UPSC ಪರೀಕ್ಷೆಯಲ್ಲಿ RANK ಪಡೆದು ಸಾಧನೆಗೈದ ಯುವತಿಗೆ ಕೆ.ಎಸ್ ರಂಗಪ್ಪರಿಂದ ಸನ್ಮಾನ

ಮೈಸೂರು,ಏಪ್ರಿಲ್,29,2025 (www.justkannada.in): 2024-25ನೇ ಸಾಲಿನ ಯುಪಿಎಸ್ಸಿ ಪರೀಕ್ಷೆಯಲ್ಲಿ  263ನೇ ಸ್ಥಾನ ಪಡೆದು  ಸಾಧನೆಗೈದ ಮೈಸೂರು ಜಿಲ್ಲೆ ಸಾಲಿಗ್ರಾಮ ತಾಲ್ಲೂಕಿನ ಕುಗ್ರಾಮ ಅಂಕನಹಳ್ಳಿಯ ಪ್ರೀತಿ ಅವರಿಗೆ ವಿಜ್ಞಾನಿ, ಖ್ಯಾತ ಶಿಕ್ಷಣ ತಜ್ಞರು ಹಾಗೂ ಮೈಸೂರು ವಿಶ್ವ ವಿದ್ಯಾನಿಲಯದ ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್ ರಂಗಪ್ಪ ಸನ್ಮಾನಿಸಿದರು.

ಪ್ರೀತಿ ಎ.ಸಿ ಅವರು ತಾವು ಹುಟ್ಟದ ಸಾಲಿಗ್ರಾಮ ತಾಲ್ಲೂಕು ಅಂಕನಹಳ್ಳಿ ಗ್ರಾಮದಲ್ಲೇ ತಮ್ಮ  ಬಾಲ್ಯ ವಿದ್ಯಾಭ್ಯಾಸ ಮಾಡಿ  ನಂತರ ಪದವಿ ಶಿಕ್ಷಣ ವನ್ನು  ಕೆ ಆರ್‌  ನಗರದ ಪದವಿ  ಪೂರ್ವ ಬಾಲಕಿಯರ ಕಾಲೇಜಿನಲ್ಲಿ ಪೂರೈಸಿದರು.  ಸ್ನಾತೋಕತ್ತರ ಪದವಿಯನ್ನು ಕೃಷಿ ವಿಷಯದಲ್ಲಿ ಉನ್ನತ ಶ್ರೇಣಿಯಲ್ಲಿ ತೇಗರ್ಡೆಹೊಂದಿ ಇದೀಗ 2024-25ನೇ ಸಾಲಿನ ಯುಪಿಎಸ್ಸಿ ಪರೀಕ್ಷೆಯಲ್ಲಿ  263ನೇ ಸ್ಥಾನ ಪಡೆದು  ತಮ್ಮ  ಹುಟ್ಟೂರಿಗೆ  ತಾಲ್ಲೂಕಿಗೆ  ಪೋಷಕರಿಗೆ  ಜಿಲ್ಲೆಗೆ ರಾಜ್ಯಕ್ಕೆ   ಕೀರ್ತಿ ತಂದಿದ್ದಾರೆ.

ಈ  ಮಧ್ಯೆ ಇಂದು ಪ್ರೀತಿ ಅವರು ಮೈಸೂರು ವಿವಿ ವಿಶ್ರಾಂತ ಕುಲಪತಿ ಪ್ರೊ. ರಂಗಪ್ಪ ಅವರನ್ನ ಭೇಟಿಯಾಗಿ ಅವರ ಆಶೀರ್ವಾದ ಪಡೆದರು. ಈ ವೇಳೆ ರಂಗಪ್ಪ ಅವರು ಯುಪಿಎಸ್ ಸಿ ಸಾಧನೆಗೈದ ಪ್ರೀತಿ ಅವರಿಗೆ ಸನ್ಮಾನಿಸಿ ಅಭಿನಂದಿಸಿದರು.

ಬಳಿಕ ವಿಕಸಿತ ಭಾರತದಲ್ಲಿ ವಿಜ್ಞಾನದ ಏಳಿಗೆಗೆ ಆಧಿಕಾರಿಗಳ ಪಾತ್ರ  ಮತ್ತು  ಇಂದಿನ ಶಿಕ್ಷಣ ಮಟ್ಟದ ಕುರಿತು  ಸುಧೀರ್ಘವಾಗಿ ಕೆ ಎಸ್‌ ರಂಗಪ್ಪ ಅವರ ಜೊತೆ  ಪ್ರೀತಿ ಅವರು ಚರ್ಚಿಸಿದರು.

ಈ ವೇಳೆ ಸಮಾಜ ಸೇವಕ  ಕೆ. ಎಲ್‌ ರಮೇಶ್‌, ಕೆ ಆರ್‌ ನಗರ ಸರ್ಕಾರಿ ನೌಕರರ ಸಂಘದ ನಿದೇರ್ಶಕ ರಾಜಶೇಖರ್‌ ಮತ್ತು  ಉದಯೋನ್ಮುಖ ಸಾಹಿತಿ ನಂಜನಗೂಡು ತಾಲ್ಲೂಕಿನ  ಸರ್ಕಾರಿ ನೌಕರರ ಸಂಘದ  ಅದ್ಯಕ್ಷ ದೀಪು, ಶಿಕ್ಷಕ ಪಾಲಾಕ್ಷ  ಇನ್ನಿತರರು ಉಪಸ್ಥಿತರಿದ್ದರು.

Key words: K.S. Rangappa, Honor, young woman, achieved, UPSC exam