ಮಾನ ಮರ್ಯಾದೆ ಇದ್ರೆ ಆರೋಪಿಗಳ ವಿರುದ್ದ ಗೂಂಡಾ ಕಾಯ್ದೆ ಹಾಕಿ- ಕರವೇ ರಾಜ್ಯಾಧ್ಯಕ್ಷ ನಾರಾಯಣಗೌಡ

ಬೆಳಗಾವಿ,25,2025 (www.justkannada.in):  ಕನ್ನಡ ಮಾತನಾಡು ಎಂದಿದ್ದಕ್ಕೆ ಕಂಡಕ್ಟರ್ ಮಹದೇವಪ್ಪ ಮೇಲೆ ಹಲ್ಲೆ ಮಾಡಿದ ಆರೋಪಿಗಳ ವಿರುದ್ದ ಗೂಂಡಾ ಕಾಯ್ದೆ ಹಾಕಿ ಎಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ನಾರಾಯಣಗೌಡ ಆಗ್ರಹಿಸಿದರು.

ಇಂದು ಆಸ್ಪತ್ರೆಗೆ ಭೇಟಿ ನೀಡಿ ಕಂಡಕ್ಟರ್ ಮಹದೇವಪ್ಪ ಅವರ ಆರೋಗ್ಯ ವಿಚಾರಿಸಿ ಬಳಿಕ ಮಾತನಾಡಿದ ನಾರಾಯಣಗೌಡರು,  ಹಲ್ಲೆಗೈದ ಆರೋಪಿಗಳನ್ನ ಕರ್ನಾಟಕದಿಂದ ಗಡಿಪಾರು ಮಾಡಬೇಕು. ಕಂಡಕ್ಟರ್ ಮಹದೇವಪ್ಪ ಬೆಂಗಳೂರಿಗೆ ಬಂದ್ರೆ ಚಿಕಿತ್ಸೆ ಕೊಡಿಸುತ್ತೇನೆ.  ಸಂಪೂರ್ಣ ಚಿಕಿತ್ಸಾ ವೆಚ್ಚ ಭರಿಸುತ್ತೇನೆ ಎಂದರು.

ಎಂಇಎಸ್ ಬಗ್ಗು ಬಡಿಯುವುದು ಸುಲಭ.  ಕಾನೂನು ಕೈಗೆತ್ತಿಕೊಳ್ಳಬಾರದು ಅಂತಾ ಸುಮ್ಮನಿದ್ದೇವೆ. ಮರಾಠಿಗರು ಇದ್ರೂ ಅಂತಾ ಹೇಳಬೇಕು ಹಾಗೆ ಮಾಡ್ತೇವೆ. ಭಯೋತ್ಪಾದಕರಿಗೂ ಶಿವಸೇನೆ ಗೂಂಡಾಗಳಿಗೂ ವ್ಯತ್ಯಾಸವಿಲ್ಲ ಸಿಪಿಐ ವರ್ಗಾವಣೆ ಮಾಡಿದ್ರೆ ಸಾಲಲ್ಲ  ಸಸ್ಪೆಂಡ್ ಮಾಡಬೇಕು ಎಂದು ನಾರಾಯಣಗೌಡರು ಆಗ್ರಹಿಸಿದರು.

ಡಿಸಿ ಮರಾಠಿಯಲ್ಲಿ ಪತ್ರ ಕೊಡುತ್ತೇನೆ ಎನ್ನುತ್ತಾರೆ.  ಕನ್ನಡದಲ್ಲಿ ಪತ್ರ ಕೊಡಬೇಕು ಇಲ್ಲದಿದ್ದರೇ ಕರ್ನಾಟಕ ಬಿಟ್ಟು ಹೋಗಲಿ ಎಂದು ಕರವೇ ರಾಜ್ಯಾಧ್ಯಕ್ಷ ನಾರಾಯಣಗೌಡ ಕಿಡಿಕಾರಿದರು.

Key words:  Conductor, Goonda Act, against, accused, Karave, Narayana Gowda