ಬೆಂಗಳೂರು,ಸೆಪ್ಟಂಬರ್, 16,2020(www.justkananda.in): ಡ್ರಗ್ಸ್ ದಂಧೆಗೆ ಸ್ಯಾಂಡಲ್ ವುಡ್ ನಂಟು ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ಸಂಜನಾಗೆ ಎರಡು ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿ 1ನೇ ಎಸಿಎಂಎಂ ಕೋರ್ಟ್ ಆದೇಶ ಹೊರಡಿಸಿದೆ.
ಸೆಪ್ಟಂಬರ್ 18 ರವರೆಗೆ ನಟಿ ಸಂಜನಾಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಇಂದು ನಟಿ ಸಂಜನಾರ ಸಿಸಿಬಿ ಕಸ್ಟಡಿ ಅಂತ್ಯವಾದ ಹಿನ್ನೆಲೆ ನಟಿ ಸಂಜನಾರನ್ನ ಕೋರ್ಟ್ ಹಾಜರುಪಡಿಸಲಾಗಿತ್ತು. ಇದೀಗ ನಟಿ ಸಂಜನಾಗೆ 2 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿ ಕೋರ್ಟ್ ಆದೇಶಿಸಿದೆ. ಅಲ್ಲದೆ ಸೆಪ್ಟಂಬರ್ 18 ರಂದು ನಟಿ ಸಂಜನಾರನ್ನ ವಿಶೇಷ ಕೋರ್ಟ್ ಗೆ ಹಾಜರುಪಡಿಸಲು ಸೂಚನೆ ನೀಡಲಾಗಿದೆ.
ಡ್ರಗ್ಸ್ ದಂಧೆಗೆ ಸ್ಯಾಂಡಲ್ ವುಡ್ ನಂಟು ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೊಂದೆಡೆ ಆರೋಪಿಗಳಾದ ವೀರೆನ್ ಖನ್ನಾ , ರವಿಶಂಕರ್ ಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿ ಬೆಂಗಳೂರಿನ 33ನೇ ಸಿಸಿಹೆಚ್ ಕೋರ್ಟ್ ಆದೇಶ ಹೊರಡಿಸಿದೆ.
Key words: Judicial custody -actress -Sanjana -two days.