ಕರ್ತವ್ಯ ನಿರತ  ವೈದ್ಯರ  ವಿರುದ್ಧ ಧರಣಿ, ಪ್ರತಿಭಟನೆ ತರವಲ್ಲ : ಹೈಕೋರ್ಟ್‌  ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್.

Justice Krishna S. Dixit of the Karnataka High Court inaugurated the graduation ceremony 'Vishikhanupravesh' organised by the Government Ayurveda Medical College and Hospital, Mysuru.

 

ಮೈಸೂರು, ಅ,22,2024: (www.justkannada.in news) ಕರ್ತವ್ಯ ನಿರತ  ವೈದ್ಯರ  ವಿರುದ್ಧ ಧರಣಿ, ಪ್ರತಿಭಟನೆ ಮೇಲೆ ನಿರ್ಬಂಧ ಹೇರುವ ಮೂಲಕ ಕರ್ನಾಟಕ ರಾಜ್ಯ ಸರಕಾರ ವೈದ್ಯರ ರಕ್ಷಣೆಗೆ ಕಟಿಬದ್ಧವಾಗಿದೆ. ಇದೊಂದು ಅಮೂಲ್ಯ ಕ್ರಮವಾಗಿದೆ.  ಈ ಹಿನ್ನೆಲೆಯಲ್ಲಿ ಕರ್ನಾಟಕ ಸರಕಾರಕ್ಕೆ ನಿವೆಲ್ಲಾ ಅಭಾರಿಯಾಗಿರಬೇಕು ಎಂದು ಕರ್ನಾಟಕ ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅಭಿಪ್ರಾಯಪಟ್ಟರು.

ಕರ್ನಾಟಕ ರಾಜ್ಯ ಮುಕ್ತ ವಿವಿಯ ಘಟಿಕೋತ್ಸವ ಭವನದಲ್ಲಿ ಇಂದು ಮೈಸೂರಿನ ಸರಕಾರಿಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ವತಿಯಿಂದ ಆಯೋಜಿಸಿದ್ದ ‘ವಿಶಿಖಾನುಪ್ರವೇಶ’ ಪದವಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಯಾವುದೇ ವೃತ್ತಿನಿರತ ವೈದ್ಯರ ವಿರುದ್ಧ ಆರೋಪ, ಅನುಮಾನ ಸಲ್ಲದು. ಅವರ ಕರ್ತವ್ಯದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ, ಧರಣಿ ನಡೆಸುವುದು ತರವಲ್ಲ. ಇದನ್ನು ಮನಗಂಡ ಕರ್ನಾಟಕ ಸರಕಾರ ಕರ್ತವ್ಯ ನಿರತ ವೈದ್ಯರ ರಕ್ಷಣೆ ಸಲುವಾಗಿ ಇದನ್ನು ನಿರ್ಬಂಧಿಸಿದೆ. ದೇಶದ ಕೆಲವೇ ಕೆಲ ರಾಜ್ಯಗಳಲ್ಲಿ ಮಾತ್ರ ಇಂಥ ನಿರ್ಬಂಧವಿದ್ದು, ಕರ್ನಾಟಕದಲ್ಲೂ ಇದು ಜಾರಿಯಲ್ಲಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ವೃತ್ತಿ- ವ್ಯವಹಾರವಲ್ಲ :

ಸಮಾಜದಲ್ಲಿ ವೈದ್ಯನಾಗಿ ಸೇವೆ ಸಲ್ಲಿಸುವುದು ಪುಣ್ಯದ ಕೆಲಸ. ಅದು ಒಂದು ವೃತ್ತಿ. ವ್ಯವಹಾರ ಅಲ್ಲ. ಇಂದು ಜನಸಾಮಾನ್ಯರಿಗೆ ಆಸ್ಪತ್ರೆ ಎಂದರೆ ಬೇರೆಯದೆ ಭಾವನೆ ಇದೆ. ವೈದ್ಯರು ಸೇವಾ ಮನೋಭಾವ ಹೊಂದಿರಬೇಕು. ರೋಗಿಗೆ ಚಿಕಿತ್ಸೆ ನೀಡುವುದು ಪುಣ್ಯದ ಕೆಲಸ. ಅದನ್ನು ವ್ಯಾವಹಾರಿಕವಾಗಿ ನೋಡಬಾರದು. ವೈದ್ಯಕೀಯ ವೃತ್ತಿ ದುಡ್ಡಿಗಾಗಿ ಮಾಡುವ ಕೆಲಸವಲ್ಲ. ಇಂದಿನ ವೈದ್ಯರು, ಆಸ್ಪತ್ರೆಗಳು ರೋಗಿಗಳಿಂದ ಅಗತ್ಯಕ್ಕಿಂತ ಹತ್ತಾರು ಪಟ್ಟು ಹಣವನ್ನು ಪಡೆದುಕೊಳ್ಳುತ್ತಾರೆ ಎಂಬ ಅಸಮಾಧಾನವಿದೆ. ಯುವ ವೈದ್ಯರು ಈ ಅಭಿಪ್ರಾಯವನ್ನು ಸುಳ್ಳು ಮಾಡಬೇಕು. ರೋಗಿಗಳನ್ನು ಪ್ರೀತಿಯಿಂದ ಕಾಣಬೇಕು. ಅವರಿಗೆ ಸೂಕ್ತ ಸಲಹೆ, ಮಾರ್ಗದರ್ಶನ ನೀಡಬೇಕು ಎಂದರು.

ರಾಮಾಯಣಕ್ಕೆ ತಿರುವು ಕೊಟ್ಟ ಶಾಸ್ತ್ರವೆಂದರೆ ಅದು ವೈದ್ಯಶಾಸ್ತ್ರ. ಅಂದು ಸಂಜೀವಿನಿಯನ್ನು ತರದೆ ಹೋಗಿದ್ದರೆ ರಾಮಾಯಣದ ಅಂತ್ಯ ಬೇರೆ ರೀತಿಯಲ್ಲಿ ಆಗುತ್ತಿತ್ತು. ಹಾಗಾಗಿ, ವೈದ್ಯಶಾಸ್ತ್ರ ನಡೆದು ಬಂದಂತಹ ಹಾದಿ ಬಗ್ಗೆ ನಮ್ಮೆಲ್ಲರಿಗೂ ಒಂದು ಗೌರವ ಭಾವನೆ ಇರಬೇಕು ಎಂದರು.

ಸರಕಾರಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ಪ್ರಾಂಶುಪಾಲ ಡಾ.ಗಜಾನನ ಹೆಗಡೆ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಆಯುಷ್ ಇಲಾಖೆ ಆಯುಕ್ತ, ಐಎಫ್‌ ಎಸ್‌ ಅಧಿಕಾರಿ ಡಾ.ಶ್ರೀನಿವಾಸಲು,  ದೂರದರ್ಶನದ ಜನಪ್ರಿಯ ನಿರೂಪಕ ಡಾ.ನಾ.ಸೋಮೇಶ್ವರ, ಸರಕಾರಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ಪ್ರಾಧ್ಯಾಪಕ ಡಾ.ಕೆ.ಶ್ರೀನಿವಾಸ ಯಾದವ್, ಡಾ.ಎಂ.ಡಿ.ಸಂಜಯ್ ಕುಮಾರ್, ಸ್ಥಾನಿಕ ವೈದ್ಯರಾದ ಶಶಿರೇಖಾ ಇತರರು ಹಾಜರಿದ್ದರು.

ಪದವಿ ಪ್ರದಾನ :

ಮೈಸೂರು ಸರಕಾರಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ಒಟ್ಟು 82 ವಿದ್ಯಾರ್ಥಿಗಳಿಗೆ ಕರ್ನಾಟಕ ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್, ಆಯುಷ್ ಇಲಾಖೆಯ ಆಯುಕ್ತ ಡಾ.ಶ್ರೀನಿವಾಸಲು ಪದವಿ ಪ್ರದಾನ ಮಾಡಿದರು.

key words: Justice Krishna S. Dixit of the Karnataka, graduation ceremony, Government Ayurveda Medical College and Hospital, Mysuru.

SUMMARY: 

Justice Krishna S. Dixit of the Karnataka High Court inaugurated the graduation ceremony ‘Vishikhanupravesh’ organised by the Government Ayurveda Medical College and Hospital, Mysuru.