KANTHRA ಎಫೆಕ್ಟ್ : ಮೈಸೂರಲ್ಲಿ ” ದೈವದ” ಪೈಪೋಟಿ..!

ಮೈಸೂರು, ನವೆಂಬರ್,25,2022(www.justkannada.in):   ನಟ ರಿಷಬ್‌ ಶೆಟ್ಟಿ ಅಭಿನಯದ ‘ಕಾಂತಾರ’ ಸಿನಿಮಾ ರಾಜ್ಯ ದೇಶದಲ್ಲೇ ಅಲ್ಲದೇ ಇಡೀ ವಿಶ್ವದಾದ್ಯಂತ ಸದ್ದು ಮಾಡಿದೆ.  ಚಿತ್ರಮಂದಿರಗಳಲ್ಲಿ ಉತ್ತಮ ಪ್ರದರ್ಶನ ಕಂಡು ಈ ಸಿನಿಮಾ ಈಗ ಓಟಿಟಿಯಲ್ಲೂ ರಿಲೀಸ್ ಆಗಿದೆ. ಈ ಮಧ್ಯೆ ಕಾಂತಾರ ಚಿತ್ರದ ಎಫೆಕ್ಟ್  ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ತಟ್ಟಿದ್ದು ದೈವದ ಹೆಸರಿನಲ್ಲಿ ದೇವಸ್ಥಾನಗಳು ತಲೆ ಎತ್ತಿ ಪೈಪೋಟಿಗಿಳಿದಿವೆ.

ಹೌದು, ಅರಮನೆ ನಗರಿ ಮೈಸೂರಿನ ಕೇರ್ಗಳ್ಳಿಯಲ್ಲಿ ಕೊರಗಜ್ಜ ಮತ್ತು ರಾಜ ದೈವ ಗುಳಿಗ ದೇಗುಲಗಳು ತಲೆ ಎತ್ತಿದ್ದು ಪರಸ್ಪರ ಪೈಪೋಟಿಗೆ ಬಿದ್ದಿವೆ. ಕೊರಗಜ್ಜನ ದೇವಸ್ಥಾನಕ್ಕೆ ಪೈಪೋಟಿ ನೀಡಲು ಅದರ ಸಮೀಪದಲ್ಲೇ  ಕೇವಲ 10 ದಿನಗಳ ಹಿಂದೆ ರಾಜದೈವ ಗುಳಿಗ  ದೇಗುಲವನ್ನ ನಿರ್ಮಾಣ ಮಾಡಲಾಗಿದೆ. ದೇಗುಲಕ್ಕೆ ಕಿಕ್ಕಿರಿದು ಭಕ್ತ ಸಾಗರ ಹರಿದು ಬರುತ್ತಿದ್ದು ಈ ದೇಗುಲದಲ್ಲಿ  ಮೂಲ ಆಚರಣೆಗಳನ್ನ ಬದಿಗೊತ್ತಿ ಪೂಜೆ ಪುನಸ್ಕಾರ ನಡೆಸಲಾಗುತ್ತಿದೆ. ತೆಂಗಿನಕಾಯಿ ,ಕರ್ಪೂರ,‌ ನಿಂಬೆ ಹಣ್ಣು ನೀಡಿ‌ ಪೂಜೆ ಮಾಡಲಾಗುತ್ತಿದೆ.  ಈ ಮೂಲಕ ಮೂಲ ಆಚರಣೆ, ಸಂಪ್ರದಾಯಗಳಿಗೆ ಧಕ್ಕೆ ತರುತ್ತಿರುವ ಆರೋಪ ಕೇಳಿಬಂದಿದೆ.

ಕೊರಗಜ್ಜ ದೇವಸ್ಥಾನದ ಅರ್ಚಕರಿಗೆ ಬ್ಲಾಕ್ ಮೇಲ್‌..

ಕೊರಗಜ್ಜ ದೇವಸ್ಥಾನದ ಅರ್ಚಕ ತೇಜುಕುಮಾರ್ ಅವರಿಗೆ ಬ್ಲಾಕ್ ಮೇಲ್ ಕರೆಗಳು ಬರುತ್ತಿದ್ದು,  ಹಣ ನೀಡದಿದ್ದರೆ ಮಾನಹಾನಿ ಮಾಡುವ ಎಚ್ಚರಿಕೆ ನೀಡುತ್ತಿದ್ದಾರಂತೆ. ಅಲ್ಲದೆ  ಪೊಲೀಸರ ಮೂಲಕವೂ ಕೆಲವರು ಅರ್ಚಕ ತೇಜುಕುಮಾರ್ ಗೆ  ಹೆದರಿಸಲು ಮುಂದಾಗಿದ್ದಾರೆ ಎನ್ನಲಾಗಿದೆ.

ಈ ಕುರಿತು ಮಾತನಾಡಿರುವ ತೇಜುಕುಮಾರ್, ಕಾಂತಾರ ಸಿನಿಮಾದ ಬಳಿಕ ನಾವು ದೈವ ನಿರ್ಮಿಸಿಲ್ಲ. ನಮಗೆ ಹಣ ಮಾಡುವ ಉದ್ದೇಶ ಇಲ್ಲ. ನಮ್ಮ ಕೊರಗಜ್ಜ ದೇವಸ್ಥಾನ ನೋಡಿ ಪಕ್ಕದಲ್ಲಿ ನಿರ್ಮಿಸಿದ್ದಾರೆ. ನಮ್ಮನ್ನ ಕೆಲವರು ಹಣ ನೀಡುವಂತೆ ಪೀಡುತ್ತಿದ್ದಾರೆ. ನೀಡದೆ ಇದ್ದ ಕಾರಣಕ್ಕೆ ತೇಜೋವಧೆ ಮಾಡುತ್ತಿದ್ದಾರೆ ಎಂದು ಅಳಲು ತೋಡಿಕೊಂಡಿದ್ದಾರೆ.

Key words: KANTHRA- EFFECT-mysore- koragajja temple- Competition

ENGLISH SUMMARY…

Kantara Effect: ‘Divine Rivalry’ in Mysuru…!
Mysuru, November 25, 2022 (www.justkannada.in): Actor, Director Rishab Shetty shot to fame with his latest movie Kantara, which is running to packed houses even after 50 days. Not only in Karnataka, this movie made sound across the world. Recently, it was released in the OTT too. In the meantime the movie Kantara appears to has impacted the people of Mysuru largely, as temples in the name of the deities shown in that movie is being built and has started competing!
Two temples of Koragajja and Guliga have been built at Kergalli, in Mysuru recently. The temple of Rajadaiva Guilga was built just 10 days ago, just near the Koragajja temple. People are flocking both the temples. However, the traditional rituals are not being held and pujas as usual are being held. People are arriving to these temples with coconut, camphor, lemon and flowers and are offering pujas. In the meantime, allegations of impairing the original rituals as is done in Dakshin Kannada have unearthed.
Blackmail threat for Koragajja temple priest
The Koragajja temple priest Tejukumar has alleged that he is receiving threatening calls demanding money. It is also alleged that a few people with vested interest are threatening him through the police also.
“We have not built this temple after seeing the Kantara movie. We do not have any intention of making money. They (Guliga temple) have built that temple nearby looking our temple. A few persons are demanding money from us. As we didn’t budge to their demands they are making threatening us,” he alleged.
Keywords: Kantara effect/ Keragalli/ Koragajja/ Guliga temples/ competition