ಬೆಂಗಳೂರು,ಡಿಸೆಂಬರ್,28,2023(www.justkannada.in): ಕನ್ನಡ ನಾಮಫಲಕ ಕಡ್ಡಾಯವಾಗಿ ಹಾಕಬೇಕೆಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಇಂದು ಸಹ ಪ್ರತಿಭಟನೆ ನಡೆಸಲಿದ್ದು ಈ ಹಿನ್ನೆಲೆಯಲ್ಲಿ ಕಟ್ಟೆಚ್ಚರ ವಹಿಸುವಂತೆ ಪೊಲೀಸ್ ಅಧಿಕಾರಿಗಳಿಗೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಕರವೇ ಪ್ರತಿಭಟನೆ ಹಿನ್ನೆಲೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ರನ್ನು ಬೆಂಗಳೂರು ನಗರ ಪೊಲೀಸ್ ಆಯುಕ್ತ ದಯಾನಂದ್ ಭೇಟಿಯಾಗಿ ಚರ್ಚಿಸಿದರು. ಎಡಿಜಿಪಿ ಹಿತೇಂದ್ರ ಅವರು ಸಾಥ್ ನೀಡಿದರು. ಈ ವೇಳೆ ಕಟ್ಟೆಚ್ಚರ ವಹಿಸುವಂತೆ ಡಾ.ಜಿ.ಪರಮೇಶ್ವರ್ ಸೂಚನೆ ನೀಡಿದರು.
ಕನ್ನಡ ನಾಮಫಲಕ ಕಡ್ಡಾಯ ಆಂದೋಲನ ನಡೆಸಿದ್ದ ಕರವೇ ಕಾರ್ಯಕರ್ತರು ವಾಣಿಜ್ಯ ಮಳಿಗೆ ಅಂಗಡಿಗಳಲ್ಲಿ ಹಾಕಲಾಗಿದ್ದ ಇಂಗ್ಲೀಷ್ ನಾಮಫಲಕಗಳ ಮೇಲೆ ದಾಳಿ ನಡೆಸಿ ಕಿತ್ತು ಹಾಕಿದ್ದರು. ಕೆಲವು ಕಡೆ ಕಲ್ಲು ತೂರಾಟ ನಡೆಸಲಾಗಿತ್ತು.
Key words: kannada organization- protest-Home Minister -Parameshwar – police officers