ಮಂಡ್ಯ,ನ,5,2019(www.justkannada.in): ಅನರ್ಹ ಶಾಸಕರ ಬಗ್ಗೆ ಸಿಎಂ ಬಿಎಸ್ ಯಡಿಯೂರಪ್ಪ ಮಾತನಾಡಿದ್ದ ವಿಡಿಯೋ ವೈರಲ್ ಆದ ಬೆನ್ನಲ್ಲೆ ಇದೀಗ ಅನರ್ಹ ಶಾಸಕ ನಾರಾಯಣಗೌಡ, ಅಪರೇಷನ್ ಕಮಲದ ಗುಟ್ಟನ್ನ ಬಿಟ್ಟುಕೊಟ್ಟಿದ್ದಾರೆ.
ರಾಜೀನಾಮೆಗೂ ಮೊದಲು ಯಡಿಯೂರಪ್ಪ ಅವರ ಜತೆ ಮಾತುಕತೆ ನಡೆಸಿದ್ದವು. ಬಿಎಸ್ ವೈ ಬಳಿ ಮಾತುಕತೆ ನಡೆಸಿಯೇ ರಾಜೀನಾಮೆ ನೀಡಿದ್ದೇವು ಎಂದು ಅನರ್ಹ ಶಾಸಕ ನಾರಾಯಣಗೌಡ ಸ್ಪೋಟಕ ಹೇಳಿಕೆ ನೀಡಿದ್ದಾರೆ.
ಮಂಡ್ಯ ಜಿಲ್ಲೆ ಕೆ.ಆರ್. ಪೇಟೆ ತಾಲೂಕಿನ ಬೂಕನಕೆರೆಯಲ್ಲಿ ಈ ಬಗ್ಗೆ ಮಾತನಾಡಿದ ಅನರ್ಹ ಶಾಸಕ ನಾರಾಯಣಗೌಡ, ಕೆಲವರು ಬಂದು ನನ್ನ ಯಡಿಯೂರಪ್ಪ ಅವರ ಮನೆಗೆ ಕರೆದುಕೊಂಡು ಹೋದ್ರು. ಐದು ಗಂಟೆ ಸುಮಾರಿಗೆ ನಾನು ಅವರ ಮನೆಗೆ ಹೋದೆ. ಆಗ ಅವರು ಏನಪ್ಪ ಮುಖ್ಯಮಂತ್ರಿಯಾಗೊ ಅವಕಾಶ ಇದೆ ಬೆಂಬಲಿಸ್ತಿಯಾ…? ನನ್ನ ತಂದೆ ವೀರಭದ್ರ ಸ್ವಾಮಿ ಪೂಜೆ ಮಾಡಿಕೊಂಡು ಬೆಳೆಸಿದ್ದಾರೆ. ಆದರೆ ಕೆ.ಆರ್.ಪೇಟೆ ತಾಲೂಕು ಅಭಿವೃದ್ಧಿಯಾಗಿಲ್ಲ ಎಂದು ಸ್ವಪ್ನದಲ್ಲಿ ಬಂದು ಕಾಡುತ್ತಿದ್ದಾರೆ. ನೀನು ಕೈ ಜೋಡಿಸಿದ್ರೆ ಕೆ.ಆರ್.ಪೇಟೆ ಅಭಿವೃದ್ಧಿ ಮಾಡೋಣ. ಏನಂತೀಯ ಎಂದ್ರು. ಅದಕ್ಕೆ ನಾನು ತಾಲೂಕಿನ ಅಭಿವೃದ್ದಿಗಾಗಿ 7೦೦ ಕೋಟಿ ಅನುದಾನ ಕೇಳಿದ್ದೆ.. ಆದ್ರೆ ಯಡಿಯೂರಪ್ಪನವರು ಸಾವಿರ ಕೋಟಿ ಕೊಡ್ತಿನಿ ಅಂದ್ರು. ಅದ್ರಂತೆ ನಮ್ಮ ತಾಲೂಕಿನ ಅಭಿವೃದ್ದಿಗೆ ಸಾವಿರ ಕೋಟಿ ಅನುದಾನ ಮಂಜೂರು ಮಾಡಿದ್ದಾರೆ ಎಂದು ಹೇಳುವ ಮೂಲಕ ರಾಜೀನಾಮೆಗೂ ಮೊದಲು ಯಡಿಯೂರಪ್ಪ ಅವರ ಜೊತೆ ಮಾತುಕತೆ ನಡೆಸಿರುವುದಾಗಿ ಒಪ್ಪಿಕೊಂಡಿದ್ದಾರೆ.
ಹೆಚ್.ಡಿಡಿ ಮನೆಗೆ ಹೋದ್ರೆ ಚಪ್ಪಲಿ ಜಾಗದಲ್ಲಿ ನಿಲ್ಲಿಸುತ್ತಿದ್ರು….
ಇದೇ ವೇಳೆ ಜೆಡಿಎಸ್ ನಾಯಕರ ವಿರುದ್ದ ಹರಿಹಾಯ್ದರ ಅನರ್ಹ ಶಾಸಕ ನಾರಾಯಣಗೌಡ, ಹೆಚ್.ಡಿ ದೇವೇಗೌಡರ ಮನೆಗೆ ಹೋದ್ರೆ ಚಪ್ಪಲಿ ಜಾಗದಲ್ಲಿ ನಿಲ್ಲಿಸುತ್ತಿದ್ರು. ನನ್ನ ಕ್ಷೇತ್ರಕ್ಕೆ ಅನುದಾನ ಬಿಡುಗಡೆಯಾದ್ರೆ ನೀಡುತ್ತಿರಲಿಲ್ಲ. ನನ್ನ ಕ್ಷೇತ್ರಕ್ಕೆ ಅನುದಾನ ಬಿಡುಗಡೆಯಾದ್ರೆ ಅದನ್ನ ಹಾಸನಕ್ಕೆ ತೆಗೆದುಕೊಂಡು ಹೋಗ್ತಿದ್ರು ಎಂದು ಆರೋಪಿಸಿದರು.
Key words: K.R pet-disqualified MLA-Narayana Gowda -Operation kamala- CM BS yeddyurappa