ಮೈಸೂರು,ಅಕ್ಟೋಬರ್,31,2022(www.justkannada.in): ಎನ್.ಟಿ.ಎಂ.ಎಸ್ ಶಾಲೆ ಮುಚ್ಚಿಸಿ, ರಾಮಕೃಷ್ಣ ಆಶ್ರಮದ ಪರನಿಂತ ಡಿ.ಮಾದೇಗೌಡರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡುತ್ತಿರುವುದು ಖಂಡನೀಯ ಎಂದು ಮೈಸೂರು ಮಾಜಿ ಮೇಯರ್ ಪುರುಷೋತ್ತಮ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಮೈಸೂರಿನ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮಾಜಿ ಮೇಯರ್ ಪುರುಷೋತ್ತಮ್, ಸರ್ಕಾರ ಈ ಕೂಡಲೇ ಮಾದೇಗೌಡರ ಹೆಸರನ್ನು ಕೈ ಬಿಡಬೇಕು. ಇವರು ಕನ್ನಡ ನಾಡು ನುಡಿಗಾಗಿ ಇವರ ಕೊಡುಗೆ ಏನೂ ಇಲ್ಲ. ಈ ಕೂಡಲೇ ಇವರ ಹೆಸರನ್ನು ಕೈ ಬಿಡಬೇಕು ಎಂದು ಆಗ್ರಹಿಸಿದರು.
ಜೊತೆಗೆ ಸ್ವಾತಂತ್ರ್ಯ ಅಮೃತ ಮಹೋತ್ಸವ ಪ್ರಯುಕ್ತ ರಾಮಕೃಷ್ಣ ಆಶ್ರಮವನ್ನೂ ಪ್ರಶಸ್ತಿಗೆ ಆಯ್ಕೆ ಮಾಡಿರುವುದು ಖಂಡನೀಯ. ರಾಮಕೃಷ್ಣ ಆಶ್ರಮದದಲ್ಲಿ ಮಹಿಳಾ ಶಿಕ್ಷಣಕ್ಕೆ ಅವಕಾಶ ಇಲ್ಲ.ಇಲ್ಲಿ ಲಿಂಗ ತಾರತಮ್ಯ ಮಾಡುತ್ತಾರೆ. ಸಾಕಷ್ಟು ಶುಲ್ಕ ಕಟ್ಟಿಸಿಕೊಂಡು ಶಿಕ್ಷಣ ನೀಡುತ್ತಾರೆ. ಇವರೇನು ಸಮಾಜಕ್ಕೆ ಬಿಟ್ಟಿ ಸೇವೆ ಏನೂ ಮಾಡುತ್ತಿಲ್ಲ.ಈ ಆಶ್ರಮದ ಕೊಡುಗೆ ನಾಡಿಗೆ ಏನೂ ಇಲ್ಲ. ಸರ್ಕಾರ ಈ ಆಶ್ರಮಕ್ಕೆ ಪ್ರಶಸ್ತಿ ಘೋಷಣೆ ಹೇಗೆ ಮಾಡಿದ್ದಾರೆ ಅನ್ನೋದು ಗೊತ್ತಾಗುತ್ತಿಲ್ಲ ಎಂದು ಮಾಜಿ ಮೇಯರ್ ಪುರುಷೋತ್ತಮ್ ಅಸಮಾಧಾನ ವ್ಯಕ್ತಪಡಿಸಿದರು.
Key words: Kannada Rajyotsava Award – D. Made Gowda – condemnable- Former Mayor- Purushottam