ಬೆಂಗಳೂರು, ಫೆಬ್ರವರಿ 11, 2022 (www.justkannada.in): ವಿವಾದಿತ ಹೇಳಿಕೆಗಳ ಮೂಲಕವೇ ಸುದ್ದಿಯಾಗುವ ನಟಿ ಕಂಗನಾ ಮತ್ತೊಂದು ಹೇಳಿಕೆ ವಿವಾದಕ್ಕೆ ಕಾರಣವಾಗಿದೆ.
ಸಿನಿಮಾ ನಟ-ನಟಿಯರ ನಡುವೆ ಏಜ್ ಗ್ಯಾಪ್ ಇದ್ದರೆ ಪರವಾಗಿಲ್ಲ ಬಿಡಿ’ ಎಂದು ಕಂಗನಾ ರಣಾವತ್ ಹೇಳಿ ಸುದ್ದಿಯಾಗಿದ್ದಾರೆ.
‘ನಮ್ಮ ಸಿನಿಮಾದ ನಟ-ನಟಿಯ ವಯಸ್ಸಿನ ಅಂತರದ ಬಗ್ಗೆ ಅನೇಕರು ನನಗೆ ಎಚ್ಚರಿಕೆ ನೀಡಿದರು. ಆದರೆ ಏಜ್ ಗ್ಯಾಪ್ ಇದ್ದರೆ ಪರವಾಗಿಲ್ಲ ಬಿಡಿ’ ಎಂದು ಕಂಗನಾ ಹೇಳಿದ್ದಾರೆ.
ಈ ಮೂಲಕ ಕಂಗನಾ ಸದಾ ಕಾಲ ವಿವಾದ ಮಾಡಿಕೊಳ್ಳುತ್ತಲೇ ಸುದ್ದಿ ಆಗಿದ್ದಾರೆ. 47ರ ಪ್ರಾಯದ ಹೀರೋಗೆ 20ರ ಹರೆಯದ ನಟಿ ಜೋಡಿಯಾದರೆ ಪರವಾಗಿಲ್ಲ ಬಿಡಿ ಎಂದಿದ್ದಾರೆ ಕಂಗನಾ.