ರಾಜ್ಯವನ್ನ ಮುಸ್ಲೀಮರಿಗೆ ಮಾರಿ ಬಿಡಿ ಒಳ್ಳೆಯದು- ಸರ್ಕಾರದ ವಿರುದ್ದ ಕೆ.ಎಸ್ ಈಶ್ವರಪ್ಪ ಆಕ್ರೋಶ

ಶಿವಮೊಗ್ಗ,ಮಾರ್ಚ್,17,2025 (www.justkannada.in):  ಹಾವೇರಿಯಲ್ಲಿ ಸ್ವಾತಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ವಿರುದ್ಧ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಮಾತನಾಡಿರುವ ಕೆ.ಎಸ್ ಈಶ್ವರಪ್ಪ, ರಾಜ್ಯದಲ್ಲಿ ಹಿಂದೂ ಹೆಣ್ಣು ಮಕ್ಕಳಿಗೆ ಬೆಲೆ ಇಲ್ಲದಂತಾಗಿದೆ.  ಮುಸ್ಲೀಂ ಹುಡುಗಿಗೆ ಹೀಗೆ ಆಗಿದ್ರೆ ರಾಜ್ಯಕ್ಕೆ ಬೆಂಕಿ ಹಚ್ಚುತ್ತಿದ್ರಿ.. ಮುಸ್ಲೀಮರಿಗೆ ರಾಜ್ಯವನ್ನ ಮಾರು ಬಿಡಿ ಒಳ್ಳೆಯದು ಎಂದು ಕಿಡಿಕಾರಿದರು.

ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಅವರ ನಡವಳಿಕೆಗಳೇ ನೆಮ್ಮದಿ ತರುತ್ತಿಲ್ಲ. ಓಲೈಕೆ ರಾಜಕಾರಣ ಎಷ್ಟು ದಿನ? ಮುಸ್ಲಿಮರು ಏನು ಬೇಕಾದರೂ ಈ ರಾಜ್ಯದಲ್ಲಿ ಮಾಡಬಹುದೇ? ನಮ್ಮ ಹಿಂದೂ ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ ಎಸಗಿದರೂ ಸುಮ್ಮನಿರಬೇಕು, ಪೊಲೀಸ್ ಜೀಪ್ ಗಳಿಗೆ ಬೆಂಕಿ ಹಚ್ಚಿದರೂ ಸುಮ್ಮನಿರಬೇಕು ಎಂದು ವಾಗ್ದಾಳಿ ನಡೆಸಿದರು.

ಸ್ವಾತಿಯ ಕುಟುಂಬಕ್ಕೆ ಸಾಂತ್ವನ ಹೇಳಲು ರಾಷ್ಟ್ರ ಭಕ್ತರ ಬಳಗದ ಸದಸ್ಯರು ನಾಳೆ ನಾವು ಮಾಸೂರಿಗೆ ಹೋಗುತ್ತಿದ್ದೇವೆ. ಇಂದು ಮಾಸೂರಿನ ಬಂದ್ ಕೂಡ ನಡೆಯುತ್ತಿದೆ. ರಾಜ್ಯ ಸರ್ಕಾರ ಈಗಲಾದರೂ ಎಚ್ಚತ್ತುಕೊಳ್ಳಬೇಕು. ಇಂತಹ ಘಟನೆಗಳು ನಡೆದಾಗ ಆರೋಪಿಗಳನ್ನು ಗುಂಡಿಟ್ಟು ಕೊಲ್ಲುವಂತಹ ಕಾನೂನನ್ನು ಜಾರಿ ಮಾಡಬೇಕು ಎಂದರು.

Key words: sell, state, Muslims, K.S. Eshwarappa