ಬೆಂಗಳೂರು,ಡಿಸೆಂಬರ್,24,2020(www.justkannada.in) : ನಮ್ಮ ಭಾಗಕ್ಕೆ ನೂತನ ಕಛೇರಿಗಳ ತರುವ ಕೆಲಸ ಬಿಜೆಪಿಯಿಂದ ಆಗದು. ಆದರೆ, ಇಲ್ಲೇ ಇರುವ ಕಲ್ಯಾಣ ಕರ್ನಾಟಕದ ಆಸ್ತಿಯನ್ನ ನಮ್ಮಲ್ಲೇ ಉಳಿಸಿಕೊಳ್ಳಲೂ ಈ ಭಾಗದ ಬಿಜೆಪಿ ನಾಯಕರಿಂದ ಆಗದೇ? ಮಾಜಿ ಸಚಿವ ಪ್ರಿಯಾಂಕ ಖರ್ಗೆ ಟೀಕಿಸಿದ್ದಾರೆ.
ಬಿಜೆಪಿಗರಿಗೆ ಕಲ್ಬುರ್ಗಿಯಲ್ಲಿ ಸರ್ಕಾರಿ ಕಟ್ಟಡ ಕೊಡಿಸಲು ಕಷ್ಟವಾದರೆ ಹೇಳಲಿ, ಚಿತ್ತಾಪುರದಲ್ಲಿ ನಾನೇ ಖುದ್ದು ಕಟ್ಟಡದ ವ್ಯವಸ್ಥೆ ಕಲ್ಪಿಸುತ್ತೇನೆ ಎಂದು ಆಕ್ರೋಶವ್ಯಕ್ತಪಡಿಸಿದ್ದಾರೆ.
ಕಲ್ಬುರ್ಗಿ ಮೇಲೆ ಈ ತುಘ್ಗಲ್ ದರ್ಬಾರ್ ನಿಲ್ಲೋದು ಯಾವಾಗ? ಕಲ್ಬುರ್ಗಿಯ ಆಹಾರ ಪ್ರಯೋಗಾಲಯ ವಿಭಾಗೀಯ ಕಚೇರಿಯನ್ನ ಬೆಳಗಾವಿಗೆ ಸ್ಥಳಾಂತರಿಸಲು ಹೊರಟಿರೋದು ಬಿಜೆಪಿ ಸರ್ಕಾರದ ಕಲ್ಯಾಣ ಕರ್ನಾಟಕ ವಿರೋಧಿ ನೀತಿಯನ್ನ ಮತ್ತೆ ಮತ್ತೆ ಸಾಬೀತು ಮಾಡಿದಂತೆ. ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದ ನಮ್ಮ ಭಾಗಕ್ಕೆ ಅನ್ಯಾಯವೆಸಗುತ್ತಲೇ ಇದೆ ಎಂದು ಕಿಡಿಕಾರಿದ್ದಾರೆ.
key words : kalyana-Karnataka’s-property-can-retained-Not- BJP-leaders?-Former-Minister-Priyanka Khargay