ಉಡುಪಿ,ಅಕ್ಟೋಬರ್,14,2022(www.justkannada.in): ಹಿಜಾಬ್ ವಿವಾದಕ್ಕೆ ಸಂಬಂಧಿಸಿದಂತೆ ನಿನ್ನೆ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಿಂದ ವಿಭಿನ್ನ ತೀರ್ಪು ಹೊರಬಂದ ಹಿನ್ನೆಲೆ ಪ್ರಕರಣವನ್ನ ಸಿಜೆಐ ಪೀಠಕ್ಕೆ ವರ್ಗಾವಣೆ ಮಾಡಲಾಗಿದೆ.
ಈ ಸಂಬಂಧ ಟ್ವೀಟ್ ಮಾಡಿರುವ ಹಿಜಾಬ್ ಹೋರಾಟಗಾರ್ತಿ ಅಲಿಯಾ ಅಸಾದಿ, ಈ ತೀರ್ಪು ಸಂತ್ರಸ್ತ ಹೆಣ್ಣು ಮಕ್ಕಳ ಹಕ್ಕುಗಳನ್ನ ಎತ್ತಿ ಹಿಡಿದಿದೆ. ನ್ಯಾಯಮೂರ್ತಿ ಧುಲಿಯಾ ಹೇಳಿಕೆಯಿಂದ ತೀರ್ಪಿನ ಭರವಸೆ ಬಲಪಡಿಸಿದೆ. ನ್ಯಾಯಯುತ ತೀರ್ಪಿನ ಭರವಸೆಯನ್ನ ಮತ್ತಷ್ಟು ಬಲಪಡಿಸಿದೆ.
ಕನಿಷ್ಟ ಪಕ್ಷ ದಲ್ಲಿ ಸಾಂವಿಧಾನಿಕ ಮೌಲ್ಯ ಮುಂದುವರೆಸಿದೆ. ಸಾವಿರಾರು ವಿದ್ಯಾರ್ಥಿನಿಯರು ಶಿಕ್ಷಣ ಪುನಾರಂಭಿಸಿಲು ಕಾಯುತ್ತಿದ್ದಾರೆ ಎಂದು ಆಲಿಯಾ ಅಸಾದಿ ಟ್ವೀಟ್ ಮಾಡಿದ್ದಾರೆ.
Key words: judgment – rights –girls-Hijab activist- Alia Asadi- tweets – Supreme court- verdict.