ಮೈಸೂರು,ಜು,20,2020(www.justkannada.in): ಕನ್ನಡದ ಹಿರಿಯ ನಟಿ ಬಿ. ಶಾಂತಮ್ಮ ಅವರು ಇಂದು ನಿಧನರಾಗಿದ್ದಾರೆ. ಶಾಂತಮ್ಮ ಅವರಿಗೆ 95 ವರ್ಷ ವಯಸ್ಸಾಗಿತ್ತು.. ಮೈಸೂರಿನ ತಮ್ಮ ಮಗಳ ಮನೆಯಲ್ಲಿ ಶಾಂತಮ್ಮ ವಾಸವಿದ್ದರು. 1956ರಲ್ಲಿ ಚಿತ್ರರಂಗಕ್ಕೆ ಪ್ರವೇಶ ಮಾಡಿದ ಶಾಂತಮ್ಮ ಸುಮಾರು 450ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ.
ಡಾ.ರಾಜ್, ರಜಿನಿಕಾಂತ್, ವಿಷ್ಣುವರ್ಧನ್, ಅಂಬರೀಶ್, ಸೇರಿದಂತೆ ಸ್ಟಾರ್ ನಟರ ಜೊತೆಗೆ ನಟಿಸಿದ್ದು.. ಬಹುತೇಕ ಪೋಷಕ ಪಾತ್ರಗಳಾದ ಅಮ್ಮ, ಅಜ್ಜಿ ಪಾತ್ರಗಳಲ್ಲಿ ಕಾಣಿಸಿಕೊಳ್ತಿದ್ರು. ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ ಭಾಷೆಗಳಲ್ಲಿ ಶಾಂತಮ್ಮ ನಟಿಸಿದ್ದಾರೆ.
ಅಮ್ಮನಿಗೆ 95 ವರ್ಷ ವಯಸ್ಸಾಗಿತ್ತು, ಹೃದಯ ಸಂಬಂಧಿ ಹಾಗೂ ಮರೆವಿನ ಖಾಯಿಲೆ ಇತ್ತು. ಹೀಗಾಗಿ ಬೆಂಗಳೂರಿನಿಂದ ಮೈಸೂರಿಗೆ ಕರೆಸಿಕೊಂಡಿದ್ವಿ. ನೆನ್ನೆ ರಾತ್ರಿ ತುಂಬಾ ಕಫಾ ಕಟ್ಟಿಕೊಂಡಿತ್ತು.. ಆಸ್ಪತ್ರೆಗಳಲ್ಲೂ ಬೆಡ್ ಸಿಕ್ಕಿರಲಿಲ್ಲ. ಚಿಕಿತ್ಸೆ ಸಿಗದೆ ತುಂಬಾ ಸಮಸ್ಯೆ ಆಯಿತು.. ಸರಿಯಾದ ಸಮಯಕ್ಕೆ ಆಸ್ಪತ್ರೆ ಸಿಕ್ಕಿದ್ದರೆ.. ಅಮ್ಮ ಬದುಕುತ್ತಿದ್ದರೇನೋ.. ಸಾಯುವ ಸಂದರ್ಭದಲ್ಲೂ ಅಣ್ಣಾವ್ರ ಫ್ಯಾಮಿಲಿಯನ್ನು ನೆನಪಿಸಿಕೊಳ್ತಿದ್ರು.
ಅಪ್ಪು, ಶಿವಣ್ಣ, ರಾಘಣ್ಣ ಅಂತಾ ಕನವರಿಸ್ತಿದ್ರು.. ಅವರನ್ನು ನೋಡ್ಬೇಕು ಅನ್ನುತ್ತಿದ್ರು.. ಮಗಳಾಗಿ ನನ್ನ ನೆನಪು ಅವರಿಗೆ ಇರಲಿಲ್ಲ.. ಅಣ್ಣಾವ್ರ ಫ್ಯಾಮಿಲಿಯನ್ನು ಅಷ್ಟಾಗಿ ಇಷ್ಟ ಪಡ್ತಿದ್ರು. ರಜಿನಿಕಾಂತ್ ಎಂದರೆ ಇಷ್ಟ ಪಡ್ತಿದ್ರು.. ಲಿಂಗ ಸಿನಿಮಾದ ಶೂಟಿಂಗ್ ಟೈಂನಲ್ಲಿ ಯಾವುದೇ ಗರ್ವವಿಲ್ಲದೇ ರಜಿನಿಕಾಂತ್ ಅವರು ಎಲ್ಲರ ಮುಂದೆ ಅಮ್ಮನ ಕಾಲಿಗೆ ಬಿದ್ದು ಆಶೀರ್ವಾದ ಪಡೆದಿದ್ದರು.. ಇದೆಲ್ಲವನ್ನೂ ಅಮ್ಮ ನೆನಪಿಸಿಕೊಳ್ತಿದ್ರು.. ಕೊರೊನಾ ಟೆಸ್ಟ್ ನಡೆಸಲಾಗಿದೆ.. ಟೆಸ್ಟ್ ರಿಸಲ್ಟ್ ಬಂದ ನಂತರ ಅಂತ್ಯಕ್ರಿಯೆ ಯೋಜನೆ ನಡೆಯಲಿದೆ ಎಂದು ಶಾಂತಮ್ಮ ಪುತ್ರಿ ಮಾಹಿತಿ ನೀಡಿದ್ದಾರೆ.
Key words: Kannada- actress- B. Shanthamma – no more.