೊರಡಿಸಿದ ಹಿನ್ನಲೆ ಶಾಸಕ ರಾಮದಾಸ್ ಅವರನ್ನ ಜೆ.ಎಸ್.ಜಗದೀಶ್ ಭೇಟಿ ಮಾಡಿ ಕೃತಜ್ಞತೆ ಸಲ್ಲಿಸಿದರು.
ಕೃಷ್ಣರಾಜ ಕ್ಷೇತ್ರದ ಶಾಸಕ ಎಸ್.ಎ. ರಾಮದಾಸ್ ಅವರ ವಿಶೇಷ ಒತ್ತಾಸೆ ಫಲವಾಗಿ ಮೈಸೂರು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ(ಎಪಿಎಂಸಿ) ನಾಮನಿರ್ದೇಶಿತ ನಿರ್ದೇಶಕರನ್ನಾಗಿ ಮಹಾ ನಗರ ಪಾಲಿಕೆ ಮಾಜಿ ಸದಸ್ಯ ಜೆ.ಎಸ್.ಜಗದೀಶ್ ಅವರನ್ನು ನೇಮಕ ಮಾಡಿ ಸರಕಾರ ಆದೇಶ ಹೊರಡಿಸಿದ್ದು, ಈ ಹಿನ್ನಲೆಯಲ್ಲಿ ಜೆ.ಎಸ್. ಜಗದೀಶ್ ಶಾಸಕ ರಾಮದಾಸ್ ಅವರನ್ನ ಭೇಟಿ ಮಾಡಿ ಕೃತಜ್ನತೆ ಸಲ್ಲಿಸಿದರು.
ಹಾಗೆಯೇ ಎ.ಪಿ.ಎಂ.ಸಿ.ಯ ಸರ್ಕಾರದ ನಾಮನಿರ್ದೇಶಿತ ಸದಸ್ಯ ಜೆ.ಎಸ್. ಜಗದೀಶ್ ಅವರು ನಗರದ ಭಾರತೀಯ ಜನತಾ ಪಾರ್ಟಿಯ ಅಧ್ಯಕ್ಷ ಟಿ.ಎಸ್.ಶ್ರೀವತ್ಸ ಮತ್ತು ಗ್ರಾಮಾಂತರ ಅಧ್ಯಕ್ಷರಾದ ಮಹೇಂದ್ರ ರವರನ್ನು ಭೇಟಿ ಮಾಡಿ ಗೌರವಿಸಿ ಅಭಿನಂದಿಸಿದರು.
ಈ ಸಂಧರ್ಭದಲ್ಲಿ ನಗರ ಪ್ರಧಾನ ಕಾರ್ಯದರ್ಶಿ ಸೋಮಸುಂದರ್,ಗಿರೀಧರ್,ವಾಣೀಶ್,ಹಿಂದುಳಿದ ವರ್ಗ ಮೊರ್ಚಾದ ಅಧ್ಯಕ್ಷ ಜೋಗಿಮಂಜು,ಮಹಿಳಾ ಮೊರ್ಚಾ ಅಧ್ಯಕ್ಷೆ ಹೇಮಾ ನಂದೀಶ್, ಮಾಜಿ ನಗರಪಾಲಿಕೆ ಸದಸ್ಯ ಜಯರಾಮ್, ಜಯಶಂಕರ್,ರೇಣುಕಾ ಮುಂತಾದವರು ಇದ್ದರು.
Key words: JS Jagdish-mysore-appointment-APMC- MLA -Ramadas