ಬೆಂಗಳೂರು,ಡಿಸೆಂಬರ್,5,2020(www.justkannada.in): ಮರಾಠ ಅಭಿವೃದ್ದಿ ನಿಗಮ ರಚನೆ ಮಾಡಿ ಅನುದಾನ ನೀಡಿರುವ ರಾಜ್ಯ ಸರ್ಕಾರದ ವಿರುದ್ಧ ಕರ್ನಾಟಕ ಬಂದ್ ಗೆ ಕರೆ ನೀಡಿ ಕನ್ನಡ ಪರ ಸಂಘಟನೆಗಳ ಇಂದು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಈ ಮಧ್ಯೆ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗುತ್ತಿದೆ. ಈ ವೇಳೆ ಮಾಧ್ಯಗಳ ಜತೆ ಮಾತನಾಡಿದ ವಾಟಾಳ್ ನಾಗರಾಜ್, 25 ಸಾವಿರ ಕನ್ನಡಪರ ಸಂಘಟನೆ ಕಾರ್ಯಕರ್ತರನ್ನ ಬಂಧಿಸಿದ್ದಾರೆ. ಪೊಲೀಸರು ಮಫ್ತಿಯಲ್ಲಿ ಬಂದು ಬಂಧಿಸಿದ್ದಾರೆ. ಆದರೂ ಬಂದ್ ಯಶಸ್ವಿಯಾಗಿಸಿದ್ದೇವೆ ಎಂದರು.
ರಾಜ್ಯಕ್ಕೆ ಸಿಎಂ ಬಿಎಸ್ ಯಡಿಯೂರಪ್ಪ ಮೋಸಗಾರ. ಕನ್ನಡಿಗರನ್ನ ತುಳಿದು ಮರಾಠಿ, ತಮಿಳು, ತೆಲುಗುನವರಿಗೆ ಪಟ್ಟ ಕಟ್ಟುತ್ತಿದ್ದಾರೆ. ಬಿಎಸ್ ವೈ ಮಾಡುತ್ತಿರುವ ಮೋಸದಿಂದ ನೋವಾಗಿದೆ. ಜೈಲುಭರೋ ಚಳವಳಿಗಾಗಿ ಬುಧವಾರ ಸಭೆ ಕರೆದಿದ್ದೇವೆ. ಇಂದಿನ ಬಂದ್ ಯಶಸ್ವಿಯಾಗಿದೆ ಎಂದರು.
Key words: Karnataka bandh-protest-kannada organization-vatal nagaraj