ಅಂತರಾಷ್ಟ್ರೀಯ ಕರಾಟೆ ಪಂದ್ಯಾವಳಿ:  ಮೈಸೂರಿನ ನೈಪುಣ್ಯ ಶಾಲಾ ವಿದ್ಯಾರ್ಥಿಗಳಿಂದ ಸಾಧನೆ

 

ಮೈಸೂರು,ಆಗಸ್ಟ್,26,2024 (www.justkannada.in): ನಗರದ ಕನಕದಾಸನಗರ (ದಟ್ಟಗಳ್ಳಿ)ದ ನೈಪುಣ್ಯ ಸ್ಕೂಲ್‌ ಆಫ್‌ ಎಕ್ಸೆಲೆನ್ಸ್‌ ಶಾಲೆಯ ವಿದ್ಯಾರ್ಥಿಗಳು ಅಂತರಾಷ್ಟ್ರೀಯ ಕರಾಟೆ ಪಂದ್ಯಾವಳಿಯಲ್ಲಿ ಅಮೋಘ ಸಾಧನೆ ಗೈದಿದ್ದಾರೆ.

ಶಿವಮೊಗ್ಗದಲ್ಲಿ ಆಗಸ್ಟ್ 24ರಂದು ಆಯೋಜಿಸಲಾಗಿದ್ದ ಅಂತರಾಷ್ಟೀಯ ಕರಾಟೆ ಪಂದ್ಯಾವಳಿ-2024 ರಲ್ಲಿ ನೈಪುಣ್ಯ ಶಾಲೆಯ 5 ನೇ ತರಗತಿಯ ವಿದ್ಯಾರ್ಥಿನಿ ಹಂಸಿಕಾ ರಾಜಪಾಲ್‌ ಕಾತಾ ವಿಭಾಗದಲ್ಲಿ ಪ್ರಥಮ ಸ್ಥಾನವನ್ನೂ ಮತ್ತು ಕುಮಿತೆ ವಿಭಾಗದಲ್ಲಿ ದ್ವಿತೀಯ ಸ್ಥಾನವನ್ನೂ ಗಳಿಸಿದ್ದಾರೆ ಹಾಗೂ 3 ನೇ ತರಗತಿಯ ವಿದ್ಯಾರ್ಥಿ ರಿತುಲ್‌ ರಾಜಪಾಲ್‌ ಕಾತಾ ಎಭಾಗದಲ್ಲಿ ಪ್ರಥಮ ಸ್ಥಾನವನ್ನು ಗಳಿಸಿದ್ದಾರೆ.

ಪಠ್ಯಕ್ರಮದೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲಿಯೂ ಭಾಗವಹಿಸಿ, ಸಾಧನೆ ಮಾಡಿರುವ ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿದ ನೈಪುಣ್ಯ ಸಂಸ್ಥೆಯ ಅಧ್ಯಕ್ಷ. ಆರ್‌. ರಘು ಅವರು,  ಈ ವಿದ್ಯಾರ್ಥಿಗಳನ್ನು ಮಾದರಿಯಾಗಿ ಇರಿಸಿಕೊಂಡು ಉಳಿದ ವಿದ್ಯಾರ್ಥಿಗಳೂ ತಮ್ಮ ಆಸಕ್ತಿ ವಲಯದ ಚಟುವಟಿಕೆಗಳಲ್ಲಿ ಸಾಧನೆ ತೋರಲು ಪರಿಶ್ರಮಿಸುವಂತಾಗಲಿ ಎಂದು ಹಾರೈಸಿದ್ದಾರೆ.

Key words:  Karate Tournament,  mysore, nyapunya School, Students