69 ಸಾಧಕರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ: ಪಟ್ಟಿ ಇಲ್ಲಿದೆ ನೋಡಿ

ಬೆಂಗಳೂರು,ಅಕ್ಟೋಬರ್, 30,2024 (www.justkannada.in): 69 ಮಂದಿ ಸಾಧಿಕರಿಗೆ 2024ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ಪ್ರಕಟಿಸಲಾಗಿದೆ.

ಇಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಸುದ್ದಿಗೋಷ್ಠಿ ನಡೆಸಿ ಪ್ರಶಸ್ತಿ ಪ್ರಕಟಿಸಿದ್ದು  ಟಿಬಿ ಡ್ಯಾಂ ದುರಸ್ತಿ ಮಾಡಿಸಿದ್ದ ಕನ್ನಯ್ಯ ನಾಯ್ಡು ಅವರಿಗೆ, ನಟಿ ಹೇಮಾ ಚೌಧರಿಗೆ ಅರುಣ್ ಯೋಗಿರಾಜ್  ಸೇರಿ 69 ಮಂದಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಈ ಬಾರಿ 69 ಸಾಧಕರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಪ್ರತಿಯೊಂದು ಜಿಲ್ಲೆಗೂ ಪ್ರಾತಿನಿದ್ಯ ನೀಡಲಾಗಿದೆ ಹಾಗೂ ಸಾಮಾಜಿಕ ನ್ಯಾಯವನ್ನು ಕಾಪಾಡಿಕೊಳ್ಳಲಾಗಿದೆ. ಈ ವರ್ಷ ಕರ್ನಾಟಕ ನಾಮಕರಣದ ಸುವರ್ಣ ಮಹೋತ್ಸವ ವರ್ಷ ಆಗಿರುವುದರಿಂದ ಇದನ್ನು ವಿಶೇಷ ಸಂದರ್ಭ ಎಂದು ಪರಿಗಣಿಸಿ ಸುವರ್ಣ ಸಂಭ್ರಮ-50ರ ಸುವರ್ಣ ಮಹೋತ್ಸವ ಎಂಬ ವಿಶೇಷ ಪ್ರಶಸ್ತಿಯನ್ನು 50 ಸಾಧಕ ಮಹಿಳೆಯರಿಗೆ ಮತ್ತು 50 ಪುರುಷರಿಗೆ ನೀಡಲಾಗುತ್ತಿದೆ. ಇದರಿಂದ 69 + 100 ಒಟ್ಟು 169 ಪ್ರಶಸ್ತಿಗಳನ್ನು ನೀಡಲಾಗುತ್ತಿದೆ.

ಅರ್ಜಿಯನ್ನು ಹಾಕದ ಎಲೆಮರೆಯ ಕಾಯಿಯಂತೆ, ಸೇವೆ ಸಲ್ಲಿಸಿರುವ 20ಕ್ಕೂ ಹೆಚ್ಚು ಮಂದಿಯನ್ನು ಸಹ ಗುರುತಿಸಿ, ಪ್ರಶಸ್ತಿ ನೀಡಲಾಗುತ್ತಿದೆ.  ಬಯಲಾಟ ಕ್ಷೇತ್ರದಲ್ಲಿ 92 ವರ್ಷದ  ನಾರಾಯಣಪ್ಪ ಶಿಳ್ಳೇಕ್ಯಾತ, ವಿಜಯನಗರ ಜಿಲ್ಲೆ. ಇವರ ಹೆಸರನ್ನು ಸಹ ಪರಿಗಣಿಸಲಾಗಿದೆ. ಜಾನಪದ ಕ್ಷೇತ್ರದಲ್ಲಿ ಅಂದಕಲಾವಿದರಾದ ಶ್ರೀ ನರಸಿಂಹಲು, ಬೀದರ್ ಜಿಲ್ಲೆ ಇವರನ್ನು ಸಹ ಪರಿಗಣಿಸಲಾಗಿದೆ.  ಇದರಲ್ಲಿ 13 ಮಹಿಳೆಯರನ್ನು ಪ್ರಶಸ್ತಿಗೆ ಪರಿಗಣಿಸಲಾಗಿದೆ ಎಂದು ಸಚಿವ ಶಿವರಾಜ್ ತಂಗಡಗಿ ತಿಳಿಸಿದ್ದಾರೆ.

ಪ್ರಶಸ್ತಿಗೆ ಭಾಜನರಾದವರ ಪಟ್ಟಿ ಈ ಕೆಳಕಂಡಂತಿದೆ.

ಜಾನಪದ

ಇಮಾಮಸಾಬ ಎಮ್ ವಲ್ಲೆಪನವರ
ಅಶ್ವ ರಾಮಣ್ಣ
ಕುಮಾರಯ್ಯ
ವೀರಭದ್ರಯ್ಯ
ನರಸಿಂಹಲು (ಅಂಧ ಕಲಾವಿದ)
ಬಸವರಾಜ ಸಂಗಪ್ಪ ಹಾರಿವಾಳ
ಎಸ್ ಜಿ ಲಕ್ಷ್ಮೀದೇವಮ್ಮ
ಪಿಚ್ಚಳ್ಳಿ ಶ್ರೀನಿವಾಸ
ಲೋಕಯ್ಯ ಶೇರ (ಭೂತಾರಾಧನೆ)

ಚಲನಚಿತ್ರ /ಕಿರುತೆರೆ

ಹೇಮಾ ಚೌದರಿ.ಎಂ. ಎಸ್. ನರಸಿಂಹಮೂರ್ತಿ

ಸಂಗೀತ

ಶ್ರೀ ಪಿ ರಾಜಗೋಪಾಲ
ಶ್ರೀ ಎ.ಎನ್ ಸದಾಶಿವಪ್ಪ

ನೃತ್ಯ

ಶ್ರೀಮತಿ ವಿದುಷಿ ಲಲಿತಾ ರಾವ್

ಆಡಳಿತ

ಎಸ್.‌ ವಿ. ರಂಗನಾಥ್‌ ಭಾ.ಆ.ಸೇ (ನಿ)

ವೈದ್ಯಕೀಯ

ಡಾ. ಜಿ.ಬಿ. ಬಿಡಿನಹಾಳ
ಡಾ. ಮೈಸೂರು ಸತ್ಯನಾರಾಯಣ
ಡಾ ಲಕ್ಷ್ಮಣ್ ಹನುಮಪ್ಪ ಬಿದರಿ

ಸಮಾಜಸೇವೆ

ವೀರಸಂಗಯ್ಯ
ಹೀರಾಚಂದ್‍ ವಾಗ್ಮಾರೆ
ಮಲ್ಲಮ್ಮ ಸೂಲಗಿತ್ತಿ
ದಿಲೀಪ್ ಕುಮಾರ್

ಸಂಕೀರ್ಣ

ಹುಲಿಕಲ್ ನಟರಾಜ
ಡಾ|| ಹೆಚ್.ಆರ್.‌ ಸ್ವಾಮಿ
ಆ.ನ ಪ್ರಹ್ಲಾದ ರಾವ್
ಕೆ. ಅಜೀತ್ ಕುಮಾರ್ ರೈ
ಇರ್ಫಾನ್ ರಜಾಕ್ (ವಾಸ್ತುಶಿಲ್ಪ)
ವಿರೂಪಾಕ್ಷ ರಾಮಚಂದ್ರಪ್ಪ ಹಾವನೂರ

ಹೊರದೇಶಹೊರನಾಡು

ಶ್ರೀ ಕನ್ಹಯ್ಯ ನಾಯ್ಡು
ಡಾ. ತುಂಬೆ ಮೊಹಿಯುದ್ದೀನ್‌
ಚಂದ್ರಶೇಖರ ನಾಯಕ್

ಪರಿಸರ

ಆಲ್ಮಿತಾ ಪಟೇಲ್​

ಸಾಹಿತ್ಯ

ಬಿ.ಟಿ.ಲಲಿತಾ ನಾಯಕ್
ಅಲ್ಲಮಪ್ರಭು ಬೆಟ್ಟದೂರು
ಡಾ.ಎಮ್.ವೀರಪ್ಪ ಮೊಯ್ಲಿ
ಹನುಮಂತರಾವ್ ದೊಡ್ಡಮನಿ
ಡಾ.ಬಾಳಾಸಾಹೇಬ್ ಲೋಕಾಪುರ
ಬೈರಮಂಗಲರಾಮೇಗೌಡ
ಡಾ. ಪ್ರಶಾಂತ್ ಮಾಡ್ತಾ

Key words: Kannada Rajyotsava Award, announced, 69 achievers