ಬೆಂಗಳೂರು, ಅಕ್ಟೋಬರ್,20.2020(www.justkannada.in): ಜಡ್ಜ್ ಮತ್ತು ಮೂವರು ಪೊಲೀಸ್ ಅಧಿಕಾರಿಗೆ ಬೆದರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನ ವಶಕ್ಕೆ ಪಡೆಯಲಾಗಿದ್ದು ಪ್ರಕರಣದ ತನಿಖೆಯನ್ನ ಸಿಸಿಬಿಗೆ ವರ್ಗಾವಣೆ ಮಾಡಲಾಗಿದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ತಿಳಿಸಿದ್ದಾರೆ.
ಸ್ಯಾಂಡಲ್ ವುಡ್ ಡ್ರಗ್ಸ್ ಮಾಫಿಯಾ ನಂಟು ಆರೋಪಕ್ಕೆಸಂಬಂಧಿಸಿದಂತೆ,ನಟಿ ರಾಗಿಣಿ ಹಾಗೂ ನಟಿ ಸಂಜನಾ ಸೇರಿ ಭಾಗಿಯಾಗಿಯಾಗಿರುವ ಎಲ್ಲರಿಗೂ ಜಾಮೀನು ನೀಡಬೇಕು. ಮತ್ತು ಎಲ್ಲಾ ಆರೋಪಿಗಳನ್ನ ಕೇಸ್ ನಿಂದ ವಜಾಗೊಳಿಸಬೇಕು ಎಂದು ಬೆದರಿಕೆ ಪತ್ರ ಬಂದಿತ್ತು. ರಾಗಿಣಿ ಸಂಜನಾಗೆ ಬೇಲ್ ಸಿಗದಿದ್ರೆ , ನೀವು ಹಾಗೂ ನಿಮ್ಮ ಸಂದೀಪ್ ಪಾಟೀಲ್ ಸುಮ್ಮನಿರದಿದ್ರೆ ಕಮಿಷನರ್ ಕಛೇರಿ ಸ್ಪೋಟಿಸುತ್ತೇವೆ ಎಂದು ಪತ್ರ ಬರೆಯಲಾಗಿತ್ತು ಎನ್ನಲಾಗಿದೆ.
ಈ ಕುರಿತು ಮಾತನಾಡಿ ಮಾಹಿತಿ ನೀಡಿರುವ ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್, ಜಡ್ಜ್ ಮತ್ತು ಪೊಲೀಸ್ ಅಧಿಕಾರಿಗಳಿಗೆ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನ ಬಂಧಿಸಲಾಗಿದೆ. ಪ್ರಕರಣವನ್ನು ಹಲಸೂರು ಗೇಟ್ ಪೊಲೀಸ್ ಠಾಣೆಯಿಂದ ಸಿಸಿಬಿಗೆ ವರ್ಗಾಯಿಸಲಾಗಿದ್ದು ಪ್ರಕರಣದ ತನಿಖೆಗೆ ಮೂರು ಸಿಸಿಬಿ ತಂಡ ರಚಿಸಲಾಗಿದೆ ಎಂದು ತಿಳಿಸಿದ್ದಾರೆ.
ಇನ್ನು ಸಿಟಿ ಸಿವಿಲ್ ಕೋರ್ಟ್ ಗೆ ಲೆಟರ್, ಒಂದು ಕವರ್ ಬಂದಿದೆ. ಅದರಲ್ಲಿ ಡಿಟೋನೆಟರ್ ಪತ್ತೆಯಾಗಿದೆ. ಪ್ರಕರಣದ ತನಿಖೆ ಮುಂದಿವರೆದಿದೆ ಎಂದು ತಿಳಿಸಿದ್ದಾರೆ.
Key words: Judge -three –police officer- threaten –Case- probe -transferred – CCB