ಬೆಂಗಳೂರು, ಜನವರಿ 25, 2019 (www.justkannada.in): ನಿನ್ನೆ ಬಿಡುಗಡೆಯಾಗಿರುವ ನಾನು ಮತ್ತು ಗುಂಡ ಚಿತ್ರ ಸಿನಿ ರಸಿಕರನ್ನು ಸೆಳೆಯುತ್ತಿದೆ.
ಹಾಸ್ಯದ ಮೂಲಕ ಮೋಡಿ ಮಾಡುತ್ತಿದ್ದ ಶಿವರಾಜ್ ಕೆಆರ್ ಪೇಟೆ, ಸಂಯುಕ್ತಾ ಹೊರನಾಡು ಹಾಗೂ ಸಿಂಬಾ ನಟನೆ ಎಲ್ಲರನ್ನೂ ತನ್ನತ್ತ ಸೆಳೆಯುತ್ತಿದೆ.
ಇಲ್ಲಿದೆ ನೋಡಿ ಚಿತ್ರದ ಸ್ಟೋರಿ ಲೈನ್…
ಲವ್ ಮ್ಯಾರೇಜ್ ಆಗಿ ಮಕ್ಕಳಾಗ್ದೇ ಫೀಲಿಂಗಲ್ಲಿರೋ ಲೋಕಲ್ ಆಟೋ ಡ್ರೈವರ್ ಶಂಕ್ರ. ಈತನ ಲೈಫಿನಲ್ಲೊಂದು ಆಚಾನಕ್ ತಿರುವು. ಆವೊಂದು ರಾತ್ರಿ ಫೀಲಿಂಗ್ ನಲ್ಲಿ ಕುಡಿದು ಅಮಲಿನಲ್ಲಿರೋವಾಗ ಆತನ ಬಳಿ ಬರೋ ಅಪರೂಪದ ಅತಿಥಿ ಗುಂಡ (ಶ್ವಾನಮರಿ). ಶಂಕರನ ಅತಿಥ್ಯದ ನಿಯತ್ತಯನ್ನ ಕಾಯೋ ಗುಂಡ. ಆ ನಿಯತ್ತಿನ ಬಾಂಧವ್ಯದಿಂದ ಶಂಕ್ರನ ಮನೆಯಲ್ಲಿ ಬಿರುಗಾಳಿ, ನಡುವೆ ಮನುಷ್ಯ ಪ್ರೀತಿಗಿಂತ ಶ್ವಾನ ಪ್ರೀತಿಯೇ ಶ್ರೇಷ್ಠ ಅನ್ನೋ ಮನುಷ್ಯ ಮತ್ತು ಸಾಕು ಪ್ರಾಣಿಯ ನಡುವಿನ ಬಾಂಧವ್ಯದ ಕಥೆಯೇ ನಾನು ಮತ್ತು ಗುಂಡ!
ಇದು ನೈಜ ಘಟನೆಯನ್ನಾಧರಿಸಿ ಮಾಡಿರೋ ಸಿನಿಮಾ. ಈ ಕಥೆಯಲ್ಲಿ ತಾಜಾತನವಿದೆ. ಸತ್ವವಿದೆ. ಎಲ್ಲಾದಕ್ಕಿಂತ ಹೆಚ್ಚಾಗಿ ಎಮೋಷಿನಲ್ ಅಂಶ ಗಾಢವಾಗಿದೆ.
ನಾನು ಮತ್ತು ಗುಂಡ ಚಿತ್ರದ ಟ್ಯಾಗ್ ಲೈನ್ ಹೇಳುವಂತೆ ನಿಜಕ್ಕೂ ಇದೊಂದು ಮರೆಯಲಾಗದ ಕಥೆ. ಪ್ರಾಣಿ ಪ್ರಿಯರಿಗೆ, ಅದ್ರಲ್ಲೂ ನಾಯಿಯನ್ನ ಸಾಕಿರೋರಿಗೆ ಅದ್ರ ನಿಯತ್ತು ಪ್ರೀತಿ ಗೊತ್ತಿರೋರ ಹೃದಯಸ್ಪರ್ಶಿಸುತ್ತೆ. ನಗುವಿನಿಂದ ಶುರುವಾಗಿ, ಕೌತುಕ ತಿರುವುಗಳೊಂದಿಗೆ, ಭಾವುಕಥೆಯ ಮಡುವಿನಲ್ಲಿ ಮುಳುಗಿ ತೇಲಿಸೋ ಭಾವನಾತ್ಮಕ ಸಿನಿಮಾ ನಾನು ಮತ್ತು ಗುಂಡ.
ಚಿತ್ರ : ನಾನು ಮತ್ತು ಗುಂಡ
ತಾರಾಗಣ: ಶಿವರಾಜ್ ಕೆ.ಆರ್ ಪೇಟೆ, ಸಂಯುಕ್ತ ಹೊರನಾಡು, ಜಿಜಿ ಮತ್ತು ಸಿಂಬಾ ( ಶ್ವಾನ)
ನಿರ್ದೇಶನ: ಶ್ರೀನಿವಾಸ್ ತಿಮ್ಮಯ್ಯ
ಸಂಭಾಷಣೆ: ಶರತ್ ಚಕ್ರವರ್ತಿ
ಸಂಗೀತ :ಕಾರ್ತಿಕ್ ಶರ್ಮಾ
ಛಾಯಾಗ್ರಹಣ: ಚಿದಾನಂದ ಹೆಚ್.ಕೆ
ನಿರ್ಮಾಣ: ರಘು ಹಾಸನ್ (Poem Pictures)