ಮೈಸೂರು,ಡಿಸೆಂಬರ್,03,2020(www.justkannada.in) : ಕನಕದಾಸರನ್ನು ಯಾವುದೊ ಒಂದು ವರ್ಗಕ್ಕೆ ಮೀಸಲಿಡಬಾರದು. ಅವರು ದಾಸ ಶ್ರೇಷ್ಠರು ಅವರು ಹರಿ ಸರ್ವೊತ್ತಮ ವಾಯು ಜೀವೊತ್ತಮ ರೀತಿಯಲ್ಲಿ ಎಲ್ಲ ವರ್ಗದವರಿಗೂ ಸಲ್ಲಬೇಕಾದ ಮಹಾನ್ ಪುರುಷರು ಎಂದು ಹಿಂದುಳಿದ ವರ್ಗಗಳ ನಗರ ಅಧ್ಯಕ್ಷ ಜೋಗಿಮಂಜು ಹೇಳಿದರು.
ನಗರದ ಭಾರತೀಯ ಜನತಾ ಪಾರ್ಟಿಯ ಹಿಂದುಳಿದ ವರ್ಗಗಳ ಮೊರ್ಚಾ ವತಿಯಿಂದ 533 ನೇ ಕನಕ ದಾಸರ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಕನಕದಾಸರಿಗೆ ಪುಷ್ಪಾರ್ಚನೆ ಮಾಡಿ ಉದ್ಘಾಟಿಸಿ ಮಾತನಾಡಿದರು.
ಕನಕದಾಸರು ಕಳೆದ 500ವರ್ಷಗಳ ಹಿಂದೆಯೆ ತಿಳಿಸಿದರು ಕುಲ ಕುಲ ಕುಲವೆಂದು ಹೊಡೆದಾಡದಿರಿ ನಿಮ್ಮಕುಲದ ನೆಲೆಯ ನೇನಾದರೂ ಬಲ್ಲಿರಾ ಎಂದು ಅದೇ ರೀತಿ ಇರತಕ್ಕತಂಹ ಪ್ರತಿ ಜನ ಸಾಮನ್ಯರು ಅವರು ತತ್ವ ವನ್ನು ಅನುಸರಿಸಬೇಕು ಎಂದರು.
ಸರ್ಕಾರದ ವತಿಯಿಂದ ಕನಕದಾಸರ ಜಂಯತಿ ಮತ್ತು ಕಾಗಿನೆಲೆ ಪ್ರಾಧಿಕಾರ ವನ್ನು ಮಾಡಿ ಸುಮಾರು 1200 ಕೋಟಿ ಮೀಸಲಿಟ್ಟಿದು ಯಡಿಯೂರಪ್ಪ ನವರ ನೇತೃತ್ವದ ಭಾ.ಜ.ಪ.ಸರ್ಕಾರ ಎಂದರು.
ಮಹಾನ್ ಪುರುಷರುಗಳ ಆದರ್ಶ ಪಾಲನೆ ಅವರ ಹೆಸರುಗಳಲ್ಲಿ ಜಯಂತಿ ಗಳಾದ ಬಸವ ಜಯಂತಿ, ಅಂಬೇಡ್ಕರ್ ಜಯಂತಿ, ವಾಲ್ಮೀಕಿ ಜಯಂತಿ, ವಿಶ್ವ ಕರ್ಮ ಜಯಂತಿ, ಕೆಂಪೇಗೌಡ ಜಯಂತಿ, ನಾರಯಣಗುರು ಜಯಂತಿ ಇನ್ನೂ ಕೆಲವು ಮಹಾನ್ ಪುರುಷರ ಆಚರಣೆ ಮಾಡಲು ಅನುವು ಮಾಡಿಕೊಟ್ಟಿದ್ದು ಬಿಜೆಪಿ ಸರ್ಕಾರ ಎಂದು ಸರ್ಕಾರವನ್ನು ಅಭಿನಂದಿಸಿದರು.
ವೇದಿಕೆಯಲ್ಲಿ ನಗರ ಭಾ.ಜ.ಪ.ಅಧ್ಯಕ್ಷರಾದ ಶ್ರೀ ವತ್ಸ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಾಜೀವ್, ಪತ್ರಕರ್ತ ಮಹೇಶ್ವರನ್ಮೃ, ಗಾಲಯ ಅಧ್ಯಕ್ಷ ಮಹದೇವ ಸ್ವಾಮಿ, ಅರಗು ಬಣ್ಣ ಕಾರ್ಖಾನೆಯ ಅಧ್ಯಕ್ಷ ಪಣೀಶ್, ವಸ್ತು ಪ್ರದರ್ಶನ ಪ್ರಾಧಿಕಾರ ಅಧ್ಯಕ್ಷ ಹೇಮಂತ್ ಗೌಡ, ರಾಜ್ಯ ಹಿಂದುಳಿದ ವರ್ಗಗಳ ಪ್ರಧಾನ ಕಾರ್ಯದರ್ಶಿ ಸುರೇಶ್ ಬಾಬು, ನಗರಪಾಲಿಕೆ ಸದಸ್ಯೆ ವೇದಾವತಿ ಇತರರು ಇದ್ದರು.
key words : Kanakadasas-should-not-reserved-one-category-Backward- Classes-City-President-Jogimanju