ಮೈಸೂರು,ಮಾರ್ಚ್,23,2021(www.justkannada.in): ಮೈಸೂರಿನಲ್ಲಿ ವಿವೇಕಾನಂದರ ಸ್ಮಾರಕ ಜಾಗದ ವಿವಾದ ಮತ್ತೆ ಶುರುವಾಗಿದ್ದು, ಕನ್ನಡ ಶಾಲೆ ಅಳಿಸಿ, ಸ್ವಾಮಿ ವಿವೇಕಾನಂದರ ಸ್ಮಾರಕ ನಿರ್ಮಾಣ ಮಾಡೋದು ಬೇಡ ಎಂದು ಸರ್ಕಾರಕ್ಕೆ ಇತಿಹಾಸ ತಜ್ಞ ಪ್ರೊ. ಪಿ.ವಿ. ನಂಜರಾಜ ಅರಸ್ ಆಗ್ರಹಿಸಿದ್ದಾರೆ.
ಈ ಕುರಿತು ಇಂದು ಮಾತನಾಡಿರುವ ಇತಿಹಾಸ ತಜ್ಞ ಪ್ರೊ.ಪಿ.ವಿ. ನಂಜರಾಜ ಅರಸ್ , ವಿವೇಕರ ಸ್ಮಾರಕಕ್ಕಾಗಿ ರಾಮಕೃಷ್ಣಾಶ್ರಮದಿಂದ ಗೋಲ್ಮಾಲ್ ನಡೆಯುತ್ತಿದೆ ಎಂದು ಆರೋಪಿಸಿದ್ದಾರೆ.
ಕನ್ನಡ ಶಾಲೆ ಶತಮಾನಕ್ಕೂ ಹಳೆಯದು. ಹೆಣ್ಣು ಮಕ್ಕಳಿಗಾಗಿ 1881ರಲ್ಲಿ ಸ್ಥಾಪಿಸಿದ ಶಾಲೆ. ವಿವೇಕಾನಂದರ ಸ್ಮಾರಕಕ್ಕೆ ನಮ್ಮ ವಿರೋಧವಿಲ್ಲ. ವಿವೇಕಾನಂದರು ಮೈಸೂರಿಗೆ ಬಂದಿದ್ದಾಗ ದಿವಾನ್ ಶೇಷಾದ್ರಿ ಅಯ್ಯರ್ ನಿವಾಸದಲ್ಲಿ ವಾಸ್ತವ್ಯ ಹೂಡಿದ್ರು. ನಿರಂಜನಾಶ್ರಮದಲ್ಲಿ ವಿವೇಕಾನಂದರು ಉಳಿದಿರಲಿಲ್ಲ. ರಾಮಕೃಷ್ಣಾಶ್ರಮದಿಂದ ಪ್ರಕಟಿಸಲ್ಪಟ್ಟ ಪುಸ್ತಕದಲ್ಲೇ ಈ ಸಂಗತಿ ಇದೆ. ಪುಸ್ತಕವನ್ನು ಕೋರ್ಟಿಗೆ ಸಲ್ಲಿಸುತ್ತಿದ್ದಂತೆ ಪುಸ್ತಕದಲ್ಲಿದ್ದ ವಿಚಾರವೇ ನಾಪತ್ತೆಯಾಗಿದೆ. ಹೀಗಾಗಿ ಕನ್ನಡ ಶಾಲೆ ಅಳಿಸಿ, ವಿವೇಕರ ಸ್ಮಾರಕ ನಿರ್ಮಾಣ ಬೇಡ ಎಂದು ಸರ್ಕಾರಕ್ಕೆ ಪಿ.ವಿ. ನಂಜರಾಜ ಅರಸ್ ಆಗ್ರಹಿಸಿದ್ದಾರೆ.
ಎನ್.ಟಿ.ಎಂ.ಎಸ್. ಕನ್ನಡ ಶಾಲೆ ಸಿಎಂ ಯಡಿಯೂರಪ್ಪ ಉಳಿಸುವಂತೆ ಸೂಚಿಸಿದ್ದರು. ಆದರೆ ಸಿಎಂ ಆದೇಶ ಪರಿಪಾಲನೆ ಮಾಡದ ಆತಂಕವನ್ನ ಪಿ.ವಿ. ನಂಜರಾಜ ಅರಸ್ ವ್ಯಕ್ತಪಡಿಸಿದ್ದಾರೆ.
ಕೋರ್ಟ್ ಆದೇಶ ಕಾದು ನೋಡಿ ಮುಂದಿನ ತೀರ್ಮಾನ- ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ…
ವಿವೇಕಾನಂದರ ಸ್ಮಾರಕ ಜಾಗದ ವಿವಾದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, ಕನ್ನಡ ಶಾಲೆ ಉಳಿಸುವಂತೆ ಈ ಹಿಂದೆ ಸಿಎಂ ಸೂಚಿಸಿದ್ದರು. ಕನ್ನಡ ಶಾಲೆ ಜಾಗ ಕೈಬಿಟ್ಟರೆ ಸ್ಮಾರಕಕ್ಕೆ ಜಾಗ ಸಾಕಾಗಲ್ಲ ಅಂತಾ ಆಶ್ರಮದವರ ಅಭಿಪ್ರಾಯ. ಈ ವಿಚಾರದ ಬಗ್ಗೆ ಹೈಕೋರ್ಟ್ನಲ್ಲಿ ವಿಚಾರಣೆ ನಡೆದಿದೆ. ಕೋರ್ಟ್ ಆದೇಶದ ಕಾದು ನೋಡಿ ಮುಂದಿನ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ಸ್ಪಷ್ಟನೆ ನೀಡಿದರು.
Key words: Kannada school- no elaborate-swamy vivekananda- monument- Nanjaraje aras