ಬೆಂಗಳೂರು,ಡಿಸೆಂಬರ್,27,2024 (www.justkannada.in): ಪರಿಚಿತ ಯುವತಿಗೆ ಪ್ರೀತಿ ಮಾಡುವುದಾಗಿ ಹೇಳಿ ಲೈಂಗಿಕ ದೌರ್ಜನ್ಯ, ಹಲ್ಲೆ ಮಾಡಿದ ಆರೋಪದ ಮೇಲೆ ಕನ್ನಡದ ಕಿರುತರೆ ನಟ ಚರಿತ್ ಬಾಳಪ್ಪ ಎಂಬುವವರನ್ನು ರಾಜರಾಜೇಶ್ವರಿನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಕಿರುತೆರೆ ನಟ ಚರಿತ್ ಬಾಳಪ್ಪ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಕೇಳಿ ಬಂದಿದೆ. ಕನ್ನಡದ ಮುದ್ದುಲಕ್ಷ್ಮೀ ಸೀರಿಯಲ್ ನಲ್ಲಿ ನಟ ಚರಿತ್ ಬಾಳಪ್ಪ ನಟಿಸಿದ್ದಾರೆ. ಇವರ ವಿರುದ್ಧ ಯುವತಿಯೊಬ್ಬಳು ಲೈಂಗಿಕ ದೌರ್ಜನ್ಯ ಆರೋಪ ಮಾಡಿ ದೂರು ನೀಡಿದ್ದು ಈ ಸಂಬಂಧ ದೂರು ನೀಡಿದ ಕಾರಣ, ನಟ ಚರಿತ್ ಬಾಳಪ್ಪ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಚರಿತ್ ಬಾಳಪ್ಪ ಅವರನ್ನು ಆರ್ ಆರ್ ನಗರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಚರಿತ್ ಬಾಳಪ್ಪ ಅವರು ಕನ್ನಡದ ಮುದ್ದುಲಕ್ಷ್ಮೀ ಸೀರಿಯಲ್ ಸೇರಿದಂತೆ ಇತರೆ ಧಾರವಾಹಿಗಳಲ್ಲಿ ನಟಿಸಿದ್ದಾರೆ. ಅಲ್ಲದೇ ತೆಲುಗಿನ ಕಿರುತೆರೆಯಲ್ಲೂ ನಟಿಸಿದ್ದಾರೆ.
ಅಂದಹಾಗೇ ಯುವತಿ ನೀಡಿರುವಂತ ದೂರಿನಲ್ಲಿ ಕಿರುತೆರೆ ನಟ ಚರಿತ್ ಬಾಳಪ್ಪ ಅವರು ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ. ಅಲ್ಲದೇ ಕೊಲೆ ಬೆದರಿಕೆ ಹಾಕಿ, ಹಲ್ಲೆಗೂ ಯತ್ನಿಸಿದ್ದಾರೆ ಎಂದು ಆರೋಪಿಸಿದ್ದಾರೆ.
Key words: Kannada, actor, arrested, sexual assault