ಬೆಂಗಳೂರು,ಡಿಸೆಂಬರ್,2,2022(www.justkannada.in): ಬೆಳಗಾವಿಯ ಕಾಲೇಜೊಂದರಲ್ಲಿ ಕನ್ನಡ ಬಾವುಟ ಹಾರಿಸಿದ ವಿದ್ಯಾರ್ಥಿ ಮೇಲೆ ಕಿಡಿಗೇಡಿ ಸಹಪಾಠಿಗಳೇ ಹಲ್ಲೆ ನಡೆಸಿದ ವಿಚಾರಕ್ಕೆ ಸಂಬಂಧಿಸಿದಂತೆ ಸರ್ಕಾರಕ್ಕೆ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ನಾರಾಯಣಗೌಡ ಎಚ್ಚರಿಕೆ ನೀಡಿದ್ದಾರೆ.
ಈ ಕುರಿತು ಮಾತನಾಡಿರುವ ನಾರಾಯಣಗೌಡ, ರಾಜ್ಯದಲ್ಲಿ ಬಾವುಟ ಹಾರಿಸಿದರೇ ಹಲ್ಲೆ ಆಗುತ್ತೆ ಎನ್ನುವುದಾದರೇ. ನಾವು ಬೆಳಗಾವಿಗೆ ಹೋಗಿ ಸಾವಿರಾರು ಬಾವುಟ ಹಾರಿಸುತ್ತೇವೆ ಯಾವ ಅಧಿಕಾರಿ ತಡೆಯುತ್ತಾನೋ ನೋಡೋಣ. ನಮ್ಮ ನೆಲದಲ್ಲಿ ಕನ್ನಡ ಬಾವುಟ ಹಾರಿಸಲು ಯಾರ ಅಪ್ಪಣೆ ಬೇಕಿಲ್ಲ.
ಕೂಡಲೇ ಸರ್ಕಾರ ಇಬ್ಬರು ಅಧಿಕಾರಿಗಳನ್ನ ಅಮಾನತು ಮಾಡಬೇಕು. ಕ್ರಮ ಆಗದಿದ್ದರೇ ಕರವೇ ಕಾರ್ಯಕರ್ತರು ಬೆಳಗಾವಿ ಪ್ರವೇಶಿಸುತ್ತಾರೆ ಮುಂದೆ ಆಗುವ ಅನಾಹುತಕ್ಕೆ ಜಿಲ್ಲಾಡಳಿತವೇ ನೇರ ಹೊಣೆ ಎಂದು ಎಚ್ಚರಿಕೆ ನೀಡಿದರು.
Key words: Kannada flag-belagavi-karave- President -Narayana Gowda- warning