ಮೈಸೂರು,ಏಪ್ರಿಲ್,12,2021(www.justkannada.in): ಏಪ್ರಿಲ್ 11 ರಂದು ನಡೆಯಬೇಕಿದ್ದ ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ-2021 ಅನ್ನು ಮೈಸೂರು ವಿಶ್ವ ವಿದ್ಯಾನಿಲಯ ಮುಂದೂಡಿಕೆ ಮಾಡಿದ್ದು ಇದೀಗ ನಿಗದಿತ ಶುಲ್ಕ ಪಾವತಿಸಿ ಇಲ್ಲಿಯವರೆಗೂ ಪ್ರವೇಶ ಪತ್ರ ಪಡೆಯದ ಅಭ್ಯರ್ಥಿಗಳಿಗೆ ಮತ್ತೊಂದು ಅವಕಾಶ ಕಲ್ಪಿಸಿದೆ.
ಹೌದು , ಈ ಬಗ್ಗೆ ಮೈಸೂರು ವಿವಿ ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, ಮೈಸೂರು ವಿಶ್ವ ವಿದ್ಯಾನಿಲಯವು ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ-2021(ಕೆ-ಸೆಟ್)ಯನ್ನ ದಿನಾಂಕ 11-4-2021 ರಂದು ನಡೆಸಲು ತೀರ್ಮಾನಿಸಲಾಗಿತ್ತು. ಆದರೆ ಅನಿವಾರ್ಯ ಕಾರಣಗಳಿಂದ ಕೆಸೆಟ್-2021ರ ಪರೀಕ್ಷೆಯನ್ನ ಮುಂದೂಡಲಾಗಿದ್ದು, ಮತ್ತು ಈ ಪರೀಕ್ಷೆಯನ್ನು ಸದ್ಯದಲ್ಲಿಯೇ ನಡೆಸಲು ತೀರ್ಮಾನಿಸಲಾಗಿದೆ.
ಇದಕ್ಕೆ ಸಂಬಂಧಿಸಿದಂತೆ ಕೆಲವು ನೋಂದಾಯಿತ ಅಭ್ಯರ್ಥಿಗಳು ಈಗಾಗಲೇ ನಿಗದಿತ ಶುಲ್ಕವನ್ನು ಪಾವತಿಸಿ ಇಲ್ಲಿಯವರೆಗೂ ಪ್ರವೇಶ ಪತ್ರವನ್ನು ಪಡೆದಿರುವುದಿಲ್ಲ. ಅದ್ದರಿಂದ ಅಭ್ಯರ್ಥಿಗಳ ಅನುಕೂಲಕ್ಕಾಗಿ ದಿನಾಂಕ 16-04-2021 ರಂದು ಮಧ್ಯರಾತ್ರಿ 12 ಗಂಟೆವರೆಗೆ ಪ್ರವೇಶ ಪತ್ರವನ್ನು ವೆಬ್ ಸೈಟ್ ನಲ್ಲಿ(http://kset.uni-mysore.ac.in/) ಪಡೆಯಲು ಅವಕಾಶ ಕಲ್ಪಿಸಲಾಗಿದೆ.
ಈಗಾಗಲೇ ಪ್ರವೇಶ ಪತ್ರವನ್ನು (11-04-2021) ಪಡೆದಿರುವ ಅಭ್ಯರ್ಥಿಗಳು ಮತ್ತೆ ಪ್ರವೇಶ ಪತ್ರವನ್ನ ಪಡೆಯುವ ಅವಶ್ಯಕತೆ ಇರುವುದಿಲ್ಲ ಎಂದು ಸಂಯೋಜನಾಧಿಕಾರಿ ಪ್ರೊ.ಹೆಚ್. ರಾಜಶೇಖರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Key words: K-set –Exam-mysore university- get- admission card