ಕಲ್ಯಾಣ ಕರ್ನಾಟಕವನ್ನು ಕಮಿಷನ್, ಕಮ್ಯುನಲ್ ಕರ್ನಾಟಕ ಮಾಡಿದ್ದೇ ಬಿಜೆಪಿ ಸಾಧನೆ- ಆರ್.ಧ್ರುವನಾರಾಯಣ್ ವಾಗ್ದಾಳಿ

ಮೈಸೂರು,ಜುಲೈ,27,2022(www.justkannada.in):  ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗ ಕಲ್ಯಾಣ ಕರ್ನಾಟಕ ಮಾಡುವುದಾಗಿ ಹೇಳಿತ್ತು. ಆದರೆ ಕಮಿಷನ್ ಕರ್ನಾಟಕ, ಕಮ್ಯುನಲ್ ಕರ್ನಾಟಕ ಮಾಡಿದ್ದೀರಿ ಎಂದು  ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ್ ಆರೋಪ ಮಾಡಿದರು.

ಮೈಸೂರಿನಲ್ಲಿ ಇಂದು ಮಾತನಾಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧೃವನಾರಾಯಣ್, ಬಿಜೆಪಿ ಸರ್ಕಾರ ಜೆಡಿಎಸ್-  ಕಾಂಗ್ರೆಸ್ ಮೈತ್ರಿ ಮುರಿದು ಅಧಿಕಾರಕ್ಕೆ ಬಂತು.  ಆದರೆ ಯಾವುದೇ ಸಾಧನೆ ಮಾಡಿಲ್ಲ. ಸಿದ್ದರಾಮಯ್ಯ ಸರ್ಕಾರ ಜಾರಿಗೊಳಿಸಿದ್ದ ಜನಪರವಾದ ಕಾರ್ಯಕ್ರಮಗಳನ್ನೂ ರದ್ದು ಮಾಡಿದ್ದೀರಿ.  ರಾಜ್ಯದಲ್ಲಿರುವುದು ದೇಶದಲ್ಲೇ ನಂಬರ್ 1 ಭ್ರಷ್ಟ ಸರ್ಕಾರ ಎನಿಸಿಕೊಂಡಿದೆ.  ಯಾವ ಪುರುಷಾರ್ಥಕ್ಕೆ ಜನೋತ್ಸವ ಮಾಡುತ್ತೀರಿ ? ಎಂದು ಪ್ರಶ್ನಿಸಿದರು.

ಬೊಮ್ಮಾಯಿಯವರು ಒಂದು ವರ್ಷದ ಅವಧಿಯಲ್ಲಿ ಜನಪರ ಆಡಳಿತ ನೀಡುವಲ್ಲಿ ವಿಫಲರಾಗಿದ್ದಾರೆ. ಇದು 40 ಪರ್ಸೆಂಟ್ ಸರ್ಕಾರ ಎಂಬ ಅಪಖ್ಯಾತಿಗೆ ಗುರಿಯಾಗಿದೆ. ರಾಜ್ಯವನ್ನು ಲೂಟಿ ಮಾಡಿದ್ದು, ಕೋಮು ವಿಷ ಬೀಜ ಬಿತ್ತಿದ್ದು ರಾಜ್ಯ ಸರ್ಕಾರದ ಒಂದು ವರ್ಷದ ಸಾಧನೆಯಾಗಿದೆ. ಬಸವರಾಜ ಬೊಮ್ಮಾಯಿ ಆಡಳಿತಾವಧಿಯಲ್ಲಿ ನಂಬರ್ ಒನ್ ಭ್ರಷ್ಟ ರಾಜ್ಯ ಎಂಬ ಕಳಂಕ ಬಂದಿದೆ. ಪಿಎಸ್ಐ ಮತ್ತು ಉಪನ್ಯಾಸಕರ ನೇಮಕಾತಿಯಲ್ಲಿ ಅಕ್ರಮ, ಬಳಕೆಯಾಗದ ಅನುದಾನ, ಅಭಿವೃದ್ಧಿ ಕುಂಠಿತ, ಕೇಂದ್ರ ಪುರಸ್ಕೃತ ಯೋಜನೆಗಳಿಗೆ ಹಣ ಬಾರದಿರುವುದು, ಮಳೆ ಹಾನಿಗೆ ಪರಿಹಾರ ನೀಡದಿರುವುದು, ಕ್ರಿಮಿನಲ್ ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳ, ಸಜ್ಜನರ ಮೇಲೆ ಕೇಸು, ದುರ್ಜನರ ಕೇಸ್ ವಾಪಸ್, ಪಠ್ಯಪುಸ್ತಕ ಅವಾಸ್ತವಿಕ ಪರಿಷ್ಕರಣೆ, ಕೋಮು ಪ್ರಚೋದನೆಯ ಹಿಜಾಬ್, ಜನಪರ ಯೋಜನೆಗಳ ರದ್ದು, ಸಂಘ ಪರಿವಾರಕ್ಕೆ ಸರ್ಕಾರಿ ಭೂಮಿ, ಹಣ ಹಂಚಿಕೆಗಳೇ ರಾಜ್ಯ ಸರ್ಕಾರದ ಸಾಧನೆಯಾಗಿದೆ. ಕಲ್ಯಾಣ ಕರ್ನಾಟಕವನ್ನು ಕಮಿಷನ್ ಕರ್ನಾಟಕ, ಕಮ್ಯುನ್ಯುಯಲ್ ಕರ್ನಾಟಕ ಮಾಡಿದ್ದೇ ಇವರ ಸಾಧನೆಯಾಗಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಕಾಂಗ್ರೆಸ್ ನಲ್ಲಿನ ಬಣ ರಾಜಕೀಯ ವಿಚಾರ ಕುರಿತು ಬೇಸರ ವ್ಯಕ್ತಪಡಿಸಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್ ಧ್ರುವನಾರಾಯಣ್, ಪಕ್ಷದಲ್ಲಿ ಸಣ್ಣಪುಟ್ಟ ಭಿನ್ನಾಭಿಪ್ರಾಯ ಸಹಜ. ಅದನ್ನು ಸರಿಪಡಿಸಿಕೊಂಡು ಮುಂದುವರಿಯುತ್ತೇವೆ. ಪಕ್ಷದ ಆಂತರಿಕ ವಿಚಾರದ ನಡುವೆ ಜಾತಿ ವಿಚಾರ ತಂದಿರುವುದು ಸರಿಯಲ್ಲ. ಈ ರೀತಿ ಆಗಬಾರದಿತ್ತು‌.ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್ ನಡುವೆ ಯಾವುದೇ ರೀತಿಯ ವೈಮನಸ್ಸಿಲ್ಲ.ಎಲ್ಲರೂ ಒಗ್ಗಟ್ಟಾಗಿ ಹೋಗುತ್ತೇವೆ. ಒಂದು ಪಕ್ಷ ಎಂದ ಮೇಲೆ ಸಣ್ಣಪುಟ್ಟ ತಪ್ಪುಗಳು  ಸಹಜ. ಆ ಎಲ್ಲಾ ತಪ್ಪುಗಳನ್ನು ಸರಿಪಡಿಸಿಕೊಂಡು ಹೋಗುತ್ತೇವೆ.

ಸಮುದಾಯ ಹಾಗೂ ಜಾತಿ ರಾಜಕಾರಣ ಮಾಡಬಾರದು, ಅದು ಯಾರು ಮಾಡಿದರೂ ತಪ್ಪು. ಜಮೀರ್ ವಿಚಾರಕ್ಕೆ ಈಗಾಗಲೇ ರಾಜ್ಯ ಉಸ್ತುವಾರಿ ವಹಿಸಿರುವ ಸುರ್ಜೇವಾಲ ಅವರು ಸೂಚನೆ ನೀಡಿದ್ದಾರೆ. ಇನ್ನೂ ಮುಂದು ಈ ರೀತಿಯ ಬಿನ್ನಾಭಿಪ್ರಾಯಗಳು ಮುಂದುವರಿಯುವುದಿಲ್ಲ ಎಂದು ಆರ್ ಧ್ರುವನಾರಾಯಣ್  ಹೇಳಿದರು.

Key words: Kalyan Karnataka- Commission-Communal-Karnataka-bjp- R. Dhruvanarayan

ENGLISH SUMMARY…

Converting welfare Karnataka to commission, communal Karnataka is the only achievement of BJP: R. Dhruvanarayan
Mysuru, July 27, 2022 (www.justkannada.in): “The BJP had promised to make Karnataka ‘Kalyana Karnataka’ when it came to power. But, you have transformed the state to commission, communal Karnataka,” ridiculed KPCC Working President R. Dhruvanarayan.
Speaking in Mysuru today, he observed, “the BJP came to power in the State by breaking the JDS- Congress alliance government. But failed to make any achievement. They canceled all the progressive programs Siddaramaiah had introduced. The present government in the State is no. 1 in corruption in the entire country. What is the purpose of celebrating ‘Janotsava?”, he questioned.
“In his one-year term, Basavaraj Bommai has failed in providing a pro-people administration to the people of the State. The State Govt. has become notorious in the name of 40% Govt. Looting the State, and seeding communal hatred are the only achievements of the BJP. The state has earned No. 1 corrupt state under Basavaraj Bommai’s rule. Corruption in the recruitment of PSIs and lecturers, unused grants, no development, no grants for Union Govt. programs, increase in criminal cases, imposing cases on good people, withdrawing cases on criminals, wrong revision of school textbooks, communal hatred, hijab issue, cancellation of pro-people programs, providing government land to Sangh Parivar, distribution of funds,” these are the only achievements of the State, he said.
Keywords: KPCC Working President/ R. Dhruvanarayan/ BJP/ State Government