ಕಬ‍ಡ್ಡಿ ಆಟಗಾರ ಅನುಮಾನಸ್ಪದ ಸಾವು

ಮಂಡ್ಯ,ಡಿಸೆಂಬರ್,14,2024 (www.justkannada.in): ಕಬಡ್ಡಿ ಆಟಗಾರ ಅನುಮಾನಸ್ಪದವಾಗಿ ಸಾವನ್ನಪ್ಪಿರುವ ಘಟನೆ ಮಂಡ್ಯ ಜಿಲ್ಲೆ ನಾಗಮಂಗಲ ತಾಲ್ಲೂಕಿನ ಸುಖಧರೆ ಗ್ರಾಮದಲ್ಲಿ ನಡೆದಿದೆ.

ಉಡುಪಿ ಜಿಲ್ಲೆಯ ಹೆಬ್ರಿ ಮೂಲದ  ಪ್ರೀತಮ್ ಶೆಟ್ಟಿ (24)  ಮೃತಪಟ್ಟ ಕಬಡ್ಡಿ ಆಟಗಾರ. ಹನುಮ ಜಯಂತಿ ಹಿನ್ನೆಲೆ ನಿನ್ನೆ ಸುಖಧರೆ ಗ್ರಾಮದಲ್ಲಿ ಕಬಡ್ಡಿ ಪಂದ್ಯಾವಳಿ ಆಯೋಜಿಸಲಾಗಿತ್ತು.  ಪ್ರೀತಮ್ ಶೆಟ್ಟಿ ಕಬಡ್ಡಿ ಪಂದ್ಯಾವಳಿಯಲ್ಲಿ  ಭಾಗಿಯಾಗಿದ್ದರು.

ಈ ಮಧ್ಯೆ ನಿನ್ನೆ ರಾತ್ರ ಪ್ರೀತಮ್ ಶೆಟ್ಟಿ ಅನುಮಾನಸ್ಪದವಾಗಿ ಸಾವನ್ನಪ್ಪಿದ್ದಾರೆ. ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ ಎನ್ನಲಾಗಿದೆ.

Key words: Kabaddi player, dies, suspiciously