ಬೆಂಗಳೂರು, ಡಿಸೆಂಬರ್ 1, 2021 (www.justkannada.in): ಮೋಡ ಮುಸುಕಿದ ವಾತಾವರಣ ಹಾಗೂ ಕೋವಿಡ್ ಸೋಂಕಿನ ಭಯದಿಂದಾಗಿ ಬೆಂಗಳೂರಿನ ಪ್ರಖ್ಯಾತ ಕಡಲೆಕಾಯಿ ಪರಿಷೆಗೆ ಬರುವ ಜನಸಂಖ್ಯೆಯಲ್ಲಿ ಇಳಿಕೆ ಕಂಡು ಬಂತು. ಕಡಲೆಕಾಯಿಯ ಒಂದು ಚೀಲಕ್ಕೆ ರೂ.೫೦೦ ರಿಂದ ರೂ.೧,೦೦೦ದವರೆಗೆ ಹೆಚ್ಚು ಪಾವತಿಸಿ ಖರೀದಿಸಿದ ಮಾರಾಟ ಮಾಡಲು ತಂದಿದ್ದಂತಹ ವರ್ತಕರಿಗೆ ಜಾತ್ರೆಯ ಮೊದಲನೇ ದಿನದಂದು ನಿರಾಸೆ ಉಂಟಾಯಿತು.
ಶುಕ್ರವಾರ ಸಂಜೆಯಂದೇ ದೊಡ್ಡಬಸವಣ್ಣನ ದೇವಾಲಯದ ರಸ್ತೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಜನರು ಆಗಮಿಸಲಾರಂಭಿಸಿದರೂ ಸಹ ಜಾತ್ರೆ ಸೋಮವಾರ ಬೆಳಿಗ್ಗೆ ಉದ್ಘಾಟನೆಗೊಂಡಿತು.
ವಿವಿಧ ತಿಂಡಿಗಳನ್ನು ಮಾರಾಟ ಮಾಡುವ ಅಂಗಡಿಗಳನ್ನು ಹೊರತುಪಡಿಸಿದಂತೆ ಒಟ್ಟು ೮೦೦ ತಾತ್ಕಾಲಿಕ ಮಳಿಗೆಗಳು ಈ ಜಾತ್ರೆ ಸಮಯದಲ್ಲಿ ತೆರೆಯಲ್ಪಟ್ಟಿದ್ದವು. ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಪೊಲೀಸರು, ಸಂಚಾರಿ ಪೊಲೀಸರು, ಹೋಂ ಗಾರ್ಡ್ ಗಳು ಒಳಗೊಂಡಂತೆ ಒಟ್ಟು ೭೦೦ ಸಿಬ್ಬಂದಿಗಳನ್ನು ಸುರಕ್ಷತಾ ಕ್ರಮವಾಗಿ ಬಿಬಿಎಂಪಿ ವತಿಯಿಂದ ನಿಯೋಜಿಸಲಾಗಿತ್ತು.
ಸಾರ್ವಜನಿಕರು ಮಾಸ್ಕ್ ಗಳನ್ನು ಧರಿಸುವಂತೆ ಮತ್ತು ಕೋವಿಡ್ ಸೂಕ್ತ ನಡವಳಿಕೆಯನ್ನು ಪಾಲಿಸುವಂತೆ ಬಿಬಿಎಂಪಿಯ ಮಾರ್ಷಲ್ ಗಳು ಸಾರ್ವಜನಿಕ ಘೋಷಣೆಗಳನ್ನು ಮಾಡುತ್ತಿದ್ದ ಹೊರತಾಗಿಯೂ ಕಡಲೆಕಾಯಿ ಪರಿಷೆಗೆ ಆಗಮಿಸಿದ್ದಂತಹ ಬಹುಪಾಲು ಜನರು ಮಾಸ್ಕ್ ಗಳನ್ನು ಸರಿಯಾಗಿ ಧರಿಸದೆ, ಅಥವಾ ಮಾಸ್ಕ್ ಗಳೇ ಇಲ್ಲದೆ ಮಳಿಗೆಗಳಲ್ಲಿ ಖರೀದಿಸುತ್ತಿರುವುದು ಕಂಡು ಬಂತು.
ಹಿಂದಿನ ವರ್ಷಗಳಲ್ಲಿ ಹೋಲಿಕೆಯಲ್ಲಿ ಈ ಬಾರಿ ಕಡಲೆಕಾಯಿ ಪರಿಷೆಗೆ ೩೫,೦೦೦ ರಿಂದ ೪೦,೦೦೦ ಜನರು ಭೇಟಿ ನೀಡಬಹುದು ಎಂದು ಬಿಬಿಎಂಪಿ ಅಂದಾಜಿಸಿತ್ತು. “ಭಾನುವಾರದಂದು ಮಾತ್ರ ಸುಮಾರು ೪೦,೦೦೦ ಜನರು ಭೇಟಿ ನೀಡಿದ್ದರು. ಆದರೆ ಸೋಮವಾರ ಅಷ್ಟು ಜನರು ಬಂದಿಲ್ಲ,” ಎನ್ನುವುದು ಬಿಬಿಎಂಪಿಯ ಓರ್ವ ಅಧಿಕಾರಿಯ ಅಭಿಪ್ರಾಯ.
ಇದರಿಂದಾಗಿ ಕಡಲೆಕಾಯಿ ಮತ್ತು ಕಲಡೆಪುರಿ ಕೊಳ್ಳುವವರ ಸಂಖ್ಯೆಯಲ್ಲಿ ಇಳಿಕೆಯಾಗಿದೆ. ತಮಿಳುನಾಡು ಮತ್ತು ಕೋಲಾರ ಜಿಲ್ಲೆಯಿಂದ ಬಂದಿರುವಂತ ವರ್ತಕರು, “ಕಳೆದ ವರ್ಷ ಕಡಲೆಕಾಯಿ ಪರಿಷೆ ನಡೆಯದೇ ಇದ್ದುದರಿಂದ ಈ ಬಾರಿ ಹೆಚ್ಚಿನ ಜನರು ಬರಬಹುದು ಎಂದು ನಿರೀಕ್ಷಿಸಿದ್ದೆವು,” ಎಂದು ತಮ್ಮ ಬೇಸರ ವ್ಯಕ್ತಪಡಿಸಿದರು.
ಚಿತ್ರಕಲಾ ಎಂಬ ಹೆಸರಿನ ಓರ್ವ ವರ್ತಕರು, “ತಮಿಳುನಾಡಿನಲ್ಲಿ ತುಂಬಾ ಮಳೆಯಾಗುತ್ತಿದೆ. ಹಾಗಾಗಿ ನಾನು ಒಂದು ಚೀಲ ಕಡಲೆಕಾಯಿಗೆ ರೂ.೫೦೦ರಂತೆ ಹೆಚ್ಚು ಪಾವತಿಸಿ ಸೇಲಂ, ಧರ್ಮಾವರಂ ಮತ್ತು ಇನ್ನಿತರೆ ಸ್ಥಳಗಳಿಂದ ಕಡಲೆಕಾಯಿ ತಂದಿದ್ದೇನೆ,” ಎಂದರು.
ಹಿಂದಿನ ವರ್ಷಗಳಲ್ಲಿ ಬಹುಪಾಲು ವಿಧದ ಕಡಲೆಕಾಯನ್ನು ಒಂದು ಲೀಟರ್ ಗೆ ರೂ.೨೦ ರಿಂದ ರೂ. ೩೦ರ ನಡುವೆ ಮಾರಾಟ ಮಾಡಲಾಗುತಿತ್ತು. ಆದರೆ ಈ ವರ್ಷ ಒಂದು ಲೀಟರ್ ಕಡಲೆಕಾಯಿ ಕನಿಷ್ಠ ರೂ.೨೫, ಉತ್ತಮ ತಳಿಯ ಕಡಲೆಕಾಯಿ ಲೀಟರ್‌ಗೆ ರೂ.೪೫ರಷ್ಟಿತ್ತು.
‘ಬೆಳಗಾವಿ ಕಡಲೆಕಾಯಿ’ ಈ ವರ್ಷದ ಕಡಲೆಕಾಯಿ ಪರಿಷೆಯ ಮುಖ್ಯ ಆಕರ್ಷಣೆಯಾಗಿತ್ತು. ಈ ವಿಧದ ಕಡಲೆಕಾಯಿ ದೀರ್ಘ ಅವಧಿಯವರೆಗೆ ಕೆಡದೇ ಇಡಬಹುದಾಗಿದ್ದು, ಇತರೆ ಸಾಮಾನ್ಯ ಕಡಲೆಕಾಯಿಗಳ ವಿಧಗಳಂತಲ್ಲದೆ ಹೆಚ್ಚಿನ ಬೀಜಗಳಿರುತ್ತವೆ. ಒಂದು ಲೀಟರ್ ಬೆಳಗಾವಿ ಕಡಲೆಕಾಯಿಯನ್ನು ರೂ.೫೦ರಂತೆ ಮಾಡಲಾಗುತಿತ್ತು. ಆದರೆ ಈ ಕುರಿತು ಹೆಚ್ಚಿನ ಜನರಿಗೆ ಅರಿವಿಲ್ಲದೇ ಇರುವುದು ಮತ್ತು ಈ ವಿಧದ ಕಲಡೆಕಾಯಿ ಮಾರಾಟ ಮಾಡುವ ವರ್ತಕರ ಸಂಖ್ಯೆ ಬಹಳ ಕಡಿಮೆ ಇತ್ತು. ಹಾಗಾಗಿ ಕೇವಲ ಇದರ ಮಹತ್ವ ಗೊತ್ತಿದ್ದವರು ಮಾತ್ರವೇ ಇದನ್ನು ಖರೀದಿಸಿದ್ದಾರಂತೆ.
ಸುದ್ದಿ ಮೂಲ: ಡೆಕ್ಕನ್ ಹೆರಾಲ್ಡ್
Key words: kadale kayi-parishe-bangalore- fear – rain-covid-19- infection.