ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪಟ್ಟಿ ಪ್ರಕಟ : ವಿವಿಧ ಕ್ಷೇತ್ರದ 65 ಮಂದಿ ಸಾಧಕರಿಗೆ ಗೌರವ…  

ಬೆಂಗಳೂರು,ಅಕ್ಟೋಬರ್,28,2020(www.justkannada.in): ಕೊರೋನಾ ಹಿನ್ನೆಲೆ ಈ ಬಾರಿ ಸರಳ ಕನ್ನಡ ರಾಜ್ಯೋತ್ಸವ ಆಚರಣೆಗೆ ಸರ್ಕಾರ ತೀರ್ಮಾನಿಸಿದ್ದು ಈ ನಡುವೆ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ 65 ಮಂದಿಯನ್ನ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

2020ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ಪಟ್ಟಿಯನ್ನು ಬುಧವಾರ ಪ್ರಕಟಿಸಿದ್ದು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 65 ಸಾಧಕರಿಗೆ ಪ್ರಶಸ್ತಿ ನೀಡಲಾಗಿದೆ. ಸಚಿವ ಸಿ.ಟಿ.ರವಿ ಸುದ್ದಿಗೋಷ್ಠಿಯಲ್ಲಿ 2020ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಪಟ್ಟಿಯನ್ನು ಪ್ರಕಟಿಸಿದ್ದಾರೆ. ಸಿಎಂ ಅಧ್ಯಕ್ಷತೆ ಆಯ್ಕೆ ಸಮಿತಿ ಈ ಪಟ್ಟಿಯನ್ನು ಅಂತಿಮಗೊಳಿಸಿದೆ.

ಶಿಕ್ಷಣ ಕ್ಷೇತ್ರದಲ್ಲಿ 6 ಮಂದಿಗೆ, ಸಂಗೀತ ಕ್ಷೇತ್ರದಲ್ಲಿ 5 ಮಂದಿಗೆ, ನ್ಯಾಯಾಂಗ ಕ್ಷೇತ್ರದಲ್ಲಿ ಇಬ್ಬರಿಗೆ ಮಾಧ್ಯಮ ಕ್ಷೇತ್ರದಲ್ಲಿ ಇಬ್ಬರಿಗೆ ಪ್ರಶಸ್ತಿ ಲಭಿಸಿದೆ.

 Kannada Rajyotsava Awards- List -Honors -65 achievers 

ಪ್ರಶಸ್ತಿ ಪಡೆದವರ ಪಟ್ಟಿ ಈ ಕೆಳಕಂಡಂತಿದೆ.

ಸಾಹಿತ್ಯ
1. ಪ್ರೊ.।।ಸಿ.ಪಿ. ಸಿದ್ಧಾಶ್ರಮ, ಧಾರವಾಡ
2. ವಿ. ಮುನಿ ವೆಂಕಟಪ್ಪ, ಕೋಲಾರ
3. ರಾಮಣ್ಣ ಬ್ಯಾಟಿ (ವಿಶೇಷ ಚೇತನ), ಗದಗ
4. ವೆಲೇರಿಯನ್ ಡಿಸೋಜ ( ವಲ್ಲಿವಗ್ಗ ) ದಕ್ಷಿಣ ಕನ್ನಡ
5. ಡಿ.ಎನ್. ಅಕ್ಕಿ ಯಾದಗಿರಿ.

ಸಂಗೀತ
6. ಹಂಬಯ್ಯ ನೂಲಿ, ರಾಯಚೂರು
7.  ಅನಂತ ತೆರೆದಾಳ, ಬೆಳಗಾವಿ
8.  ಬಿ. ವಿ. ಶ್ರೀನಿವಾಸ್, ಬೆಂಗಳೂರು ನಗರ
9.  ಗಿರಿಜಾ ನಾರಾಯಣ, ಬೆಂಗಳೂರು ನಗರ
10.  ಕೆ. ಲಿಂಗಪ್ಪ ಶೇರಿಗಾರ ಕಟೀಲು, ದಕ್ಷಿಣ ಕನ್ನಡ

ನ್ಯಾಯಾಂಗ
11.ಕೆ. ಎನ್. ಭಟ್ , ಬೆಂಗಳೂರು
12.ಎಂ. ಕೆ. ವಿಜಯಕುಮಾರ, ಉಡುಪಿ

ಮಾಧ್ಯಮ
13.  ಸಿ. ಮಹೇಶ್ವರನ್, ಮೈಸೂರು

14.  ಟಿ. ಮಹೇಶ್ (ಈ ಸಂಜೆ ) ಬೆಂಗಳೂರು ನಗರ

ಯೋಗ
15. ಡಾ।। ಎ. ಎಸ್. ಚಂದ್ರಶೇಖರ, ಮೈಸೂರು

ಶಿಕ್ಷಣ
16. ಎಂ. ಎನ್. ಷಡಕ್ಷರಿ, ಚಿಕ್ಕಮಗಳೂರು
17. ಡಾ।।. ಆರ್. ರಾಮಕೃಷ್ಣ, ಚಾಮರಾಜನಗರ
18. ಡಾ।।. ಎಂ.ಜಿ.ಈಶ್ವರಪ್ಪ, ದಾವಣಗೆರೆ
19. ಡಾ।।. ಪುಟ್ಟಸಿದ್ದಯ್ಯ ಮೈಸೂರು
20. ಅಶೋಕ್ ಶೆಟ್ಟರ್, ಬೆಳಗಾವಿ
21. ಡಿ. ಎಸ್. ದಂಡಿನ್, ಗದಗ

ಹೊರನಾಡು ಕನ್ನಡಿಗ
22.  ಕುಸುಮೋಧರದೇರಣ್ಣ ಶೆಟ್ಟಿ, ಕೇಲ್ತಡ್ಕ, ದಕ್ಷಿಣಕನ್ನಡ
23.  ವಿದ್ಯಾ ಸಿಂಹಾಚಾರ್ಯ ಮಾಹುಲಿ, ಮಹಾರಾಷ್ಟ್ರ ಮುಲುಂಡ ಮುಂಬೈ

ಕ್ರೀಡೆ
24.  ಹೆಚ್. ಬಿ. ನಂಜೇಗೌಡ, ತುಮಕೂರು
25.  ಉಷಾರಾಣಿ, ಬೆಂಗಳೂರು ನಗರ

ಸಂಕೀರ್ಣ
26. ಡಾ।। ಕೆ. ವಿ. ರಾಜು, ಕೋಲಾರ
27. ನಂ. ವೆಂಕೋಬರಾವ್, ಹಾಸನ
28. ಡಾ।। ಕೆ. ಎಸ್. ರಾಜಣ್ಣ (ವಿಶೇಷ ಚೇತನ), ಮಂಡ್ಯ
29. ವಿ. ಲಕ್ಷ್ಮಿನಾರಾಯಣ (ನಿರ್ಮಾಣ್ ) ಮಂಡ್ಯ

ಸಂಘ – ಸಂಸ್ಥೆ
30. ಯೂತ್ ಫಾರ್ ಸೇವಾ, ಬೆಂಗಳೂರು ನಗರ
31. ದೇವದಾಸಿ ಸ್ವಾವಲಂಬನ ಕೇಂದ್ರ, ಬಳ್ಳಾರಿ
32. ಬೆಟರ್ ಇಂಡಿಯಾ, ಬೆಂಗಳೂರು ನಗರ
33. ಯುವ ಬ್ರಿಗೇಡ್, ಬೆಂಗಳೂರು ಗ್ರಾಮಾಂತರ
34. ಧರ್ಮೋತ್ತಾನ ಟ್ರಸ್ಟ್, ಧರ್ಮಸ್ಥಳ, ದಕ್ಷಿಣಕನ್ನಡ

ಸಮಾಜ ಸೇವೆ
35.  ಎಂ. ಎಸ್. (ಕುಂದರಗಿ ) ಹೆಗಡೆ, ಉತ್ತರ ಕನ್ನಡ
36.  ಪ್ರೇಮ ಕೋದಂಡರಾಮ ಶ್ರೇಷ್ಠಿ, ಚಿಕ್ಕಮಗಳೂರು
37. ಮಣೆಗಾರ್ ಮೀರಾನ್ ಸಾಹೇಬ್, ಉಡುಪಿ
38. ಮೋಹಿನಿ ಸಿದ್ದೇಗೌಡ, ಚಿಕ್ಕಮಗಳೂರು

ವೈದ್ಯಕೀಯ
39. ಡಾ।।ಅಶೋಕ ಸೊನ್ನದ್, ಬಾಗಲಕೋಟೆ
40. ಡಾ।। ಬಿ. ಎಸ್. ಶ್ರೀನಾಥ, ಶಿವಮೊಗ್ಗ
41. ಡಾ।। ನಾಗರತ್ನ, ಬಳ್ಳಾರಿ
42. ಡಾ।। ವೆಂಕಟಪ್ಪ, ರಾಮನಗರ

ಕೃಷಿ
43.  ಸುರತ್ ಸಿಂಗ್ ಕನೂರ್ ಸಿಂಗ್ ರಾಜಪುತ್, ಬೀದರ್
44. ಎಸ್.ವಿ. ಸುಮಂಗಲಮ್ಮ ವೀರಭದ್ರಪ್ಪ, ಚಿತ್ರದುರ್ಗ
45. ಡಾ।। ಸಿದ್ರಾಮಪ್ಪ ಬಸವಂತರಾವ್ ಪಾಟೀಲ್, ಕಲಬುರಗಿ

ಪರಿಸರ
46. ಅಮರ ನಾರಾಯಣ, ಚಿಕ್ಕಬಳ್ಳಾಪುರ
47. ಎನ್. ಡಿ. ಪಾಟೀಲ್, ವಿಜಯಪುರ

ವಿಜ್ಞಾನ/ ತಂತ್ರಜ್ಞಾನ
48.  ಪ್ರೊ।। ಉಡುಪಿ ಶ್ರೀನಿವಾಸ, ಉಡುಪಿ
49. ಡಾ।। ಚಿಂದಿ ವಾಸುದೇವಪ್ಪ, ಶಿವಮೊಗ್ಗ

ಸಹಕಾರ
50. ಡಾ।।. ಸಿ. ಎನ್. ಮಂಚೇಗೌಡ, ಬೆಂಗಳೂರು ನಗರ

ಬಯಲಾಟ
51. ಕೆಂಪವ್ವ ಹರಿಜನ, ಬೆಳಗಾವಿ
52. ಚೆನ್ನಬಸಪ್ಪ ಬೆಂಡಿಗೇರಿ, ಹಾವೇರಿ

ಯಕ್ಷಗಾನ
53. ಬಂಗಾರ್ ಆಚಾರಿ, ಚಾಮರಾಜನಗರ
54.  ಎಂ. ಕೆ. ರಮೇಶ ಆಚಾರ್ಯ, ಶಿವಮೊಗ್ಗ

ರಂಗಭೂಮಿ
55.  ಅನುಸೂಯಮ್ಮ, ಹಾಸನ
56.  ಹೆಚ್. ಷಡಾಕ್ಷರಪ್ಪ, ದಾವಣಗೆರೆ
57.  ತಿಪ್ಪೇಸ್ವಾಮಿ, ಚಿತ್ರದುರ್ಗ

ಚಲನಚಿತ್ರ
58.  ಬಿ. ಎಸ್. ಬಸವರಾಜ್, ತುಮಕೂರು
59.  ಆಪಾಡಾಂಡ ತಿಮ್ಮಯ್ಯ ರಘು (ಎ.ಟಿ. ರಘು), ಕೊಡಗು

ಚಿತ್ರಕಲೆ
60.  ಎಂ. ಜೆ. ವಾಚೇದ್ ಮಠ, ಧಾರವಾಡ

ಜಾನಪದ
61.  ಗುರುರಾಜ ಹೊಸಕೋಟೆ, ಬಾಗಲಕೋಟೆ
62. ಡಾ।। ಹಂಪನಹಳ್ಳಿ ತಿಮ್ಮೇಗೌಡ, ಹಾಸನ

ಶಿಲ್ಪಕಲೆ
63.  ಎನ್. ಎಸ್. ಜನಾರ್ಧನ ಮೂರ್ತಿ, ಮೈಸೂರು

ನೃತ್ಯ
64. ನಾಟ್ಯ ವಿದುಷಿ ಜ್ಯೋತಿ ಪಟ್ಟಾಭಿರಾಮ್

ಜಾನಪದ/ ತೊಗಲು ಗೊಂಬೆಯಾಟ
65. .ಕೇಶಪ್ಪ ಶಿಳ್ಳೆಕ್ಯಾತರ, ಕೊಪ್ಪಳ

 

Key words: Kannada Rajyotsava Awards- List -Honors -65 achievers