ಸುಪ್ರೀಂಕೋರ್ಟ್ ನ 49ನೇ ಸಿಜೆಐ ಆಗಿ ಜಸ್ಟೀಸ್ ಉದಯ್ ಲಲಿತ್ ನೇಮಕ.

ನವದೆಹಲಿ,ಆಗಸ್ಟ್,10,2022(www.justkannada.in): ಸುಪ್ರೀಂಕೋರ್ಟ್ ನ 49ನೇ ಮುಖ್ಯ ನ್ಯಾಯಮೂರ್ತಿಯಾಗಿ ಜಸ್ಟೀಸ್ ಉದಯ್ ಲಲಿತ್ ಅವರನ್ನ ನೇಮಕ ಮಾಡಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.

ಹಾಲಿ ಸಿಜೆಐ  ಎನ್.ವಿ ರಮಣ ಅವರ ಸೇವಾವಧಿ ಶೀಘ್ರವೇ ಅಂತ್ಯ ಹಿನ್ನೆಲೆ,  ಸುಪ್ರೀಂಕೋರ್ಟ್ ನ 49ನೇ ಮುಖ್ಯ ನ್ಯಾಯಮೂರ್ತಿಯಾಗಿ ಜಸ್ಟೀಸ್ ಉದಯ್ ಲಲಿತ್  ಅವರನ್ನ ನೇಮಿಸಲಾಗಿದೆ. ಎನ್ ವಿ ರಮಣ ಅವರ ಸೇವಾವಧಿ ಮುಗಿದ ಬಳಿ ಸಿಜೆಐ ಆಗಿಉದಯ್ ಲಲಿತ್ ಅವರು ಪದಗ್ರಹಣ ಮಾಡಲಿದ್ದಾರೆ.

ಭಾರತದ 49 ನೇ ಮುಖ್ಯ ನ್ಯಾಯಮೂರ್ತಿಯಾಗಿ ಕಳೆದ ವಾರ ಭಾರತದ ಮುಖ್ಯ ನ್ಯಾಯಮೂರ್ತಿ ಎನ್‌ವಿ ರಮಣ ಅವರು ಉತ್ತರಾಧಿಕಾರಿಯಾಗಿ ನ್ಯಾಯಮೂರ್ತಿ ಲಲಿತ್ ಅವರ ಹೆಸರನ್ನು ಶಿಫಾರಸು ಮಾಡಿದ್ದರು.

Key words: Justice -Uday Lalit – appointed – Supreme Court-49th -CJI