ಕಲ್ಬುರ್ಗಿ,ಡಿಸೆಂಬರ್,20,2023(www.justkannada.in): ಇಂಡಿಯಾ ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿಯಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೆಸರು ಪ್ರಸ್ತಾಪ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಗ್ರಾಮೀಣಾಭಿವೃದ್ದಿ ಸಚಿವ ಪ್ರಿಯಾಂಕ್ ಖರ್ಗೆ, ಕನ್ನಡಿಗರೊಬ್ಬರು ಪ್ರಧಾನಿಯಾದ್ರೆ ಬೇಡ ಅಂತೀರಾ, ಒಳ್ಳೆಯದು ಅಲ್ವಾ..? ಎಂದು ಹೇಳಿದ್ದಾರೆ.
ಈ ಕುರಿತು ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಪ್ರಿಯಾಂಕ್ ಖರ್ಗೆ, ಕಾಂಗ್ರೆಸ್ 200ರಿಂದ 250 ಸ್ಥಾನಗಳನ್ನ ಗೆಲ್ಲಬೇಕು. ಹೆಚ್ಚಿನ ಸಂಸದರನ್ನ ಗೆಲ್ಲುಸುವುದು ನಮ್ಮ ಮುಂದಿನ ಸವಾಲು. ಕನ್ನಡಿಗರೊಬ್ಬರು ಪ್ರಧಾನಿ ಆದ್ರ ಬೇಡ ಅಂತಿರಾ ಒಳ್ಳೆಯದು. ಆದರೆ ಮೈತ್ರಿಕೂಟದ ಜೊತೆ ಒಗ್ಗೂಡಿ ಹೆಚ್ಚು ಸ್ಥಾನ ಗೆಲ್ಲಬೇಕು. ಇವೆಲ್ಲವೂ ಮುಗಿದ ಮೇಲೆ ಮುಂದಿನ ಪ್ರಶ್ನೆಗಳು ಎಂದು ತಿಳಿಸಿದರು.
ಕಲ್ಬುರ್ಗಿ ಸೆಂಟ್ರಲ್ ಜೈಲ್ ನಲ್ಲಿ ಖೈದಿಗಳಿಗೆ ರಾಜಾತಿಥ್ಯ ಆರೋಪಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಪ್ರಿಯಾಂಕ್ ಖರ್ಗೆ, ಜೈಲಿನಲ್ಲಿ ಆ ರೀತಿ ಏನಾದ್ರೂ ಆಗಿದ್ರೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ನಮ್ಮ ಸರ್ಕಾರ ಇಂತಹದಕ್ಕೆಲ್ಲ ಆಸ್ಪದ ಕೊಡಲ್ಲ. ಕೆಡಿಪಿ ಸಭೆಯಲ್ಲಿ ಅಧಿಕಾರಿಗಳ ಜೊತೆ ಈ ಬಗ್ಗೆ ಚರ್ಚೆ ಮಾಡಲಾಗುತ್ತದೆ. ಸ್ವಲ್ಪ ನಿರ್ಲಕ್ಷ್ಯ ಕಂಡು ಬಂದರೂ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.
Key words: Kannadiga- becomes -Prime Minister- good-Minister- Priyank Kharge.