ಮೈಸೂರು, ಮಾ.11, 2020 : (www.justkannada.in news ) ರೋಗಿಗಳ ಅನುಪಸ್ಥಿತಿಯಲ್ಲಿ ರೋಗಗ್ರಸ್ಥ ವ್ಯಕ್ತಿಯ ಅನುಕರಣೆ ರೂಪದಲ್ಲಿ ಕೃತಕ ಉಸಿರಾಟ, ಅಳು , ಬಿಕ್ಕಳಿಕೆ , ಸ್ರಾವತೆ, ತನ್ನಷ್ಟಕ್ಕೆ ತಾನೆ ಭೌತಿಕ ಅಥವಾ ಔಷಧಿಗೆ ಸ್ಪಂದಿಸುವ ಕೃತಕ ಆಧುನಿಕ ಯಂತ್ರಗಳನ್ನು ಮೈಸೂರಿನ ಜೆಎಸ್ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕ್ಯಾಡೆಮಿ ಸ್ಥಾಪಿಸಿದೆ.
ಅಂದಾಜು 20 ಕೋಟಿ ರೂ. ವೆಚ್ಚದಲ್ಲಿ ಕೌಶಲಯುಕ್ತ ಪ್ರತ್ಯನುಕರಣೆ ಕೇಂದ್ರವನ್ನು (ಸ್ಕಿಲ್ ಅಂಡ್ ಸಿಮುಲೇಶನ್ ಸೆಂಟರ್ ) ಮೈಸೂರಿನ ಎಂ.ಜಿ ರಸ್ತೆಯ ಜೆಎಸ್ಎಸ್ ಆಸ್ಪತ್ರೆಯ ಆವರಣದಲ್ಲಿ ಸುಮಾರು 12,000 ಅಡಿ ಜಾಗದಲ್ಲಿ ಸ್ಥಾಪಿಸಲಾಗಿದೆ. ಮಾ.14 ರಂದು ಈ ಕೇಂದ್ರದ ಉದ್ಘಾಟನೆ ನಡೆಯಲಿದೆ.
ಈ ಸಂಬಂಧ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜೆಎಸ್ಎಸ್ ವಿದ್ಯಾಪೀಠದ ಕಾರ್ಯದರ್ಶಿ ಡಾ.ಸಿ.ಜಿ.ಬೆಟಸೂರುಮಠ್, ಮೆಡಿಕಲ್ ಕಾಲೇಜಿನ ಪ್ರಾಂಶುಪಾಲ ಡಾ.ಎಚ್.ಬಸವನಗೌಡಪ್ಪ ಹಾಗೂ ಸಂಚಾಲಕಿ ಡಾ.ಎಸ್. ಅರ್ಚನ ಮಾಹಿತಿ ನೀಡಿದ್ದು ಹೀಗೆ….
ಈ ಕೃತಕ ಆಧುನಿಕ ಯಂತ್ರಗಳಿಂದ ಹೊರ ಹೊಮ್ಮುವ ಕಾರ್ಯಚರಣೆಯ ಕೌಶಲ ಚತುರತೆಯು ವೈದ್ಯಕೀಯ ಶಿಕ್ಷಣದಲ್ಲಿ ವಿದ್ಯಾರ್ಥಿಗಳಿಗೆ ಹೆಚ್ಚಿನ ನೆರವಾಗುತ್ತದೆ. ಆಧುನಿಕ ವೈದ್ಯಕೀಯ ಶಿಕ್ಷಣ ವಲಯದಲ್ಲಿ ಪ್ರಸ್ತುತ ಸ್ಥಾಪಿಸಿರುವ ಸ್ಕಿಲ್ ಮತ್ತು ಸಿಮುಲೇಶನ್ ಕೇಂದ್ರ, ಆಧುನಿಕ ವೈದ್ಯಕೀಯ ಶಿಕ್ಷಣ ಕ್ಷೇತ್ರದಲ್ಲಿ ಜೆಎಸ್ಎಸ್ ವೈದ್ಯಕೀಯ ಕಾಲೇಜು ಅತ್ಯಾಧುನಿಕವಾಗಿ ಕಾರ್ಯೋನ್ಮುಕವಾಗಿರುವುದಕ್ಕೆ ಸಾಕ್ಷಿಯಂತಿದೆ.
ಸಂಸ್ಥೆಯ ಎಲ್ಲಾ ವೈದ್ಯಕೀಯ ತಂಡದವರಿಗೆ ಈ ನವೀನ ಮಾದರಿಯ ಪ್ರತ್ಯಾನುಕರಣೆ ಯಂತ್ರದ ಬಳಕೆಯ ವಿಧಾನ, ಅನುಕರಣೆ ಅನುಸರಣೆಗಳನ್ನು ವೈವಿಧ್ಯಮಯವಾಗಿ ಅಳವಡಿಸಿ ಜ್ಞಾನಾರ್ಜನೆ ಹಾಗೂ ಕೌಶಲ್ಯ ಹೊಂದಲು ಅನುವು ಮಾಡಿಕೊಟ್ಟಿದೆ.
ಈ ಉಪಕರಣವನ್ನು ಎಲ್ಲಾ ವಯಸ್ಕರ ಮತ್ತು ಮಕ್ಕಳ ಖಾಯಿಲೆಗಳಿಗೆ ಅನುಗುಣವಾಗಿ, ತುರ್ತು ಚಿಕಿತ್ಸಾ ಘಟಕ, ಶಸ್ತ್ರಚಿಕಿತ್ಸಾ ಕೊಠಡಿಗಳಲ್ಲಿ ಅಳವಡಿಸಿ ವೈದ್ಯರುಗಳಿಗೆ ಹೆಚ್ಚಿನ ತರಬೇತಿ ನೀಡಲಾಗುವುದು.
ಆದಾಗ್ಯೂ ಪರಿಣಿತಿ ಹೊಂದಿದ ತರಬೇತಿಗಾರರಂತೆ ಲ್ಯಾಪ್ರೊಸ್ಕೋಪಿ, ಆರ್ಥೋಸ್ಕೋಪಿ, ಎಂಡೋಸ್ಕೋಪಿ, ಕೊಲೆನೊಸ್ಕೋಪಿ, ಬ್ರೋಂಕೋಸ್ಕೋಪಿ ಮತ್ತು ಮೂತ್ರಕೋಶ ಪರೀಕ್ಷಾ ವಿಧಾನಗಳನ್ನು ಅಳವಡಿಸುವಿಕೆಯಲ್ಲಿ ಹೆಚ್ಚಿನ ಪಾತ್ರ ವಹಿಸಿ ಆಯಾಯ ಕ್ರಮಗಳಲ್ಲಿ ನೈಪುಣ್ಯವಾದ ತರಬೇತಿ ಪಡೆಯಲು ಸಾಧ್ಯವಾಗಿದೆ.
ಉದ್ಘಾಟನೆ :
ಮಾ.14 ರಂದು ಬೆಳಗ್ಗೆ 10.30ಕ್ಕೆ ಈ ನೂತನ ಕೇಂದ್ರದ ಉದ್ಘಾಟನೆ ನಡೆಯಲಿದೆ. ಈ ಸಮಾರಂಭದಲ್ಲಿ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನಿಧ್ಯ ವಹಿಸುವರು. ಡಾ. ರಾಕೇಶ್ಕುಮಾರ್ ವತ್ಸ್ ಸೆಕ್ರೆಟರಿ ಜನರಲ್, ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯ, ನವದೆಹಲಿ ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ಅಧ್ಯಕ್ಷತೆ ವಹಿಸುವರು.
ಗ್ರಾಜುಯೇಷನ್ ಡೇ :
ಜೆ.ಎಸ್.ಎಸ್ ವೈದ್ಯಕೀಯ ಮಹಾವಿದ್ಯಾಲಯದ ಪದವಿದರರ ಸತ್ಕಾರ ಕೂಟ ಆಯೋಜಿಸಲಾಗಿದೆ. ಮಾ.13ರಂದು ಸಂಜೆ 4 ಗಂಟೆಗೆ ಜೆಎಸ್ಎಸ್ ಮೆಡಿಕಲ್ ಕಾಲೇಜಿನ ರಾಜೇಂದ್ರ ಸಭಾಭವನದಲ್ಲಿ ಕಾರ್ಯಕ್ರಮ ನಡೆಯಲಿದೆ.
ವೈದ್ಯಕೀಯ ಶಿಕ್ಷಣ ಪೂರ್ಣಗೊಳಿಸಿರುವ ವಿದ್ಯಾರ್ಥಿಗಳಿಗೆ ಪದವಿ.ಪ್ರಧಾನ ಮಾಡಲಾಗುತ್ತದೆ. 202 ವಿದ್ಯಾರ್ಥಿಗಳಿಗೆ ಎಂ.ಬಿ.ಬಿ.ಎಸ್ ಪದವಿ ಪ್ರಧಾನ. 9 ಜನ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಚಿನ್ನದ ಪದಕ ಹಾಗೂ ನಗದು ಬಹುಮಾನ ನೀಡಲಾಗುತ್ತದೆ.
ಶ್ರೀ ದೇಶಿಕೇಂದ್ರ ಸ್ವಾಮೀಜಿಯವರ ಸಾನಿಧ್ಯದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಮಣಿಪಾಲ್ ಉನ್ನತ ಶಿಕ್ಷಣ ಸಂಸ್ಥೆಯ ಉಪಕುಲಪತಿ ಡಾ.ಹೆಚ್.ವಿನೋಧ್ ಭಟ್ ಪದವಿ ಪ್ರಧಾನ ಮಾಡುವರು.
key words : JSS-Medical-college-hospital-mysore-skill.and.simulation.centre-mannequins-trainers
ENGLISH SUMMARY :
JSS Academy of Higher Education & Research, has established a Skill and Simulation Centre set up at a cost of Rs. 20 crores in an area of 12,000 sq.ft at its facility at M.G. Road, Mysuru and will be inaugurated under the gracious presence of His Holiness Sri Shivarathri Deshikendra Mahaswamiji, by Dr Rakesh Kumar Vats, Secretary-General, Medical Council of India, who will be the Chief Guest and Sri V Somanna, Hon’ble Minister for Housing and District Incharge and will be presiding over the function.