ಬೆಂಗಳೂರು ಡಿಸೆಂಬರ್ 23, 2019 (www.justkannada.in): ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅಭಿನಯದ ಬಹುನಿರೀಕ್ಷಿತ ಅವನೇ ಶ್ರೀಮನ್ನಾರಾಯಣ ಸಿನಿಮಾ ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿದೆ.
ಈ ವಾರಂತ್ಯಕ್ಕೆ ಅಂದರೆ ಡಿಸೆಂಬರ್ 27 ರಂದು ಸಿನಿಮಾ ಬಿಡುಗಡೆಯಾಗಲಿದ್ದು, ಚಿತ್ರದ ಆನ್ ಲೈನ್ ಬುಕಿಂಗ್ ಇಂದಿನಿಂದ ಆರಂಭವಾಗಿದೆ. ಮೊದಲ ಶೋ ನೋಡಲು ಬಯಸುವವರು ತಕ್ಷಣವೇ ಆನ್ ಲೈನ್ ಮೂಲಕ ಬುಕಿಂಗ್ ಮಾಡಿಕೊಳ್ಳಬಹುದು.
ಕನ್ನಡದಲ್ಲಿ ಡಿಸೆಂಬರ್ 27 ಕ್ಕೆ ಬಿಡುಗಡೆಯಾಗಲಿದ್ದು, ತೆಲುಗಿನಲ್ಲಿ ಜನವರಿ 1, ತಮಿಳು ಮತ್ತು ಮಲಯಾಳಂನಲ್ಲಿ ಜೂನ್ 3 ರಂದು ಚಿತ್ರ ಬಿಡುಗಡೆಯಾಗಲಿದೆ.