ಬೆಂಗಳೂರು,ಮಾರ್ಚ್,19,2025 (www.justkannada.in): ಎಂಇಎಸ್ , ಶಿವಸೇನೆ ನಿಷೇಧಕ್ಕೆ ಆಗ್ರಹಿಸಿ ಕನ್ನಡಪರ ಸಂಘಟನೆಗಳು ಕರೆ ನೀಡಿರುವ ಮಾರ್ಚ್ 22ರ ಬಂದ್ ಗೆ ಬೆಂಬಲ ಇಲ್ಲ ಎಂದು ಕಾರ್ಮಿಕ ಸಂಘದ ಮುಖಂಡ ಅನಂತ ಸುಬ್ಬುರಾವ್ ತಿಳಿಸಿದ್ದಾರೆ.
ಈ ಕುರಿತು ಮಾತನಾಡಿರುವ ಅನಂತ ಸುಬ್ಬುರಾವ್ ಬಂದ್ ದಿನವೂ ಸರ್ಕಾರಿ ಬಸ್ ಸಂಚಾರ ಇರಲಿದೆ ಬಿಎಂಟಿಸಿ, ಕೆಎಸ್ ಆರ್ ಟಿಸಿ, ಕಲ್ಯಾಣಕರ್ನಾಟಕ ಭಾಗದ ಸಾರಿಗೆ, ವಾಯುವ್ಯ ಸಾರಿಗೆ ಬಸ್ ಸಂಚಾರ ಇರಲಿದೆ ಎಂದಿದ್ದಾರೆ,
ಸಾರಿಗೆ ನೌಕರರು ಶನಿವಾರ ಕರ್ತವ್ಯಕ್ಕೆ ಹಾಜರಾಗಲಿದ್ದಾರೆ. ಬಂದ್ ದಿನವೂ ಸರ್ಕಾರಿ ಬಸ್ ಸೇವೆ ಇರಲಿದೆ. ಬಂದ್ ಗೆ ಬೆಂಬಲವಿಲ್ಲ ಎಂದಿದ್ದಾರೆ.
Key words: Karnataka bandh, March 22, Government bus