ಮೈಸೂರು,ನವೆಂಬರ್,11,2022(www.justkannada.in): ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜಿನಲ್ಲಿ ಇಂದು ಕನಕದಾಸರ ಜಯಂತಿಯನ್ನು ಆಚರಣೆ ಮಾಡಲಾಯಿತು.
ದಾಸ ಸಾಹಿತ್ಯದ ಪ್ರಮುಖರಾದ ಕನಕದಾಸರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಗೌರವ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಲೇಖಕರು ಮತ್ತು ಪತ್ರಕರ್ತರಾದ ಟಿ. ಗುರುರಾಜ್ ಅವರು, ಕನಕದಾಸರು ಸಮ ಸಮಾಜದ ಕನಸುಗಾರ ಎಂದು ಬಣ್ಣಿಸಿದರು.
ದೊರೆತನ ಸಿರಿತನವನ್ನು ತೊರೆದು ಸಮಾಜದ ಕಷ್ಟಗಳಿಗೆ ಸ್ಪಂದಿಸುವ ಸಲಯವಾಗಿ ಸರಳ ಬದುಕಿಗೆ ಬದಲಾದರು. ಸಮಾಜವು ಜಾತಿ ಧರ್ಮದ ಹೆಸರಿನಲ್ಲಿ ಒಡೆದು ಹೋಳಾಗಿದ್ದುದನ್ನು ಕಂಡು, ಸಮಾಜವನ್ನು ಎಲ್ಲಾ ಅಂಧಕಾರ ಮತ್ತು ಅಸಮಾನತೆಯನ್ನು ದೂರ ಮಾಡಲು ಶ್ರಮಿಸಿದರು ಎಂದು ಹೇಳಿದರು.
ಅಧ್ಯಕ್ಷೀಯ ಭಾಷಣ ಮಾಡಿದ ಕಾಲೇಜಿನ ಪ್ರಾಂಶುಪಾಲರಾದ ಡಾ. ರವಿ ಡಿ ಅವರು, ವಚನ, ಕೀರ್ತನೆ ಮತ್ತು ಪದಗಳ ಮೂಲಕ ಸಾಮಾನ್ಯ ಜನರಲ್ಲಿ ಅರಿವು ಮೂಡಿಸಿದರು.ಆ ಮೂಲಕ ತಾರತಮ್ಯ ರಹಿತ ಸಮಾಜದ ನಿರ್ಮಾಣಕ್ಕೆ ನಾಂದಿ ಹಾಡಿದರು ಎಂದರು.
ಕನಕದಾಸರ ಮೌಲ್ಯವನ್ನು ಮೈಗೂಡಿಸಿಕೊಂಡು ಮೇಲುಕೀಳಿಲ್ಲದ ಸಮಾಜವನ್ನು ಕಟ್ಟಲು ಶ್ರಮಿಸುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಸಮಾರಂಭದಲ್ಲಿ ಸಾಂಸ್ಕೃತಿಕ ಸಮಿತಿ ಸಂಚಾಲಕರಾ ಡಾ. ಶಿವಕುಮಾರ್, ಖಜಾಂಚಿ ಡಾ. ದೀಪಾ ಹೆಬ್ಬಾರ್, ಅಧ್ಯಾಪಕರು, ಕಛೇರಿ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.
Key words: Kanaka Jayanti -celebration -Maharani Women’s -Science College