ಬೆಂಗಳೂರು, ಜುಲೈ 08, 2019 (www.justkannada.in): ಡಿ-ಬಾಸ್ ದರ್ಶನ್ ನಟನೆಯ 50 ನೇ ಸಿನಿಮಾ ‘ ಕುರುಕ್ಷೇತ್ರ ‘ ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು, ನೋಡುಗರಿಂದ ಪ್ರಶಂಸೆ ಜತೆಗೆ ಟ್ರೋಲ್’ಗೆ ತುತ್ತಾಗಿದೆ.
ಹೆಸರಿಗೆ ತಕ್ಕಂತೆ ಇದೊಂದು ಐತಿಹಾಸಿಕ ಕಥಾಹಂದರವನ್ನು ಒಳಗೊಂಡಿದ್ದು, ಸುಯೋಧನನ ಪಾತ್ರದಲ್ಲಿ ದರ್ಶನ್ ಅಬ್ಬರಿಸಿದ್ದಾರೆ.
ಭರತ ಖಂಡದ ಪಾಂಡವ ಕೌರವರ ಕಥೆಯನ್ನು 3ಡಿ ತಂತ್ರಜ್ಞಾನದಲ್ಲಿ ಹೇಳಲಾಗುತ್ತಿದ್ದು, ಈ ಚಿತ್ರವು ಬಹು ಕೋಟಿ ವೆಚ್ಚದಲ್ಲಿ ಚಿತ್ರ ನಿರ್ಮಾಣವಾಗಿದೆ ಅಲ್ಲದೇ ಬಹು ಭಾಷೆಯಲ್ಲಿ ಬಿಡುಗಡೆಯಾಗಲಿದೆ.
ಟ್ರೇಲರ್ ಗೆ ಸಾಕಷ್ಟು ಮೆಚ್ಚುಗೆ ಬಂದಿದೆ. ಜತೆಗೆ ಟ್ರೇಲರ್ ನಲ್ಲಿ ಯಾವುದೇ ವಿಶೇಷಗಳಿಲ್ಲ ಎಂದು ಕೆಲವರು ಟ್ರೋಲ್ ಮಾಡುತ್ತಿದ್ದಾರೆ.