ಮೈಸೂರು, ಜೂನ್ 28, 2023 (www.justkannada.in): ಕನ್ನಡ ಡಿಂಡಿಮ ದೂರದ ಜಪಾನ್’ನಲ್ಲೂ ಮೊಳಗಿದೆ!
ಹೌದು. ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಕನ್ನಡ ಭಾಷೆಯನ್ನು ಜಪಾನ್ ಗುರುತಿಸಿದೆ.
ಜಪಾನ್ ಸರಕಾರದ ಅಧಿಕೃತ ವೆಬ್ ಸೈಟ್ ನಲ್ಲಿಕನ್ನಡ ಭಾಷೆಗೂ ಅವಕಾಶ ಕಲ್ಪಿಸಲಾಗಿದೆ. ಸಾಮಾನ್ಯವಾಗಿ ಜಪಾನ್ ನಲ್ಲಿ ವ್ಯವಹಾರಿಕೆ ಭಾಷೆಗೂ ಇಂಗ್ಲಿಷ್ ಬಳಸುವುದಿಲ್ಲ. ಅಂತಹ ದೇಶದ ಸರಕಾರದ ಅಧಿಕೃತ ವೆಬ್ ಸೈಟ್ ನಲ್ಲಿ ಕನ್ನಡ ಭಾಷೆಗೆ ಸ್ಥಾನ ಸಿಕ್ಕಿದೆ.
ಅಲ್ಲಿನ ಸರಕಾರ ಅಂತ್ಯತ ಪ್ರಾಚೀನ ಭಾಷೆಯಾದ ಕನ್ನಡಕ್ಕೆ ಮಣೆ ಹಾಕಿರುವುದು ಕನ್ನಡದ ಹಿರಿಮೆಯನ್ನು ಮತ್ತಷ್ಟು ಹೆಚ್ಚಿಸಿದೆ.
ಜಪಾನ್ ನ ಪೂರ್ವ ಟೋಕಿಯೊದ ವೆಬ್ಸೈಟ್ ನಲ್ಲಿ ( https://ccia-chiba.or.jp/kn/ ) ಕನ್ನಡಕ್ಕೆ ಅವಕಾಶ ನೀಡಿರುವುದು ಕನ್ನಡಿಗರು ಹೆಮ್ಮೆ ಪಡುವ ವಿಷಯವಾಗಿದೆ.