ಬೆಂಗಳೂರು,ಮಾರ್ಚ್,25,2025 (www.justkannada.in): ಹನಿಟ್ರ್ಯಾಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಹಕಾರ ಸಚಿವ ಕೆ.ಎನ್ ರಾಜಣ್ಣ ಅವರು ಇಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರನ್ನ ಭೇಟಿಯಾಗಿದ್ದಾರೆ
ಸಚಿವ ಕೆ.ಎನ್ ರಾಜಣ್ಣ ಅವರಿಗೆ ಹನಿಟ್ರ್ಯಾಪ್ ಮಾಡಲು ಯತ್ನಿಸಲಾಗಿತ್ತು. ಈ ವಿಚಾರ ಅಧಿವೇಶನದಲ್ಲಿ ಪ್ರಸ್ತಾಪವಾಗಿ ಭಾರಿ ಗದ್ದಲ ಉಂಟಾಗಿತ್ತು. ಆದರೂ ಸಚಿವ ಕೆ.ಎನ್ ರಾಜಣ್ಣ ಕಳೆದ ಐದು ದಿನಗಳಿಂದ ಹನಿಟ್ರ್ಯಾಪ್ ಕುರಿತು ದೂರು ನೀಡಿರಲಿಲ್ಲ.
ಇದೀಗ ಇಂದು ನೆಲಮಂಗಲದಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರನ್ನ ಭೇಟಿಯಾಗಿದ್ದು ಸಚಿವ ಕೆ.ಎನ್ ರಾಜಣ್ಣ ಮೂರು ಪುಟಗಳ ದೂರು ಸಲ್ಲಿಕೆ ಮಾಡಲಿದ್ದಾರೆ. ಈ ನಡುವೆ ಸಂಜೆ 4 ಗಂಟೆಗೆ ಬರುವಂತೆ ಪರಮೇಶ್ವರ್ ತಿಳಿಸಿದ್ದಾರೆ ಎಂದು ಕೆ.ಎನ್ ರಾಜಣ್ಣ ತಿಳಿಸಿದರು.
ಇತ್ತ ಪ್ರಕರಣ ಕುರಿತು ಸಿಬಿಐ ತನಿಖೆ ನಡೆಯಲಿ ಎಂದು ಬಿಜೆಪಿ ನಾಯಕರು ಆಗ್ರಹಿಸಿದ್ದಾರೆ.
Key words: Honeytrap case, K.N. Rajanna, complaint, Home Minister, Parameshwar