ಬೆಂಗಳೂರು,ಅಕ್ಟೋಬರ್,29,2024 (www.justkannada.in): ಕರ್ನಾಟಕ ವಿಧಾನಸಭೆ ಸಚಿವಾಲಯದಲ್ಲಿ ಮಾತೃವೃಂದದಲ್ಲಿನ ವಿವಿಧ ವೃಂದಗಳ ಹುದ್ದೆಗಳನ್ನ ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಸರ್ಕಾರ ಮುಂದಾಗಿದೆ.
ಈ ಕುರಿತು ವಿಧಾನಸಭೆ ಸಭಾಧ್ಯಕ್ಷರ ಅನುಸಾರ ವಿಧಾನಸಭೆ ಸಚಿವಾಲಯದ ಕಾರ್ಯದರ್ಶಿ ಎಂ.ಕೆ ವಿಶಾಲಾಕ್ಷಿ ಅವರು ಆದೇಶ ಹೊರಡಿಸಿದ್ದಾರೆ.
ವಿಧಾನಸಭೆ ಸಚಿವಾಲಯದ ನೇಮಕಾತಿ ಮತ್ತು ಸೇವಾಷರತ್ತುಗಳು, ನಿಯಮಗಳು 2003ರ ನಿಯಮ 6ರ ಅವಕಾಶದಡಿ ಕರ್ನಾಟಕ ವಿಧಾನ ಸಭೆ ಸಚಿವಾಲಯದ ಕೆಳಕಂಡ ವಿವಿಧ ವೃಂದಗಳ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಹುದ್ದೆಗಳ ವಿವರಗಳು ಈ ಕೆಳಕಂಡಂತಿದೆ. ವರದಿಗಾರರು, ಕಂಪ್ಯೂಟರ್ ಆಪರೇಟರ್, ದಲಾಯತ್, ಸ್ವೀಪರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನವೆಂಬರ್ 25 ಕಡೇ ದಿನವಾಗಿದೆ.
- ಹುದ್ದೆಯ ಹೆಸರು: ವರದಿಗಾರರು.
ಹುದ್ದೆಗಳ ಸಂಖ್ಯೆ: .. ಕನ್ನಡ ವರದಿಗಾರರು – 03 ಹುದ್ದೆಗಳು.
ಆಂಗ್ಲ ವರದಿಗಾರರು – 01 ಹುದ್ದೆ
ಹುದ್ದೆ ಹೆಸರು ಹುದ್ದೆಗಳ ಸಂಖ್ಯೆ
ಕಂಪ್ಯೂಟರ್ ಆಪರೇಟರ್- 03 ಹುದ್ದೆಗಳು
ದಲಾಯತ್- 16 ಹುದ್ದೆಗಳು
ಸ್ವೀಪರ್ 01 ಹುದ್ದೆ
ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 25-11-2024
ಈ ಸರ್ಕಾರಿ ಹುದ್ದೆಗಳಲ್ಲಿ ಆಸಕ್ತಿ ಇರುವವರು ನವೆಂಬರ್ 25 ರೊಳಗೆ ಆಫ್‌ಲೈನ್ ಮಾದರಿಯಲ್ಲಿ ಅರ್ಜಿ ಸಲ್ಲಿಸಬೇಕು.
ವಯೋಮಿತಿ
ಅರ್ಜಿ ಸ್ವೀಕರಿಸಲು ನಿಗದಿತ ಕೊನೆ ದಿನಾಂಕಕ್ಕೆ ಕನಿಷ್ಠ 18 ವರ್ಷ ಆಗಿರಬೇಕು. ಗರಿಷ್ಠ ವಯಸ್ಸಿನ ಮಿತಿಯನ್ನು ವರ್ಗಾವಾರು ಕೆಳಗಿನಂತೆ ತಿಳಿಸಲಾಗಿದೆ.
ಸಾಮಾನ್ಯ ಅರ್ಹತೆಯ ಅಭ್ಯರ್ಥಿಗಳಿಗೆ 35 ವರ್ಷ.
ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ 38 ವರ್ಷ.
ಎಸ್‌ಸಿ / ಎಸ್‌ಟಿ / ಪ್ರವರ್ಗ-1 ಅಭ್ಯರ್ಥಿಗಳಿಗೆ 40 ವರ್ಷ
ಅರ್ಜಿ ಸಲ್ಲಿಸಬೇಕಾದ ವಿಳಾಸ- ಕಾರ್ಯದರ್ಶಿ, ಕರ್ನಾಟಕ ವಿಧಾನ ಸಭೆ ಸಚಿವಾಲಯ, ಮೊದಲ ಮಹಡಿ,ವಿಧಾನಸೌಧ, ಬೆಂಗಳೂರು-560 001.
ಹುದ್ದೆವಾರು ವಿದ್ಯಾರ್ಹತೆ ವಿವರ ಕೆಳಗಿನಂತಿದೆ.
ಕನ್ನಡ ವರದಿಗಾರರು : ಅಂಗೀಕೃತ ವಿಶ್ವವಿದ್ಯಾಲಯದಿಂದ ಪದವಿ ಹೊಂದಿರಬೇಕು.
ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯವರು ನಡೆಸಿರುವ ಪ್ರಥಮ ದರ್ಜೆಯ ಕನ್ನಡ ಶೀಘ್ರಲಿಪಿ ಹಾಗೂ ಪ್ರೌಢ ದರ್ಜೆಯ ಕನ್ನಡ ಬೆರಳಚ್ಚು ಪರೀಕ್ಷೆಗಳಲ್ಲಿ ಉತ್ತಿರ್ಣರಾಗಿರಬೇಕು. ಹಿಂದಿ ಪ್ರಥಮ ದರ್ಜೆಯ ಶೀಘ್ರಲಿಪಿಯಲ್ಲಿ ಉತ್ತೀರ್ಣರಾದವರಿಗೆ ಆದ್ಯತೆ ನೀಡಲಾಗುವುದು.
ಇಂಗ್ಲೀಷ್ ವರದಿಗಾರರು: ಅಂಗೀಕೃತ ವಿಶ್ವವಿದ್ಯಾಲಯದಿಂದ ಪದವಿ ಹೊಂದಿರಬೇಕು.
ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯವರು ನಡೆಸಿರುವ ಪ್ರಥಮ ದರ್ಜೆಯ ಕನ್ನಡ ಶೀಘ್ರಲಿಪಿ ಹಾಗೂ ಪ್ರೌಢ ದರ್ಜೆಯ ಕನ್ನಡ ಬೆರಳಚ್ಚು ಪರೀಕ್ಷೆಗಳಲ್ಲಿ ಉತ್ತಿರ್ಣರಾಗಿರಬೇಕು. ಹಿಂದಿ ಪ್ರಥಮ ದರ್ಜೆಯ ಶೀಘ್ರಲಿಪಿಯಲ್ಲಿ ಉತ್ತೀರ್ಣರಾದವರಿಗೆ ಆದ್ಯತೆ ನೀಡಲಾಗುವುದು.
ಕಂಪ್ಯೂಟರ್ ಆಪರೇಟರ್:
ಅಂಗೀಕೃತ ವಿಶ್ವವಿದ್ಯಾಲಯದಿಂದ ಕಂಪ್ಯೂಟರ್ ಅಪ್ಲಿಕೇಶನ್ ನಲ್ಲಿ ಸ್ನಾತಕ ಪದವಿ (ಬಿ.ಸಿ.ಎ.) ಅಥವಾ ಕಂಪ್ಯೂಟರ್ ಸೈನ್ಸ್ ಅಥವಾ ಎಲೆಕ್ಟ್ರಾನಿಕ್ಸ್ ನಲ್ಲಿ ಬಿ.ಎಸ್ಸಿ. ಪದವಿ ಹೊಂದಿರಬೇಕು.
ದಲಾಯತ್ ಹುದ್ದೆಗೆ ವಿದ್ಯಾರ್ಹತೆ
7ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು.
ಸ್ವೀಪರ್ ಹುದ್ದೆಗೆ ವಿದ್ಯಾರ್ಹತೆ
4ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು.
ಅರ್ಜಿ ಶುಲ್ಕ ರೂ.500.
Key words: Karnataka Assembly, Ministry Recruitment, Various Posts, Apply