ಕೋಲಾರ,ಜು,16,2019(www.justkannada.in): ನಾನು ಯಾರಿಗೂ ಸವಾಲು ಹಾಕಿಲ್ಲ. ಇದು ನನ್ನ ಮತ್ತು ಸುಪ್ರೀಂಕೋರ್ಟ್ ನಡುವಿನ ಸಂಘರ್ಷ ಅಲ್ಲ . ನಾನು ಸುಪ್ರೀಂಕೋರ್ಟ್ ಗಿಂತ ದೊಡ್ಡವನಲ್ಲ ಎಂದು ಸ್ಪೀಕರ್ ರಮೇಶ್ ಕುಮಾರ್ ತಿಳಿಸಿದ್ದಾರೆ.
ಅತೃಪ್ತ ಶಾಸಕರ ಅರ್ಜಿ ಬಗ್ಗೆ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ನಾಳೆಗೆ ಆದೇಶ ಕಾಯ್ದಿರಿಸಿದ್ದು ಈ ಬಗ್ಗೆ ಶ್ರೀನಿವಾಸಪುರ ತಾಲೂಕಿನ ಅಡ್ಡಗಲ್ ಗ್ರಾಮದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸ್ಪೀಕರ್ ರಮೇಶ್ ಕುಮಾರ್, ನಾಳಿನ ತೀರ್ಪು ನೋಡಿದ ಬಳಿಕ ಪ್ರತಿಕ್ರಿಯೆ ನೀಡುವೆ . ಸುಪ್ರೀಂಕೋರ್ಟ್ ನಲ್ಲಿ ವಾದ ಪ್ರತಿವಾದ ನಡೆದಿದೆ. ಅದರ ಬಗ್ಗೆ ಅಂತಿಮ ತೀರ್ಮಾನವಾಗುವವರೆಗೂ ಮಾತನಾಡಲ್ಲ. ನಮಗೆ ಕೊಟ್ಟಿರುವ ಜವಾಬ್ದಾರಿಯನ್ನ ನಿರ್ವಹಿಸುತ್ತಿದ್ದೇನೆ. ಇದು ನನ್ನ ಮತ್ತು ಸುಪ್ರೀಂಕೋರ್ಟ್ ನಡುವಿನ ಸಂಘರ್ಷ ಅಲ್ಲ ಎಂದರು.
ಇನ್ನು ಎಸ್ ಐಟಿ ಇಂದ ಶಾಸಕ ರೋಷನ್ ಬೇಗ್ ವಶಕ್ಕೆ ಪಡೆದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸ್ಪೀಕರ್ ರಮೇಶ್ ಕುಮಾರ್, ಎಸ್ ಐಟಿ ಶಾಸಕ ರೋಷನ್ ಬೇಗ್ ರನ್ನ ವಶಕ್ಕೆ ಪಡೆದ ವಿಚಾರ ನನಗೆ ತಿಳಿದಿದೆ. ಎಸ್ ಐಟಿ ಅಧಿಕಾರಿಗಳು ಸ್ಪೀಕರ್ ಕಚೇರಿಗೆ ಮಾಹಿತಿ ನೀಡಿದ್ದಾರೆ. ಶಾಸಕರನ್ನ ವಶಕ್ಕೆ ಪಡೆಯಲು ಸ್ಪೀಕರ್ ಅನುಮತಿ ಬೇಕಿಲ್ಲ. ವಶಕ್ಕೆ ಪಡೆದ 24 ಗಂಟೆಯೊಳಗೆ ಈ ಬಗ್ಗೆ ಸ್ಪೀಕರ್ ಗೆ ಮಾಹಿತಿ ನೀಡಬೇಕು. ಇದನ್ನ ಎಸ್ ಐಟಿ ಮಾಡಿದೆ ಎಂದು ಸ್ಪಷ್ಟನೆ ನೀಡಿದರು.
Key words: Judgment –dissatisfied- legislators-tomorrow- Supreme court-Speaker -Ramesh Kumar