ಮೈಸೂರು,ಅಕ್ಟೋಬರ್,18,2021(www.justkannada.in): ನವೆಂಬರ್ 1 ರ ಕನ್ನಡ ರಾಜ್ಯೋತ್ಸವದೊಳಗೆ ಮೈಸೂರಿನ ಎಲ್ಲಾ ರಸ್ತೆಗಳಲ್ಲೂ ಕನ್ನಡ ನಾಮಫಲಕ ಹಾಕಬೇಕು ಎಂದು ಕನ್ನಡಪರ ಸಂಘಟನೆಯ ನಾಗರೀಕ ಹಿತರಕ್ಷಣಾ ವೇದಿಕೆ ಆಗ್ರಹಿಸಿದೆ.
ಮೈಸೂರು ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕನ್ನಡಪರ ಸಂಘಟನೆಯ ನಾಗರೀಕ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಮಂಜುನಾಥ್, ನ.1 ರೊಳಗೆ ಮೈಸೂರು ಬೆಂಗಳೂರು ರಸ್ತೆ, ಹೊರ ವರ್ತುಲ ರಿಂಗ್ ರಸ್ತೆ, ಸೇರಿ ನಗರ ಭಾಗದಲ್ಲಿರುವ ಎಲ್ಲಾ ರಸ್ತೆಗಳಲ್ಲೂ ಕನ್ನಡ ನಾಮಫಲಕ ಹಾಕಬೇಕು. ಅಂಗಡಿ ಮುಂಗಟ್ಟುಗಳಲ್ಲೂ ಕನ್ನಡ ನಾಮಫಲಕ ಹಾಕಬೇಕು.ಇಲ್ಲವಾದಲ್ಲಿ ಎಲ್ಲಾ ಫಲಕಗಳಿಗೂ ಮಸಿ ಬಳೆಯುತ್ತೇವೆ ಎಂದು ಎಚ್ಚರಿಕೆ ನೀಡಿದರು.
ದಸರಾ ವೇಳೆ ಸಚಿವ ಎಸ್.ಟಿ.ಸೋಮಶೇಖರ್ ಮತ್ತು ಶಾಸಕ ಎಸ್.ಎ ರಾಮದಾಸ್ ಡ್ಯಾನ್ಸ್ ಗೆ ಆಕ್ಷೇಪ.
ದಸರಾ ವೇಳೆ ಸಚಿವ ಎಸ್.ಟಿ.ಸೋಮಶೇಖರ್ ಮತ್ತು ಶಾಸಕ ಎಸ್.ಎ ರಾಮದಾಸ್ ಡ್ಯಾನ್ಸ್ ವಿಚಾರಕ್ಕೆ ಸಂಬಂಧಿಸಿದಂತೆ ಕಿಡಿಕಾರಿದ ಮಂಜುನಾಥ್, ಕೊರೊನಾ ಸಂಕಷ್ಟದ ನಡುವೆ ಸರಳ ದಸರಾ ಆಚರಣೆ ಮಾಡಿರುವುದು ಸ್ವಾಗತಾರ್ಹ. ಆದರೆ ಸಂಕಷ್ಟದ ನಡುವೆಯೂ ಎಸ್.ಟಿ ಸೋಮಶೇಖರ್ ಮತ್ತು ರಾಮದಾಸ್ ಡ್ಯಾನ್ಸ್ ಮಾಡಿರುವುದು ಸರಿಯಲ್ಲ. ಒಂದೆಡೆ ಪೆಟ್ರೋಲ್ ಡೀಸೆಲ್ ಸೇರಿ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದೆ. ಇಂತಹ ಸಂದರ್ಭದಲ್ಲಿ ಯಾವ ಖುಷಿಗೆ ನೀವು ಡ್ಯಾನ್ಸ್ ಮಾಡಿದ್ದೀರಾ.? ಇದು ರಾಜ್ಯದ ಜನತೆಗೆ ಯಾವ ಸಂದೇಶ ಕೊಡುತ್ತದೆ ಎಂಬುದರ ಬಗ್ಗೆ ನೀವು ಉತ್ತರ ನೀಡಬೇಕು ಎಂದು ವಾಗ್ದಾಳಿ ನಡೆಸಿದರು.
Key words: Kannada name-mysore- all roads –kannada rajyotsava- Citizen Welfare Forum