ಬೆಂಗಳೂರು, ನವೆಂಬರ್ 14, 2019 (www.justkannada.in): ಹುಣಿಮೆ ಹಾಡು 113 ಕಡಲೆ ಕಾಯಿ ಪರಿಷೆ, ಚಿತ್ರ ಪರಿಷೆ ಮಲೇಶ್ಚರ ಮರೆಯಲಾರದ ಮಧುರ ನೆನಪಿನ ಗಾನ ಸಂಗಮ ಕಾರ್ಯಕ್ರಮವನ್ನು ಇದೇ 16ರಿಂದ 18ರವರೆಗೆ ಆಯೋಜಿಸಲಾಗಿದೆ ಎಂದು ಕಾಡು ಮಲೇಶ್ವರ ಗಳೆಯರ ಬಳಗ ಅಧ್ಯಕ್ಷ ಬಿ.ಕೆ.ಶಿವರಾಂ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿಂದು ನಡೆದ ಸುದ್ದಿಗೋಷ್ಠಯಲ್ಲಿ ಮಾತನಾಡಿದ ಅವರು,ಹುಣಿಮೆ ಹಾಡು -125 ದಶಮಾನೋತ್ಸವ ಕಾರ್ಯಕ್ರಮವನ್ಬು ಎಂಬ ಅಪರೂಪದ ಕಾರ್ಯಕ್ರಮ ವನ್ನು ಹಮ್ಮಿಕೊಳ್ಳಲಾಗಿದೆ. ಪ್ರತಿ ವರ್ಷ ಹುಣಿಮೆ ಹಾಡು ವಾರ್ಷಿಕ ಪ್ರಶಸ್ತಿ ನೀಡಲಾಗುತ್ತಿದೆ.ಕಳೆದವರ್ಷ ಪದ್ಮಶ್ರೀ ದಿವಂಗತ ಸೂಲಗತ್ತಿ ನರಸಮ್ಮ, ಪರಿಸರ ಸಂರಕ್ಷಕ ರಾಮೇಗೌಡರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗಿದೆ ಈ ವರ್ಷ ಚೌಡಿಕೆ ರಾಧಕ್ಕ ಎಂಬುವರಿಗೆ, ಅಪಘಾತಗಳ ಅಪದ್ಬಾಂದ್ಬವ ಹಸನಬ್ಬ ಅವರಿಗೆ ಹುಣಿಮೆ ಹಾಡು ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ತಿಳಿಸಿದರು.
ಈ ಬಾರಿ ಆಹಾರ ಪರಿಷೆಯನ್ನು ನೆಡಸಲಾಗುತ್ತಿದೆ. ಈ ಬಾರಿಯೂ ಮಲೇಶ್ವರದ 15ನೇ ಕ್ರಾಸ್ ನಲ್ಲಿ ಕೂಡ ಹಸಿರು ಚೈತನ್ಯವನ್ನು ಹಮ್ಮಿಕೊಳ್ಳಲಾಗಿದೆ.ಮೂರು ದಿನಗಳು ನಡೆಯುವ ಕಾರ್ಯಕ್ರಮ ದಲ್ಲಿ ಉಳವಿ ಮಠದ ಬಳೆಗಳನ್ನು ಹೆಣ್ಣು ಮಕ್ಕಳಿಗೆ ನೀಡಲಾಗುವುದು
ಎಂದು ತಿಳಿಸಿದರು.
ಚಿತ್ರ ಪರಿಷೆಯಲ್ಲಿ ವಿಶೇಷವಾಗಿ ಕುಂಭಾರಿಕೆ ಕಲೆಗೆ ಹೆಚ್ಚಿನ ಆದ್ಯ ತೆ ನೀಡಲಾಗುವುದು. ಆಹಾರ ಪರಿಷೆ, ಕಡಲೆ ಕಾಯಿ ಪರಿಷೆಯಲ್ಲಿ ಕರಾವಳಿ ಭಾಗದ ವಿಶೇಷ ಬೆಲ್ಲ ಮಾರಟಕ್ಕೆ ಅವಕಾಶ ಒದಗಿಸಲಾಗುತ್ತಿದೆ. ತರಕಾರಿ, ಬೀದಿ ವ್ಯಾಪಾರಿಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಈ ಬಾರಿ ಅತಿಥಿಗಳಿಗೆ ತರಕಾರಿ ಪುಷ್ಪ ಹುಚ್ಚ ನೀಡಿ ಗೌರವಿಸಲಾಗುವುದು ಎಂದು ತಿಳಿಸಿದರು.